63 ವರ್ಷದ ಆ ಟಾಪ್ ಹೀರೊ ಜೊತೆ ನಟಿಸೋಕೆ ಮೀನಾ ಒಪ್ಪಲಿಲ್ವಾ? ಫ್ಯಾನ್ಸ್ ಗರಂ
ನಟಿ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. 2022ರಲ್ಲಿ ಬಂದ 'ಬ್ರೋ ಡ್ಯಾಡಿ' ಬಳಿಕ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪತಿಯ ಅಗಲಿಕೆಯ ನೋವಿನಿಂದ ಹೊರಬಂದು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪಂಚಭಾಷಾ ತಾರೆಯಾಗಿ ಮೀನಾ ಸಕ್ಸಸ್ ಕಂಡವರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ಮೀನಾ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ಬಳಿಕ ನಾಯಕಿಯಾಗಿಯೂ ಬೆಳ್ಳಿತೆರೆ ಪ್ರವೇಶಿಸಿದರು. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಗಮನ ಸೆಳೆದರು. ರಜನಿಕಾಂತ್, ಚಿರಂಜೀವಿ, ಮೋಹನ್ ಲಾಲ್, ವಿಷ್ಣುವರ್ಧನ್, ರವಿಚಂದ್ರನ್, ಬಾಲಕೃಷ್ಣ ಸೇರಿದಂತೆ ಸ್ಟಾರ್ ನಟರ ಜೊತೆ ನಾಯಕಿಯಾಗಿ ಮಿಂಚಿದರು.

ನಟಿ ಮೀನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ಮೀನಾ ಪುತ್ರಿ ನೈನಿಕಾ ಕೂಡ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ವಿದ್ಯಾಭ್ಯಾಸದ ಕಾರಣಕ್ಕೆ ಹೆಚ್ಚು ನಟಿಸಲಿಲ್ಲ. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಕೂಡ ಮೀನಾಗೆ ಒಳ್ಳೆ ಕ್ರೇಜ್ ಇದೆ.
ಸದ್ಯ ಮೀನಾ ಖ್ಯಾತ ನಟನೊಟ್ಟಿಗೆ ನಟಿಸಲು ನಿರಾಕರಿಸಿದ್ದಾರೆ ಎನ್ನುವ ವದಂತಿ ಕಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಒಂದ್ಕಾಲದಲ್ಲಿ ರಜನಿಕಾಂತ್, ಕಮಲ್ ಹಾಸನ್‌ರಂತಹ ಸ್ಟಾರ್‌ಗಳಿಗೆ ಸೆಡ್ಡು ಹೊಡೆದ ನಟ ರಾಮರಾಜನ್. 2001ರ ವರೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಅವರು ಬಳಿಕ ಚಿತ್ರರಂಗದಿಂದ ದೂರಾಗಿದ್ದರು. 13 ವರ್ಷಗಳ ಹಿಂದೆ ಪ್ರಾಣಾಪಾಯದಿಂದ ಪಾರಾಗಿದ್ದ ರಾಮರಾಜನ್ ಬಳಿಕ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದುಬಿಟ್ಟಿದ್ದರು.
ಮತ್ತೆ ರಾಮರಾಜನ್ ಲೀಡ್ ರೋಲ್‌ನಲ್ಲಿ 'ಸಾಮಾನಿಯನ್' ಸಿನಿಮಾ ಆರಂಭವಾಗಿದೆ. ಈಗಾಗಲೇ ಸಿನಿಮಾ ಕೆಲಸಗಳು ಭರದಿಂದ ಆಗುತ್ತಿದೆ. 63 ವರ್ಷ ವಯಸ್ಸಿನ ರಾಮರಾಜನ್ ಜೊತೆ ಮೀನಾ ನಟಿಸಿದರು ಚೆನ್ನಾಗಿರುತ್ತದೆ ಎಂದು ನಿರ್ದೇಶಕರು ಭಾವಿಸಿದ್ದಾರಂತೆ. ಆದರೆ ಆಕೆ ಇದಕ್ಕೆ ಒಪ್ಪಲಿಲ್ಲ ಎನ್ನುವ ಗುಸುಗುಸು ಕೇಳಿಬರ್ತಿದೆ. ಇದೇ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಮರಾಜನ್ ನಟನೆಯ 'ಕರಕಟ್ಟಕ್ಕಾರನ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 25 ಥಿಯೇಟರ್‌ಗಳಲ್ಲಿ 100 ದಿನ, 8 ಥಿಯೇಟರ್‌ಗಳಲ್ಲಿ 360 ದಿನ, 4 ಥಿಯೇಟರ್‌ಗಳಲ್ಲಿ 400 ದಿನ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. 40ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಮರಾಜನ್ ಹೀರೊ ಆಗಿ ನಟಿಸಿದ್ದರು. 80ರ ದಶಕದಲ್ಲಿ ಭಾರೀ ಕ್ರೇಜ್ ಇತ್ತು. ಇದೀಗ ಮತ್ತೆ ರಾಮರಾಜನ್ ರೀ ಎಂಟ್ರಿ ಕೊಡುತ್ತಿದ್ದಾರೆ.
'ಸಾಮಾನಿಯನ್' ಚಿತ್ರಕ್ಕೆ ಆರ್. ರಾಕೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಾಮರಾಜನ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೋಡಿಯಾಗಿ ಮೀನಾ ನಟಿಸಿದ್ದರೆ ಸರಿಯಾಗಿರುತ್ತದೆ ಎಂದು ನಿರ್ದೇಶಕರು ಆಕೆಯನ್ನು ಸಂಪರ್ಕಿಸಿದರಂತೆ. ಆದರೆ ಆಕೆ ನೋ ಎಂದಿದ್ದಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ.
ಇತ್ತೀಚೆಗೆ 'ಸಾಮಾನಿಯನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇಳಯರಾಜಾ ಸಂಗೀತ ಚಿತ್ರಕ್ಕಿದೆ. ರಾಧಾ ರವಿ, ಎಂ.ಎಸ್ ಭಾಸ್ಕರ್, ಕೆ. ಎಸ್ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಾಯಕನಾಗಿ ರಾಮರಾಜನ್ ನಟಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.
ಮಕ್ಕಳ್ ನಾಯಗನ್ ರಾಮರಾಜನ್ 45ನೇ ಸಿನಿಮಾ 'ಸಾಮಾನಿಯನ್'. ಇನ್ನು ಈ ಸಿನಿಮಾ ಬಿಡುಗಡೆಗೂ ಮುನ್ನ ಮತ್ತೊಂದು ಚಿತ್ರಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಾಮಾನಿಯನ್' ಚಿತ್ರದ ಸಹಾಯಕ ನಿರ್ದೇಶಕ ಕಾರ್ತಿಕ್ ಕುಮಾರ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











