"ನನ್ನ ಬದುಕಿಗೆ ಬಂದಿದ್ದಕ್ಕೆ ನಿನಗೆ ಧನ್ಯವಾದ": ರಶ್ಮಿಕಾ ಮಂದಣ್ಣ ಪೋಸ್ಟ್ ವೈರಲ್

'ಗೀತಾಗೋವಿಂದಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಆತ್ಮೀಯ ಸ್ನೇಹಿತರಾಗಿದ್ದರು. ವಿಜಯ್ ಸ್ನೇಹಿತರ ಬಳಗದಲ್ಲಿ ರೋಶ್ ಗುರ್ತಿಸಿಕೊಂಡಿದ್ದಾರೆ. ಗ್ಯಾಂಗ್‌ ಆಗಾಗ್ಗೆ ದೇಶ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತದೆ. ಇಬ್ಬರೂ ಒಂದೇ ಮನೆಯಲ್ಲಿದ್ದಾರೆ ಎನ್ನುವ ಗುಸುಗುಸು ಕೂಡ ಕೆಲವೊಮ್ಮೆ ಕೇಳಿ ಬರುತ್ತದೆ.

ವಿಜಯ್ ದೇವರಕೊಂಡ ಒಡೆತನದ ರೌಡಿ ಬ್ರ್ಯಾಂಡ್ ಗಾರ್ಮೆಂಟ್ಸ್‌ನ ರಶ್ಮಿಕಾ ಪ್ರಮೋಟ್ ಮಾಡುತ್ತಿರುತ್ತಾರೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಅವರಿಬ್ಬರು ಮಾತ್ರ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬರುತ್ತಿದ್ದಾರೆ.

Did Rashmika Mandanna Post secret message for rumoured Boy friend Vijay Deverakonda?

ಈಗಾಗಲೇ ಎರಡು ಸಿನಿಮಾಗಳಲ್ಲಿ ವಿಜಯ್- ರಶ್ಮಿಕಾ ಜೊತೆಯಾಗಿ ನಟಿಸಿದ್ದಾರೆ. ಇಬ್ಬರನ್ನು ಮತ್ತೆ ಒಂದೇ ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಸೀಕ್ರೆಟ್ ಮೆಸೇಜ್ ಮಾಡಿರುವ ಬಗ್ಗೆ ಸುದ್ದಿಯಾಗುತ್ತಿದೆ.

ಇತ್ತೀಚೆಗೆ, ಕೊಡಗಿನ ಬೆಡಗಿ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರೀತಿ ತುಂಬಿದ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು. ಅದರಲ್ಲಿ "ನಾನು ನಿಮಗೆ ಹೇಳಲು ಒಂದು ವಿಷಯ ಬಯಸುತ್ತೇನೆ, ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು." ಎಂದು ಬರೆದು ಹೃದಯದ ಎಮೋಜಿ ಹಾಕಿದ್ದರು. ರಶ್ಮಿಕಾ ಯಾರ ಹೆಸರನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ರಶ್ಮಿಕಾ ಮಾಡಿದ್ದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಇದಕ್ಕೆ ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಕೆಲವರು ನಿಮ್ಮಬ್ಬರದ್ದು 'ರಬ್‌ ದೆ ಬನಾದಿ ಜೋಡಿ' ಎಂದು ಬರೆದಿದ್ದಾರೆ. ಮತ್ತೊಬ್ಬರು "ಆದಷ್ಟು ಬೇಗ ಇಬ್ಬರು ಮದುವೆ ಆಗಿ" ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿದ್ದಾರೆ.

ಪದೇ ಪದೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಒಂದಷ್ಟು ಸಾಕ್ಷಿಗಳನ್ನು ನೆಟ್ಟಿಗರು ಆಗಾಗ್ಗೆ ಹುಡುಕಿಕೊಂಡು ಬರುತ್ತಿರುತ್ತಾರೆ. 'ಗೀತಾಗೋವಿಂದಂ' ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.

'ಗೀತಾಗೋವಿಂದಂ' ಚಿತ್ರದ ಲಿಪ್‌ಲಾಕ್ ದೃಶ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದೇ ಸನ್ನಿವೇಶ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್‌ಮೆಂಟ್ ಮುರಿದು ಬೀಳಲು ಕಾರಣ ಎಂದು ಕೆಲವರು ವಾದಿಸಿದ್ದರು. ಆ ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಇಬ್ಬರು ಲಿಪ್‌ಲಾಕ್ ಮಾಡಿದ್ದರು. ಇತ್ತೀಚೆಗೆ ಅನ್‌ಸ್ಟಾಪಬಲ್ ಶೋನಲ್ಲಿ ವಿಜಯ್- ರಶ್ಮಿಕಾ ನಡುವೆ ಏನೋ ನಡೀತಿದೆ ಎಂದು ರಣ್‌ಬೀರ್ ಕಪೂರ್ ಕೂಡ ಸುಳಿವು ಕೊಟ್ಟಿದ್ದರು.

ಸದ್ಯ 'ಅನಿಮಲ್' ಸಿನಿಮಾ ಸಕ್ಸಸ್ ಅಲೆಯಲ್ಲಿ ರಶ್ಮಿಕಾ ಮಂದಣ್ಣ ತೇಲುತ್ತಿದ್ದಾರೆ. 'ಪುಷ್ಪ'-2 ಸಿನಿಮಾ ಚಿತ್ರೀಕರಣ ನಡೀತಿದೆ. 'ರೈನ್‌ಬೋ' ಹಾಗೂ 'ದಿ ಗರ್ಲ್‌ಫ್ರೆಂಡ್' ಎನ್ನುವ ಎರಡು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಧನುಷ್ ಮುಂದಿನ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. 'ಅನಿಮಲ್' ಸಕ್ಸಸ್ ಬಳಿಕ ಮತ್ತಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸೋ ಸಾಧ್ಯತೆಯಿದೆ. 'ಅನಿಮಲ್' ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೀತಿದೆ.

ಮತ್ತೊಂದು ಕಡೆ ವಿಜಯ್ ದೇವರಕೊಂಡ 'ಲೈಗರ್' ಸೋಲಿನಿಂದ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಇನ್ನು ಹೆಸರಿಡದ ಚಿತ್ರವೊಂದರಲ್ಲಿ ವಿಜಯ್ ನಟಿಸುತ್ತಿದ್ದಾರೆ. ಈ ಚಿತ್ರಸಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Rashmika Mandanna's secret message goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X