ಜವಾನ್ ಸಿನಿಮಾದಲ್ಲಿನ ನಯನತಾರಾ ಪಾತ್ರ ಮೊದಲು ಬಂದಿದ್ದು ಈ ಸೌತ್ ಬ್ಯೂಟಿಗೆ!

ಈಗೇನಿದ್ದರೂ ಬಾಲಿವುಡ್‌ ಸೇರಿ ಎಲ್ಲೇಡೆ ಜವಾನ್ ಹವಾ ಶುರುವಾಗಿದೆ. ಜವಾನ್ ಟ್ರೈಲರ್ ಎಲ್ಲೆಡೆ ಸದ್ದು ಮಾಡುತ್ತಿದ್ದು, ಪಾತ್ರವರ್ಗ ಕೂಡ ಗಮನ ಸೆಳೆದಿದೆ. ಸಿನಿಮಾದಲ್ಲಿ ಶಾರುಖ್‌ ಖಾನ್ ಹೊರತುಪಡಿಸಿ ಹೆಚ್ಚಿನ ಪ್ರಮುಖ ಪಾತ್ರಗಳಲ್ಲಿರುವುದು ದಕ್ಷಿಣ ಭಾರತದವರು.

ಅದರಲ್ಲೂ ಲೇಡಿ ಸೂಪರ್ ಸ್ಟಾರ್ ನಯನತಾರಾ ಜವಾನ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಅಟ್ಲಿ ನಿರ್ದೇಶನದ ಚಲನಚಿತ್ರದ ಮೂಲಕ ಹಿಂದಿ ಸಿನಿರಂಗಕ್ಕೆ ಹೊರಟಿದ್ದಾರೆ. ಚಿತ್ರದಲ್ಲಿ ನಯನತಾರಾ ಶಾರುಖ್ ಖಾನ್ ಅವರಿಗೆ ಜೋಡಿಯಾಗಲಿದ್ದಾರೆ.

did-samantha-rejected-role

ಜವಾನ್ ನಾಯಕಿಯಾಗಿ ಮೊದಲ ಆಯ್ಕೆ ನಯನತಾರ ಅಲ್ಲ!

ವರದಿಗಳ ಪ್ರಕಾರ ಬಹುನಿರೀಕ್ಷಿತ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಮೊದಲ ಆಯ್ಕೆ ನಯನತಾರಾ ಆಗಿರಲಿಲ್ಲ. ಹೌದು, ಇನ್ನೊಬ್ಬ ಜನಪ್ರಿಯ ನಟಿ ಜವಾನ್‌ನಲ್ಲಿ ಶಾರುಖ್ ಖಾನ್ ಜೊತೆಗೆ ಡುಯೆಟ್ ಹಾಡಬೇಕಿತ್ತು. ಈ ನಟಿ ಬೇರೆ ಯಾರೂ ಅಲ್ಲ, ನಯನತಾರಾ ಅವರ ಜೊತೆಗೆ 'ಕಾತುವಾಕುಲ ರೆಂಡು ಕಾದಲ್' ಸಿನಿಮಾದ ಸಹನಟಿ, ಸಮಂತಾ ರುತ್ ಪ್ರಭು.

ಹೌದು, ಜವಾನ್ ಚಿತ್ರದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ಸಮಂತಾ ರುತ್ ಪ್ರಭು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಕೊನೆಗೆ ಅದು ನಯನತಾರಾಗೆ ಹೋಗಿದೆ. ಜವಾನ್‌ನಂತಹ ಪ್ರಚಾರದ ಚಿತ್ರಕ್ಕೆ ಯಾವುದೇ ನಟರು ಬೇಡ ಎನ್ನುವುದಿಲ್ಲ. ಆದರೆ ಸಮಂತಾ ರುತ್ ಪ್ರಭು ಜವಾನ್ ಆಫರ್ ನಿರಾಕರಿಸಿದ್ದಾರೆ!.

did-samantha-rejected-role

ಈ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಪ್ರಸ್ತಾಪವನ್ನು ಸಮಂತಾ ನಿರಾಕರಿಸಿದ್ದಾರೆ ಎಂದು ವದಂತಿಗಳಿವ. ಸಿನಿಮಾ ಆಫರ್ ಬಂದ ಸಮಯದಲ್ಲಿ ಅವರು ತಮ್ಮ ಪತಿ ನಾಗ ಚೈತನ್ಯ ಅವರೊಂದಿಗೆ ಕುಟುಂಬ ಪ್ರಾರಂಭಿಸಲು ಆಶಿಸುತ್ತಿದ್ದರು ಎಂದು ವರದಿಯಾಗಿದೆ. ಈ ಸಿನಿಮಾಗಾಗಿ ಸಮಂತಾ ಅವರಿಗೆ 2019 ರಲ್ಲಿ ಆಫರ್ ನೀಡಲಾಗಿತ್ತು.

ಸಮಂತಾ ಜವಾನ್ ಅನ್ನು ತಿರಸ್ಕರಿಸಲು ಇದೇ ಕಾರಣವೇ ಅಥವಾ ಆಕೆಗೆ ಮೊದಲು ಚಿತ್ರವನ್ನು ಆಫರ್ ಮಾಡಲಾಗಿದೆಯೇ ಎಂಬ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಆದರೆ ಸಮಂತಾಗೆ ಜವಾನ್ ಆಫರ್ ಬಂದಿದೆ ಎಂಬ ಸುದ್ದಿಯನ್ನು ನಂಬುವುದು ಕಷ್ಟವೇನಲ್ಲ. ಏಕೆಂದರೆ, ಸಮಂತಾ ಚಿತ್ರದ ಜವಾನ್ ನಿರ್ದೇಶಕ ಅಟ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಅಟ್ಲಿ ನಿರ್ದೇಶನದ ಎರಡು ಚಿತ್ರಗಳಲ್ಲಿ ಸಮಂತಾ ನಟಿಸಿದ್ದಾರೆ. ಆ ಎರಡೂ ಚಿತ್ರಗಳು ದೊಡ್ಡ ಹಿಟ್ ಆಗಿವೆ. 2016 ರಲ್ಲಿ, ನಟಿ ವಿಜಯ್ ಜೊತೆಗೆ 'ತೇರಿ'ಯಲ್ಲಿ ನಟಿಸಿದರು. ಇದಾದ ಕೆಲವೇ ದಿನಗಳಲ್ಲಿ, ಈ ಮೂವರು ಮತ್ತೆ ಮೆರ್ಸಲ್ ಸಿನಿಮಾದಲ್ಲಿ ಒಟ್ಟಾಗಿದ್ದರು. ಮೆರ್ಸಲ್ ಚಿತ್ರದಲ್ಲಿ ವಿಜಯ್ ಅವರಿಗೆ ಮೂವರು ನಾಯಕಿಯರು. ಸಮಂತಾ, ನಿತ್ಯಾ ಮೆನೆನ್ ಮತ್ತು ಕಾಜಲ್ ಅಗರ್ವಾಲ್.

ಸಮಂತಾ ನಟನೆಯ ಖುಷಿ ಬಿಡುಗಡೆ

ನಟಿ ಸಮಂತಾ ಜವಾನ್ ಸಿನಿಮಾದ ಭಾಗವಾಗಿಲ್ಲ. ಆದರೆ, ಜವಾನ್ ಬಿಡುಗಡೆಯಾಗುವ ತಿಂಗಳಿನಲ್ಲಿಯೇ ಅವರ ಖುಷಿ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ವಿಜಯ್ ದೇವರಕೊಂಡ ಜೊತೆಗೆ ನಟಿಸಿರುವ ಇದು ರೋಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನಲಾಗಿದೆ. ಶಿವ ನಿರ್ವಾಣ ನಿರ್ದೇಶನ ಮಾಡಿದ್ದು, ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯ ಕಾರಣದಿಂದ ಬಹಳ ಪ್ರಚಾರಗೊಂಡಿದೆ. ಖುಷಿ ಬಿಡುಗಡೆಯಾದ ಆರು ದಿನಗಳ ನಂತರ, ಜವಾನ್ ಥಿಯೇಟರ್‌ಗಳಿಗೆ ಬರಲಿದೆ.

More from Filmibeat

English summary
Did Samantha rejected role opposite Shah Rukh Khan in Jawan?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X