ಕಿಚ್ಚ ಸುದೀಪ್ ರನ್ನು 'ಕೈ' ಹಿಡಿಯುವಂತೆ ಕೇಳಿಕೊಂಡ್ರಾ ರಮ್ಯಾ?

By Naveen

Recommended Video

ರಮ್ಯಾ ಸುದೀಪ್ ರನ್ನ ಭೇಟಿಯಾಗಿದ್ಯಾಕೆ? | Filmibeat Kannada

'ನಟ ಸುದೀಪ್ ರಾಜಕೀಯಕ್ಕೆ ಬರುತ್ತಾರಾ..?' ಈ ರೀತಿಯ ಪ್ರಶ್ನೆ ಅನೇಕ ಬಾರಿ ಬಂದಿದೆ. ಸುದೀಪ್ ಕೂಡ ಈ ಹಿಂದೆಯೇ ''ನನಗೆ ಮತ್ತು ರಾಜಕೀಯಕ್ಕೆ ಆಗಿ ಬರಲ್ಲ.''' ಅಂತ ಹೇಳಿದ್ದಾರೆ. ಆದರು ಪದೇ ಪದೇ ಸುದೀಪ್ ರಾಜಕೀಯ ಎಂಟ್ರಿ ಸುದ್ದಿ ಕೇಳಿಬರುತ್ತಿದೆ.

ಸದ್ಯ ಮತ್ತೆ ಸುದೀಪ್ ರಾಜಕೀಯ ವಿಷಯ ಸುದ್ದಿ ಮಾಡಿದೆ. ಈಗಾಗಲೇ ಸುದೀಪ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿಷ್ಣು ಸ್ಮಾರಕದ ವಿಚಾರವಾಗಿ ಬೇಟಿ ಮಾಡಿದ್ದರು. ಆ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಹೋಗಿ ಬಂದಿದ್ದರು. ಇವುಗಳ ನಂತರ ನಟಿ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ರಮ್ಯಾ ನಟ ಸುದೀಪ್ ಅವರನ್ನು ಭೇಟಿ ಮಾಡಿ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರಂತೆ. ಅದ್ದರಿಂದ ನಟ ಸುದೀಪ್ ಕಾಂಗ್ರೆಸ್ ಕೈ ಹಿಡಿಯುತ್ತಾರಾ ಎನ್ನುವ ಕುತೂಹಲ ಹುಟ್ಟಿದೆ. ಮುಂದೆ ಓದಿ...

ಜಸ್ಟ್ ಮಾತ್ ಮಾತಲ್ಲಿ

ಜಸ್ಟ್ ಮಾತ್ ಮಾತಲ್ಲಿ

ನಟ ಸುದೀಪ್ ಜೊತೆ ನಟಿ ರಮ್ಯಾ ಈ ಹಿಂದೆ 'ಜಸ್ಟ್ ಮಾತ್ ಮಾತಲ್ಲಿ' ಎಂಬ ಸಿನಿಮಾ ಮಾಡಿದ್ದರು. ಆದರೆ ಈಗ ರಮ್ಯಾ ಸುದೀಪ್ ರೊಂದಿಗೆ ರಾಜಕೀಯದ ಬಗ್ಗೆ ಮಾತುಕತೆ ನಡೆಸಿದ್ದಾರಂತೆ.

ಮೊಳಕಾಲ್ಮೂರು ಕ್ಷೇತ್ರ

ಮೊಳಕಾಲ್ಮೂರು ಕ್ಷೇತ್ರ

ನಟ ಸುದೀಪ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿಸುವ ಒಲವು ಕಾಂಗ್ರೆಸ್ ನಾಯಕರಿಗೆ ಇದ್ದು, ಅದರ ಮುಂದಾಳತ್ವವನ್ನು ರಮ್ಯಾ ವಹಿಸಿಕೊಂಡಿದ್ದಾರೆಂತೆ.

ಒಳ್ಳೆಯ ಸ್ನೇಹಿತರು

ಒಳ್ಳೆಯ ಸ್ನೇಹಿತರು

ಸುದೀಪ್ ಮತ್ತು ರಮ್ಯಾ ಒಳ್ಳೆಯ ಸ್ನೇಹಿತರು. ಇಬ್ಬರು ಜೊತೆಗೆ 'ರಂಗ sslc', ಜಸ್ಟ್ ಮಾತ್ ಮಾತಲ್ಲಿ, 'ಮುಸ್ಸಂಜೆ ಮಾತು', 'ಕಿಚ್ಚ ಹುಚ್ಚ' ಸಿನಿಮಾದಲ್ಲಿ ಜೊತೆಗೆ ನಟಿಸಿದ್ದಾರೆ.

ನಿಜವೋ.. ಸುಳ್ಳೋ..

ನಿಜವೋ.. ಸುಳ್ಳೋ..

ಸುದೀಪ್ ಮತ್ತು ರಮ್ಯಾ ನಡುವೆ ರಾಜಕೀಯದ ವಿಷಯವಾಗಿ ಮಾತುಕತೆ ಆಗಿದೆ ಎನ್ನುವ ಸುದ್ದಿ ಇದ್ದರು ಈ ಬಗ್ಗೆ ಸುದೀಪ್ ಆಗಲಿ ರಮ್ಯಾ ಆಗಲಿ ಬಹಿರಂಗ ಹೇಳಿಕೆ ನೀಡಿಲ್ಲ.

ಪದೇ ಪದೇ ಸುದ್ದಿ

ಪದೇ ಪದೇ ಸುದ್ದಿ

ಅದೇನೋ.. ಸುದೀಪ್ ರಾಜಕೀಯ ಸುದ್ದಿ ಪದೇ ಪದೇ ಸುದ್ದಿ ಆಗುತ್ತಲೇ ಇದೆ. ಸುದೀಪ್ ಬಾಯಿ ಬಿಟ್ಟು ''ನನಗೂ ರಾಜಕೀಯಕ್ಕೂ ಆಗಿ ಬರಲ್ಲ'' ಎಂದು ಹೇಳಿದ್ದಾರೆ. ಆದರೂ ಸಹ ಈ ರೀತಿಯ ಸುದ್ದಿಗಳು ಕಡಿಮೆ ಆಗುತ್ತಿಲ್ಲ.

More from Filmibeat

English summary
According to the source actress and Congress social media team head Ramya met Kannada actor Kiccha Sudeep. And Sudeep got invitation to join Congress party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X