Oscars 2023: ಅಯ್ಯೋ.. ಆಸ್ಕರ್ ಸೆರಮನಿಗೆ ತ್ರಿಮೂರ್ತಿಗಳನ್ನು ಕರೆದಿಲ್ವಾ? ₹1.44 ಕೋಟಿ ಕೊಟ್ಟು ಕೊನೆ ಸಾಲಲ್ಲಿ ಕುಂತಿದ್ರಾ?
95ನೇ ಅಕಾಡೆಮಿ ಅವಾರ್ಡ್ಸ್ ಸೆರಮನಿ ಅದ್ಧೂರಿಯಾಗಿ ನೆರವೇರಿದೆ. ಭಾರತೀಯ ಕಾಲಮಾನ ಪ್ರಕಾರ ಕಳೆದ ಸೋಮವಾರ ಕಾರ್ಯಕ್ರಮ ನಡೀತು. ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಆದರೆ ಈ ಅವಾರ್ಡ್ಸ್ ಸೆರಮನಿಗೆ ಖುದ್ದು ರಾಜಮೌಳಿ, ರಾಮ್‌ಚರಣ್, ತಾರಕ್‌ಗೂ ಟಿಕೆಟ್ ಕೊಟ್ಟಿರಲಿಲ್ಲ ಎನ್ನುವುದು ನಿಮಗೆ ಗೊತ್ತಾ?
ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಸಾಹಿತ್ಯ ಬರೆದ ಚಂದ್ರಬೋಸ್ ವೇದಿಕೆ ಏರಿ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ್ದರು. ಆದರೆ ಆಸ್ಕರ್ ಅವಾರ್ಡ್ಸ್ ಸೆರಮನಿಯಲ್ಲಿ 'RRR' ಚಿತ್ರತಂಡದ ಹಲವರು ಭಾಗಿ ಆಗಿ ಆ ಸಂತಸದ ಕ್ಷಣಗಳನ್ನು ಸಂಭ್ರಮಿಸಿದ್ದರು. ನಿರ್ದೇಶಕ ರಾಜಮೌಳಿ ಫ್ಯಾಮಿಲಿ ಸಮೇತ ಕೊನೆ ಸಾಲಿನಲ್ಲಿ ಕೂತಿದ್ದರು. 'ನಾಟು ನಾಟು' ಗೀತೆಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಪುಟ್ಟಮಗುವಿನಂತೆ ಎದ್ದು ಕುಣಿದು ಕುಪ್ಪಳಿಸಿದರು. ರಾಮ್‌ಚರಣ್ ಪತ್ನಿ ಸಮೇತರಾಗಿ ಹೋಗಿದ್ದರು. ತಾರಕ್ ಕೂಡ ಈ ಸಂಭ್ರಮಕ್ಕೆ ಸಾಕ್ಷಿ ಆದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಸಲಿ ವಿಚಾರ ಏನು ಅಂದರೆ ಅವಾರ್ಡ್ಸ್ ಸೆರಮನಿಗೆ ಪ್ರಶಸ್ತಿ ಸ್ವೀಕರಿಸಿದ ಕೀರವಾಣಿ ಹಾಗೂ ಚಂದ್ರಬೋಸ್‌ಗೆ ಮಾತ್ರ ಆಹ್ವಾನ ಇತ್ತಂತೆ. ಅವರಿಬ್ಬರು ಮಡದಿಯರ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕಾಡೆಮಿ ಅವಕಾಶ ಕಲ್ಪಿಸಿತ್ತು. ಉಳಿದಂತೆ ರಾಜಮೌಳಿ ಹಾಗೂ ಪತ್ನಿ ರಮಾ, ರಾಮ್‌ಚರಣ್ ಹಾಗೂ ಪತ್ನಿ ಉಪಾಸನಾ, ಜ್ಯೂ. ಎನ್‌ಟಿಆರ್, ಕಾರ್ತಿಕೇಯ ಹೀಗೆ ಎಲ್ಲರೂ ಟಿಕೆಟ್ ಖರೀದಿಸಿ ಶೋನಲ್ಲಿ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಲು ಅಕಾಡೆಮಿ ಇಡೀ ತಂಡಕ್ಕೆ ಅವಕಾಶ ಕಲ್ಪಿಸಿತ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿ ವಿಚಾರ ಈಗ ಬಹಿರಂಗವಾಗಿದೆ.
ಅಕಾಡೆಮಿ ನಿಮಯದ ಪ್ರಕಾರ ಆಸ್ಕರ್‌ಗೆ ನಾಮಿನೇಟ್ ಆದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ಪ್ರವೇಶ ಇರುತ್ತದೆ. ಇನ್ನುಳಿದಂತೆ ಎಲ್ಲರೂ ಟಿಕೆಟ್ ಖರೀದಿಸಿ ಪ್ರೇಕ್ಷಕರ ರೀತಿಯಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು. ಅದೇ ರೀತಿ 'RRR' ತಂಡದ ಸದಸ್ಯರು ಭಾಗಿ ಆಗಿದ್ದಾರೆ. ಅಂದಹಾಗೆ ಒಂದು ಟಿಕೆಟ್ ಬೆಲೆ ಬರೋಬ್ಬರಿ 25 ಡಾಲರ್ ಅಂತೆ. ಅಂದ್ರೆ ಭಾರತದ ಕರೆನ್ಸಿ ಪ್ರಕಾರ ₹20.6 ಲಕ್ಷ. ಆ ಲೆಕ್ಕದಲ್ಲಿ ₹1.44 ಕೋಟಿಗೆ ಟಿಕೆಟ್ ಖರೀದಿಸಿ 'RRR' ಟೀಂ ಶೋನಲ್ಲಿ ಭಾಗಿ ಆಗಿದೆ. ಡಾಲ್ಬಿ ಥಿಯೇಟರ್‌ನ ಕೊನೆ ಸಾಲಿನಲ್ಲಿ ರಾಜಮೌಳಿ ಕೂತಿದ್ದು ಕೆಲವರಿಗೆ ಬೇಸರ ತಂದಿತ್ತು. 'RRR' ಚಿತ್ರದ ನಿರ್ದೇಶಕನಿಗೆ ಅಕಾಡೆಮಿ ಕೊನೆ ಸಾಲಿನಲ್ಲಿ ಸೀಟ್ ಕಾದಿಸಿತ್ತಾ? ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೆ ಜಕ್ಕಣ್ಣ ಕಾಯ್ದಿರಿಸಿದ್ದ ಸೀಟ್ ಅದೇ ಎನ್ನುವುದು ಈಗ ಗೊತ್ತಾಗಿದೆ.

ದರು. ಆದರೆ ರಾಮ್‌ಚರಣ್ ದಂಪತಿ ಹಾಗೂ ಜ್ಯೂ. ಎನ್‌ಟಿಆರ್ ಬಾಲ್ಕನಿಯ ಮೇಲ್ಬಾಗದಲ್ಲಿ ಕೂತಿದ್ದರು. ಇವರೆಲ್ಲಾ ಟಿಕೆಟ್ ಖರೀದಿಸಿ ಪ್ರೇಕ್ಷಕರಂತೆ ಹೋಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿ ಬಂದಿದ್ದಾರೆ. ಬೆಸ್ಟ್ ಒರಿಜಿನಲ್ ಸಾಂಗ್ ಬಿಟ್ಟರೆ ಮತ್ಯಾವುದೇ ವಿಭಾಗದಲ್ಲಿ 'RRR' ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಿರಲಿಲ್ಲ. ಒಂದು ವೇಳೆ ಅತ್ಯುತ್ತಮ ಸಿನಿಮಾ, ಅತ್ಯುತಮ್ಮ ನಿರ್ದೇಶಕ ವಿಭಾಗದಲ್ಲಿ ನಾಮಿನೇಟ್ ಆಗಿದ್ದರೆ ರಾಜಮೌಳಿಗೂ ಅಕಾಡೆಮಿಯಿಂದ ಆಹ್ವಾನ ಇರುತ್ತಿತ್ತು. ಕೀರವಾಣಿ, ಚಂದ್ರಬೋಸ್ ರೀತಿ ವೇದಿಕೆಯ ಮುಂಭಾಗದಲ್ಲೇ ಕುಳಿತುಕೊಳ್ಳಲು ಅವಕಾಶ ಲಭಿಸುತ್ತಿತ್ತು. ಇದಕ್ಕೂ ಮುನ್ನ ಗೋಲ್ಡನ್ ಗ್ಲೋಬ್ ಹಾಗೂ ಕ್ರಿಟಿಕ್ ಅಕಾಡೆಮಿ ಅವಾರ್ಡ್‌ಗಳನ್ನು ಖುದ್ದು ರಾಜಮೌಳಿ ಸ್ವೀಕರಿಸಿದ್ದರು.


Click it and Unblock the Notifications











