ಶಾರುಖ್ ಖಾನ್ ಸಿನಿಮಾಕ್ಕೆ ನೋ ಎಂದರೇ ಸಮಂತಾ!
ನಟ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಲು ನಟಿಯರು ತುದಿಗಾಲಲ್ಲಿ ನಿಂತಿರುತ್ತಾರೆ. 'ಕಿಂಗ್ ಆಫ್ ರೊಮ್ಯಾನ್ಸ್' ಜೊತೆ ನಟಿಸುವ ಒಂದು ಅವಕಾಶ ಸಿಕ್ಕರು ಸಾಕೆಂದು ಕಾಯುತ್ತಿರುತ್ತಾರೆ. ಆದರೆ ಎಲ್ಲ ನಟಿರಂತಲ್ಲ ಸಮಂತಾ.
ಹೌದು, ಸಮಂತಾ ಬಾಕಿ 'ಕ್ಯೂಟ್-ಬಬ್ಲಿ' ನಟಿಯರ ಸಾಲಿಗೆ ಸೇರಿದವರಲ್ಲ. ವೃತ್ತಿಯಲ್ಲಿ, ಸಿನಿಮಾ ಆಯ್ಕೆಯ ವಿಷಯದಲ್ಲಿ ತಮ್ಮದೇ ಆದ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿಯೂ ವಿಚ್ಛೇಧನದ ಬಳಿಕ ಇನ್ನಷ್ಟು ಗಟ್ಟಿಯಾಗಿದ್ದಾರೆ.
ನಟಿ ಸಮಂತಾಗೆ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಅರಸಿ ಬಂದಿತ್ತು. ಆದರೆ ನಟಿ ಸಿನಿಮಾದಲ್ಲಿ ಜಟಿಸಲು ನೋ ಎಂದಿದ್ದಾರೆ. ಆ ಮೂಲಕ ಅಚ್ಚರಿ ಮೂಡಿಸಿದ್ದಾರೆ ನಟಿ ಸಮಂತಾ.

ಶಾರುಖ್ ಖಾನ್‌ರ ಮುಂದಿನ ಸಿನಿಮಾಕ್ಕೆ 'ಜವಾನ್' ಎಂದು ಹೆಸರಿಡಲಾಗಿದ್ದು, ಸಿನಿಮಾವನ್ನು ತಮಿಳಿನ ಜನಪ್ರಿಯ ಯುವ ನಿರ್ದೇಶಕ ಅಟ್ಟಿಲಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ನಯನತಾರಾ ಆಯ್ಕೆ ಆಗಿದ್ದಾರೆ. ಆದರೆ ಅಸಲಿಗೆ ಸಮಂತಾ ಈ ಸಿನಿಮಾಕ್ಕೆ ಮೊದಲ ಆಯ್ಕೆ ಆಗಿರಲಿಲ್ಲವಂತೆ.
ನಟಿ ಸಮಂತಾ, ಶಾರುಖ್ ಖಾನ್ ಎದುರು ನಾಯಕಿಯಾಗಿ ನಟಿಸಬೇಕಿತ್ತಂತೆ. ಸಮಂತಾರನ್ನು ಸಂಪರ್ಕ ಮಾಡಿದ್ದರು ನಿರ್ದೇಶಕ ಅಟ್ಟಿಲಿ ಆದರೆ ಬಿಡುವಾದ ಶೆಡ್ಯೂಲ್ ಕಾರಣ ಸಮಂತಾ ಸಿನಿಮಾಕ್ಕೆ ನೋ ಎಂದಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದು ಮಾಹಿತಿಯ ಪ್ರಕಾರ, ಸಮಂತಾ ಹಾಗೂ ನಾಗ ಚೈತನ್ಯ ಪೋಷಕರಾಗುವ ಯೋಚನೆಯಲ್ಲಿರುವ ವಿಷಯ ತಿಳಿದು ಅಟ್ಟಿಲಿ, ನಯನತಾರಾಗೆ ಕತೆ ಹೇಳಿದ ಪರಿಣಾಮ, ಸಮಂತಾಗೆ ಅವಕಾಶ ತಪ್ಪಿ ಹೋಯಿತು. ಆ ಬಳಿಕ ಸಮಂತಾ-ನಾಗ ಚೈತನ್ಯ ವಿಚ್ಛೇಧನ ಪಡೆದುಕೊಂಡರಾದರೂ ಆ ವೇಳೆಗಾಗಲೆ ನಯನತಾರಾನೇ ನಾಯಕಿ ಎಂಬುದು ಅಂತಿಮವಾಗಿಬಿಟ್ಟಿತ್ತು ಎನ್ನಲಾಗುತ್ತಿದೆ.
ಸಮಂತಾ ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಭಿನ್ನ-ಭಿನ್ನ ಕತೆಯುಳ್ಳ ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. 'ಶಾಕುಂತಲಂ' ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಇದರ ನಡುವೆ ತಾಪ್ಸಿ ಪನ್ನು ನಿರ್ಮಿಸುತ್ತಿರುವ ಹಿಂದಿ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇಂಗ್ಲೀಷ್ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್' ನಲ್ಲಿ ದ್ವಿಲಿಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಬ್ ಸರಣಿ ಒಂದಕ್ಕೂ ಸಹಿ ಹಾಕಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಸಿನಿಮಾ ಒಂದರಲ್ಲಿ ಈಗಾಗಲೇ ನಟಿಸುತ್ತಿದ್ದಾರೆ. ಒಟ್ಟಾರೆ ಸಮಂತಾ ಈ ವರ್ಷವೆಲ್ಲ ಬಹಳ ಬ್ಯುಸಿ ಇದ್ದಾರೆ.


Click it and Unblock the Notifications











