ಅಲ್ಲು ಅರ್ಜುನ್-ಸುಕುಮಾರ್ ಮಧ್ಯೆ ಬಿರುಕು? ಗಡ್ಡ ತೆಗೆದು ವಿದೇಶಕ್ಕೆ 'ಪುಷ್ಪ'ರಾಜ್?
ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ 'ಪುಷ್ಪ'-2 ಕೂಡ ಒಂದು. ಪದೇ ಪದೆ ಸಿನಿಮಾ ಬಿಡುಗಡೆ ದಿನಾಂಕ ಬದಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ 4 ತಿಂಗಳು ಸಿನಿಮಾ ತಡವಾಗುತ್ತದೆ ಎಂದು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರೋದು ಬಹಳ ತಡವಾಗುತ್ತಿದೆ. ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌ಗೆ ಹೆಚ್ಚು ಸಮಯ ಹಿಡಿಸುತ್ತಿದೆ. ಒಳ್ಳೆ ಔಟ್‌ಫುಟ್ ಬೇಕು ಎನ್ನುವ ಕಾರಣಕ್ಕೆ ಚಿತ್ರತಂಡಗಳು ರಿಸ್ಕ್ ತೆಗೆದುಕೊಳ್ಳುತ್ತಿವೆ. ಆದರೆ ಅಭಿಮಾನಿಗಳು ಮಾತ್ರ ಕಾದು ಕಾದು ಸುಸ್ತಾಗುವಂತಾಗಿದೆ. 'ಪುಷ್ಪ'-2 ವಿಚಾರದಲ್ಲೂ ಇದೇ ಆಗುತ್ತಿದೆ.

'ಪುಷ್ಪ' ಸಿನಿಮಾ ತೆರೆಕಂಡು ಎರಡೂವರೆ ವರ್ಷ ಆಗುತ್ತಾ ಬಂತು. ಸೀಕ್ವೆಲ್ ಮಾತ್ರ ಇನ್ನು ತೆರೆಗೆ ಬಂದಿಲ್ಲ. ಸಿನಿಮ ಚಿತ್ರೀಕರಣ ತಡವಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಸದ್ಯ ಅಲ್ಲು ಅರ್ಜುನ್ ತಮ್ಮ ಗಡ್ಡವನ್ನು ಟ್ರಿಮ್ ಮಾಡಿ ಫ್ಯಾಮಿಲಿ ಜೊತೆ ವಿದೇಶಕ್ಕೆ ತೆರೆಳಿದ್ದಾರೆ ಎನ್ನಲಾಗ್ತಿದೆ.
ಅಲ್ಲು ಅರ್ಜುನ್ ಗಡ್ಡ ಟ್ರಿಮ್ ಮಾಡಿಕೊಂಡು ವಿಮಾನದಲ್ಲಿ ಕಾಣಿಸಿಕೊಂಡಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಸಿನಿಮಾ ಚಿತ್ರೀಕರಣ ತಡವಾಗುತ್ತದೆ. ಹಾಗಾಗಿ ಬನ್ನಿ ಫ್ಯಾಮಿಲಿ ಜೊತೆ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ. ವಿಮಾನದಲ್ಲಿ ಯಾರೋ ವೀಡಿಯೋ ಮಾಡಿ ಬನ್ನಿ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ಗಡ್ಡ ಟ್ರಿಮ್ ಮಾಡಿಕೊಂಡಿರುವುದು ಗೊತ್ತಾಗುತ್ತಿದೆ. ಪುಷ್ಪರಾಜ್ ಪಾತ್ರಕ್ಕೆ ಆ ಲುಕ್ ಕಂಟೀನ್ಯೂ ಮಾಡಬೇಕಿದೆ. ಆ ಲುಕ್‌ಗಾಗಿ ಮತ್ತಷ್ಟು ದಿನ ಕಾಯಬೇಕು. ಅಲ್ಲು ಅರ್ಜುನ್ ಈ ನಡೆಗೆ ಕಾರಣವೇನು? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.
ಸುಕುಮಾರ್- ಅಲ್ಲು ಅರ್ಜುನ್ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ಅದಕ್ಕೆ ಇಬ್ಬರೂ ಮುನಿಸಿಕೊಂಡು ಸಿನಿಮಾ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮೂರು ತಂಡಗಳಾಗಿ ಬೇಗ ಚಿತ್ರೀಕರಣ ಮಾಡಬೇಕು ಎಂದು ಅಲ್ಲು ಅರ್ಜುನ್ ಹಠ ಹಿಡಿದಿದ್ದಾರೆ, ಅದಕ್ಕೆ ಸುಕುಮಾರ್ ಒಪ್ಪುತ್ತಿಲ್ಲ. ಅದೇ ಕಾರಣಕ್ಕೆ ಇಬ್ಬರ ನಡುವೆ ಗ್ಯಾಪ್ ಏರ್ಪಟ್ಟಿದೆ ಎನ್ನುವುದು ಕೆಲವರ ವಾದ. ಆದರೆ ಇವರಿಬ್ಬರ ನಡುವೆ ಸಿಲುಕಿ ನಿರ್ಮಾಪಕರು ರೋಸಿ ಹೋಗಿದ್ದಾರೆ ಎನ್ನಲಾಗ್ತಿದೆ.
ಫಹಾದ್ ಫಾಸಿಲ್ ಡೇಟ್ಸ್ ಸಮಸ್ಯೆ ಕೂಡ 'ಪುಷ್ಪ-2' ಸಿನಿಮಾ ತಡವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಮಲಯಾಳಂ ನಟ ಫಹಾದ್ ಬಹಳ ಬ್ಯುಸಿಯಾಗಿದ್ದಾರೆ. ಆದರೆ ಚಿತ್ರದಲ್ಲಿ ಎಸ್‌ಐ ಶೇಖಾವತ್ ಆಗಿ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ. ಸೀಕ್ವೆಲ್ ಕಥೆಯಲ್ಲಿ ಇವರಿಬ್ಬರ ನಡುವಿನ ಕಾದಾಟವೇ ಹೈಲೆಟ್. ಸೆಪ್ಟೆಂಬರ್ ವೇಳೆಗೆ ಫಹಾದ್ ಡೇಟ್ಸ್ ಸಿಗಲಿದ್ದು ಆಗ ಚಿತ್ರೀಕರಣ ನಡೆಸುತ್ತಾರೆ ಎನ್ನಲಾಗ್ತಿದೆ. ಬಳಿಕ ಅಕ್ಟೋಬರ್‌ನಲ್ಲಿ ಪೋಸ್ಟ್ ಪ್ರೊಡಕ್ಷನ್ಸ್ ಮುಗಿಸಿ ನವೆಂಬರ್‌ನಲ್ಲಿ ಪ್ರಚಾರ ಆರಂಭಿಸುವ ಪ್ಲ್ಯಾನ್ ಇದೆಯಂತೆ.
ಡಿಸೆಂಬರ್ ಮೊದಲ ವಾರದಲ್ಲಿ 'ಪುಷ್ಪ-2' ಸಿನಿಮಾ ತೆರೆಗೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗುತ್ತಿದೆ. ನಿರೀಕ್ಷೆ ಹೆಚ್ಚಿರುವುದರಿಂದ ಚಿತ್ರಕಥೆಯಲ್ಲಿ ಪದೇ ಪದೆ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಮತ್ತೆ ಮತ್ತೆ ಚಿತ್ರೀಕರಣ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎನ್ನುವವರು ಇದ್ದಾರೆ. ಆದರೆ ಯಾವುದರ ಬಗ್ಗೆ ಕೂಡ ಅಧಿಕೃತ ಮಾಹಿತಿ ಇಲ್ಲ.


Click it and Unblock the Notifications











