ಜ್ಯೂ.ಎನ್.ಟಿ.ಆರ್ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ಕೇಳಿದ್ದೆಷ್ಟು ಕೋಟಿ ? ಪ್ರಶಾಂತ್ ನೀಲ್‌ಗೆ ಷರತ್ತು ಹಾಕಿದ್ರಾ ರಶ್ಮಿಕಾ..?
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್ ಗೆ ಹೋದ ರಶ್ಮಿಕಾ ಸಂಭಾವನೆ ಕೂಡ ಚಿತ್ರದಿಂದ ಚಿತ್ರಕ್ಕೆ ಹೆಚ್ಚಾಗ್ತಾನೇ ಇದೆ. ಇದಕ್ಕೆ ಪೂರಕವಾಗಿ ಜ್ಯೂ.ಎನ್.ಟಿ.ಆರ್ ಜೊತೆ ಹೆಜ್ಜೆ ಹಾಕಲು ರಶ್ಮಿಕಾ ಮಂದಣ್ಣ ಒಂದಲ್ಲ..ಎರಡಲ್ಲ.. ಏಳು ಕೋಟಿಯನ್ನ ಕೇಳಿದ್ದಾರೆ ಅನ್ನುವ ಸುದ್ದಿ ಪಕ್ಕದ ಆಂಧ್ರದಲ್ಲಿ ಕೇಳಿ ಬರುತ್ತಿದೆ.

ಹೌದು, ನಿಮಗೆ ಗೊತ್ತಿರಬೇಕು .. ಕಳೆದ ಕೆಲ ದಿನದ ಹಿಂದೆ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಸಮಾಗಮದಲ್ಲಿ ಸಿದ್ಧವಾಗಲಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಪುಕಾರು ಹಬ್ಬಿತ್ತು. ಜ್ಯೂ.ಎನ್.ಟಿ.ಆರ್ ಅಭಿನಯದ ಈ 31ನೇ ಚಿತ್ರಕ್ಕೆ ಡ್ರ್ಯಾಗನ್ ಎಂಬ ಹೆಸರನ್ನಿಡಲಾಗಿದೆ. ಈ ಆಗಸ್ಟ್ ನಿಂದ ಚಿತ್ರದ ಚಿತ್ರೀಕರಣ ಆರಂಭವೂ ಆಗಲಿದೆ ಎಂಬ ಯಂಗ್ ಟೈಗರ್ ಅಭಿಮಾನಿಗಳ ಖುಷಿಯನ್ನೂ ಹೆಚ್ಚಿಸಿತ್ತು. ಸದ್ಯಕ್ಕೆ ಇದೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಏಳು ಕೋಟಿ ಕೇಳಿದ್ದಾರೆ ಅನ್ನುವುದು ಹರಡಿಕೊಂಡಿರುವ ಲೇಟೆಸ್ಟ್ ನ್ಯೂಸು.
ಇನ್ನೂ.. ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪುಷ್ಪ 02 ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ನಿಮಗೆ ಗೊತ್ತು ಈ ಚಿತ್ರದಲ್ಲಿ ಇವರದ್ದು ಇಲ್ಲಿ ಡಿಗ್ಲ್ಯಾಮ್ ಪಾತ್ರ. ಇನ್ನೂ ರಶ್ಮಿಕಾ ಅವರ ಈ ಲುಕ್‌ನ ಇವರ ಅಭಿಮಾನಿ ಬಳಗ ಮೆಚ್ಚಿಕೊಂಡಿದೆ.

ಈ ಕಾರಣಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿಯೂ ಕೂಡ ತಮ್ಮ ಪಾತ್ರವನ್ನ ಗ್ಲ್ಯಾಮರಸ್ ಆಗಿ ಹೆಣೆಯುವ ಬದಲು ನನ್ನನ್ನು ಪುಷ್ಪಾದಂತೆಯೇ ಸಹಜವಾಗಿ ಇರಲಿ, ಅಭಿನಯಕ್ಕೆ ಒತ್ತು ನೀಡುವಂತೆ ಇರಲಿ ಎಂದು ರಶ್ಮಿಕಾ ನೀಲ್ ಬಳಿ ಮನವಿಯನ್ನ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಕೂಡ ಇದೇ ವೇಳೆ ಹೈದ್ರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ನನ್ನ ಪಾತ್ರ ಡಿ ಗ್ಲಾಮರಸ್ ಆಗಿದ್ದರೆ ಮಾತ್ರ ಚಿತ್ರದಲ್ಲಿ ಆಕ್ಟ್ ಮಾಡುವುದಾಗಿ ರಶ್ಮಿಕಾ ಷರತ್ತು ಹಾಕಿದ್ದಾರೆ ಎಂಬ ಮಾತು ಕೂಡ ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿದೆ.
ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಈ ಸುದ್ದಿಯಲ್ಲಿರುವ ಸತ್ಯಾಂಶ ಎಷ್ಟು ಅನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ, ಸದ್ಯಕ್ಕೆ ಅನೇಕರು ಹೌಹಾರಿದ್ದಾರೆ. ಅಂದ್ಹಾಗೇ ಆನಿಮಲ್ ಚಿತ್ರದಲ್ಲಿ ಅಭಿನಯಿಸಲು ರಶ್ಮಿಕಾ ಹತ್ ಹತ್ರ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು. ಹೀಗಾಗಿ ಜ್ಯೂ.ಎನ್.ಟಿ.ಆರ್ ಜೊತೆ ತೆರೆ ಹಂಚಿಕೊಳ್ಳಲು ಏಳು ಕೋಟಿಯ ಡಿಮ್ಯಾಂಡ್ ಇಟ್ಟಿದ್ದರು ಇಟ್ಟಿರಬಹುದು ಅನ್ನುವುದು ಸದ್ಯಕ್ಕೆ ವ್ಯಕ್ತವಾಗ್ತಿರುವ ಸಾರ್ವತ್ರಿಕ ಅಭಿಪ್ರಾಯ.


Click it and Unblock the Notifications











