For Quick Alerts
  ALLOW NOTIFICATIONS  
  For Daily Alerts

  2 ತಿಂಗಳಲ್ಲಿ ಹಸೆಮಣೆ ಏರುತ್ತಾರಾ ಪ್ರಭಾಸ್? ಡಾರ್ಲಿಂಗ್ ಮದುವೆ ಸುದ್ದಿ ಲೀಕ್ ಮಾಡಿದ ಚರಣ್!

  |

  ವಯಸ್ಸು 40 ದಾಟಿದ್ರು ನಟ ಪ್ರಭಾಸ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಇದೇ ಪ್ರಶ್ನೆಯನ್ನು ಪದೇ ಪದೇ ಅಭಿಮಾನಿಗಳು ಕೂಡ ಕೇಳುತ್ತಿರುತ್ತಾರೆ. ಸದ್ಯ ಪ್ರಭಾಸ್ ಮದುವೆ ಸುದ್ದಿಯನ್ನು ನಟ ರಾಮ್‌ಚರಣ್ ತೇಜಾ ಲೀಕ್ ಮಾಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

  ಬಾಲಕೃಷ್ಣ ಅಹಾ ಓಟಿಟಿ ಫ್ಲಾಟ್‌ಫಾರ್ಮ್‌ಗಾಗಿ 'ಅನ್‌ಸ್ಟಾಪಬಲ್ - 2' ಟಾಕ್‌ ಶೋ ನಡೆಸಿಕೊಡುತ್ತಿದ್ದಾರೆ. ಈ ವಾರ ಶೋಗೆ ನಟ ಪ್ರಭಾಸ್ ಹಾಗೂ ಗೋಪಿಚಂದ್ ಹಾಜರಾಗಿದ್ದಾರೆ. ಈಗಾಗಲೇ ಶೋ ಶೂಟಿಂಗ್ ಮುಗಿದಿದ್ದು, ಪ್ರೋಮೊ ಕೂಡ ರಿಲೀಸ್ ಆಗಿದೆ. ಶೋನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಪ್ರಭಾಸ್ ಬಳಿ ಬಾಲಯ್ಯ ಉತ್ತರ ಪಡೆದುಕೊಂಡಿದ್ದಾರೆ. ಅದರಲ್ಲೂ ಮದುವೆ ಬಗ್ಗೆ ಪ್ರಶ್ನೆಯೂ ತೂರಿ ಬಂದಿದೆ. ಈ ಪ್ರಶ್ನೆಗೆ ಫೋನ್‌ ಕಾಲ್‌ನಲ್ಲಿದ್ದ ರಾಮ್‌ಚರಣ್ ಸುಳಿವು ಕೊಟ್ಟಿದ್ದಾರೆ ಎನ್ನಲಾಗ್ತಿದೆ.

  'ಸಲಾರ್ ನೋಡಿ ಮಾತೇ ಹೊರಡುತ್ತಿಲ್ಲ.. ಪ್ರಭಾಸ್ ಮತ್ತೆ ತಿರುಗೇಟು ಕೊಡ್ತಾರೆ' ಎಂದ ವಿಮರ್ಶಕ!'ಸಲಾರ್ ನೋಡಿ ಮಾತೇ ಹೊರಡುತ್ತಿಲ್ಲ.. ಪ್ರಭಾಸ್ ಮತ್ತೆ ತಿರುಗೇಟು ಕೊಡ್ತಾರೆ' ಎಂದ ವಿಮರ್ಶಕ!

  ಪ್ರಭಾಸ್ ಹಾಗೂ ಗೋಪಿಚಂದ್ ಆತ್ಮೀಯ ಸ್ನೇಹಿತರು. ಹಾಗಾಗಿ ಈ ಬಾರಿ ಅವರಿಬ್ಬರನ್ನು ಶೋಗೆ ಆಹ್ವಾನಿಸಲಾಗಿದೆ. ಪ್ಯಾನ್ ಇಂಡಿಯಾ ಸೂಪರ್‌ ಸ್ಟಾರ್‌ ಪ್ರಭಾಸ್‌ನ ಮತ್ತೊಬ್ಬ ಸ್ಟಾರ್ ಬಾಲಯ್ಯ ಸಂದರ್ಶನ ಮಾಡಿರುವುದು ವಿಶೇಷ. ಪ್ರಭಾಸ್ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ವಾರದ ಎಪಿಸೋಡ್ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

  ರೆಬೆಲ್ ಟಾಕ್ ಶೋ

  ರೆಬೆಲ್ ಟಾಕ್ ಶೋ

  'ಅನ್‌ಸ್ಟಾಪಬಲ್' ಶೋ ಸೂಪರ್ ಹಿಟ್ ಆಗಿತ್ತು. ಬಾಲಯ್ಯ ತಮ್ಮದೇ ಸ್ಟೈಲ್‌ನಲ್ಲಿ ಅತಿಥಿಗಳನ್ನು ಮಾತನಾಡಿಸಿ ಚಮಕ್ ಕೊಟ್ಟು ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹೊರ ತೆಗೆಯುತ್ತಿದ್ದರು. ಫಸ್ಟ್ ಸೀಸನ್ ಹಿಟ್ ನಂತರ ಸೆಕೆಂಡ್ ಸೀಸನ್ ಶುರುವಾಗಿದೆ. ಈಗಾಗಲೇ 4 ಎಪಿಸೋಡ್ ಕಂಪ್ಲೀಟ್ ಆಗಿದ್ದು, 5ನೇ ಎಪಿಸೋಡ್‌ನಲ್ಲಿ ಪ್ರಭಾಸ್ ಸ್ಪೆಷಲ್ ಅಟ್ರಾಕ್ಷನ್ ಆಗಿದ್ದಾರೆ. ಶೋನಲ್ಲಿ ಯಂಗ್ ರೆಬಲ್ ಸ್ಟಾರ್ ಲುಕ್, ಸ್ಟೈಲ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಣ್ಣ ಪ್ರೋಮೊ ಝಲಕ್ ಕೂಡ ರಿವೀಲ್ ಆಗಿದೆ.

  2 ತಿಂಗಳಲ್ಲಿ ಪ್ರಭಾಸ್ ಮದುವೆ

  2 ತಿಂಗಳಲ್ಲಿ ಪ್ರಭಾಸ್ ಮದುವೆ

  ಸದ್ಯ 'ಅನ್‌ಸ್ಟಾಪಬಲ್' -2 ಪ್ರಭಾಸ್ ಎಪಿಸೋಡ್ ಪ್ರೋಮೊ ರಿಲೀಸ್ ಆಗಿದೆ. ಕೆಲವೊಮ್ಮೆ ಶೋನಲ್ಲಿ ಅತಿಥಿಗಳ ಆತ್ಮೀಯರಿಗೆ ಫೋನ್ ಮಾಡಿ ಬಾಲಯ್ಯ ಮಾತನಾಡುತ್ತಾರೆ. ಅದೇ ರೀತಿ ಪ್ರಭಾಸ್ ಎಪಿಸೋಡ್‌ನಲ್ಲಿ ನಟ ರಾಮ್‌ಚರಣ್‌ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಪ್ರಭಾಸ್ ಸೀಕ್ರೆಟ್ ಹೇಳುವಂತೆ ಚರಣ್ ಬಳಿ ಬಾಲಯ್ಯ ಕೇಳಿದ್ದು, ಇನ್ನೆರಡು ತಿಂಗಳಲ್ಲಿ ಪ್ರಭಾಸ್ ಮದುವೆ ಎಂದು ರಾಮ್‌ಚರಣ್ ಹೇಳಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪ್ರೋಮೊದಲ್ಲಿ "ಏನ್ ಹೇಳ್ತಿದ್ದಿಯಾ ಡಾರ್ಲಿಂಗ್?" ಪ್ರಭಾಸ್ ಕೇಳಿರುವುದನ್ನು ನೋಡಬಹುದು ಎನ್ನುತ್ತಿದ್ದಾರೆ. ಇದು ಎಷ್ಟು ನಿಜ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

  ಡಾರ್ಲಿಂಗ್ ಮದುವೆ ಯಾವಾಗ?

  ಡಾರ್ಲಿಂಗ್ ಮದುವೆ ಯಾವಾಗ?

  ಪ್ರಭಾಸ್ ಮದುವೆ ಯಾವಾಗ? ಎಂದು ಕೇಳಿ ಕೇಳಿ ಅಭಿಮಾನಿಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ. ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಇತ್ತೀಚೆಗೆ ನಟಿ ಕೃತಿ ಸನೂನ್ ಜೊತೆ ಡಾರ್ಲಿಂಗ್ ಡೇಟ್ ಮಾಡುತ್ತಿದ್ಧಾರೆ ಎನ್ನುವ ಗಾಳಿಸುದ್ದಿ ಹರಿದಾಡಿತ್ತು. ಈ ಹಿಂದೆ ಬಾಹುಬಲಿ- 2 ರಿಲೀಸ್ ನಂತರ ಮದುವೆ ಎಂದು ಪ್ರಭಾಸ್ ಹೇಳಿದ್ದರು. ಆದರೆ ಬಾಹುಲಿ-2 ಬಂದೋಗಿ 5 ವರ್ಷ ಕಳೆದರೂ ಮದುವೆ ಬಗ್ಗೆ ಸುಳಿವು ಸಿಗುತ್ತಿಲ್ಲ.

  ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟನೆ

  ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟನೆ

  ಇದೇ ಶೋನಲ್ಲಿ ಪ್ರಭಾಸ್ ಮುಂದಿನ ವರ್ಷ ಮದುವೆ ಆಗುತ್ತಾನೆ ಎಂದು ಗೋಪಿಚಂದ್ ಹೇಳಿದ್ದಾರಂತೆ. 'ಬಾಹುಬಲಿ' ಸರಣಿ ಸಿನಿಮಾಗಳಿಂದ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು. ಆ ನಂತರ ಡಾರ್ಲಿಂಗ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಸಾಹೋ, ರಾಧೇಶ್ಯಾಮ್ ನಂತರ ಈಗ 'ಸಲಾರ್', 'ಆದಿಪುರುಷ್', ಪ್ರಾಜೆಕ್ಟ್- K ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳಿಗೆ ಯಾವಾಗ ಮದುವೆ ಸುದ್ದಿ ಕೊಡುತ್ತಾರೋ ಕಾದು ನೋಡಬೇಕು.

  FB Artcles
  English summary
  Did Ram charan revealed Prabhas's Marriage Plan Secret in unstoppable- 2 show. Prabhas – Gopichand’s Unstoppable-2 episode streaming on This week. know more.
  Wednesday, December 14, 2022, 17:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X