For Quick Alerts
  ALLOW NOTIFICATIONS  
  For Daily Alerts

  ದಿಲ್ ರಾಜು ಮೆಗಾ ಪ್ಲಾನ್: ಪ್ರಶಾಂತ್ ನೀಲ್-ವಿಜಯ್ ಜೊತೆ ಒಪ್ಪಂದ?

  |

  ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಮೆಗಾ ಪ್ರಾಜೆಕ್ಟ್‌ವೊಂದಕ್ಕೆ ತಯಾರಾಗುತ್ತಿದ್ದಾರೆ. ಆರ್ಯ, ಬೊಮ್ಮರಿಲ್ಲು, ಬೃಂದಾವನಂ, ಡಿಜೆ, ಎಂಸಿಎ, ಎಫ್ 2 ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ದಿಲ್ ರಾಜು ಸಂಸ್ಥೆ ಈಗ ಮೊಟ್ಟ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಕಡೆ ದೃಷ್ಟಿ ನೆಟ್ಟಿದೆ.

  ತಮಿಳು ನಟ ವಿಜಯ್ ಜೊತೆ ಸೇರಿ ದೊಡ್ಡ ಪ್ರಾಜೆಕ್ಟ್ ತಯಾರಿಸಲು ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ವಿಜಯ್ ಅವರು 65ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ 66ನೇ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ. ಈ ನಡುವೆ ದಿಲ್ ರಾಜು ಜೊತೆ 67ನೇ ಸಿನಿಮಾ ಆರಂಭಿಸುವ ಹಂತದಲ್ಲಿದ್ದಾರೆ ಎನ್ನಲಾಗಿದೆ. ದಿಲ್ ರಾಜು ಮತ್ತು ವಿಜಯ್ ಜೊತೆ 'ಕೆಜಿಎಫ್' ಸಾರಥಿ ಕೈಜೋಡಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ನಲ್ಲಿ ಪ್ರಶಾಂತ್-ದಿಲ್ ರಾಜು

  ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ನಲ್ಲಿ ಪ್ರಶಾಂತ್-ದಿಲ್ ರಾಜು

  ತಮಿಳು ನಟ ವಿಜಯ್ ಜೊತೆ ದಿಲ್ ರಾಜು ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಈ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಈ ಕುರಿತು ಬಾಲಿವುಡ್ ವೆಬ್‌ಸೈಟ್ 'ಪಿಂಕ್‌ವಿಲ್ಲಾ' ಎಕ್ಸ್‌ಕ್ಲೂಸಿವ್ ವರದಿ ಮಾಡಿದೆ.

  ಭೇಟಿಯಾಗಿದೆ, ಒಂದು ಸುತ್ತಿನ ಮಾತುಕತೆ ಮುಗಿದಿದೆ

  ಭೇಟಿಯಾಗಿದೆ, ಒಂದು ಸುತ್ತಿನ ಮಾತುಕತೆ ಮುಗಿದಿದೆ

  ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ನಿರ್ಮಾಪಕ ದಿಲ್ ರಾಜು, ನಿರ್ದೇಶಕ ಪ್ರಶಾಂತ್ ನೀಲ್, ನಟ ವಿಜಯ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದು, ಪ್ರಶಾಂತ್ ಅವರಿಗೆ ಸ್ಕ್ರಿಪ್ಟ್ ಅಭಿವೃದ್ಧಿ ಪಡಿಸುವಂತೆ ವಿಜಯ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

  ಪ್ರಭಾಸ್ ಜೊತೆ ದಿಲ್ ರಾಜು ಸಿನಿಮಾ?

  ಪ್ರಭಾಸ್ ಜೊತೆ ದಿಲ್ ರಾಜು ಸಿನಿಮಾ?

  ಈ ಹಿಂದಿನ ಸುದ್ದಿಯಂತೆ ನಟ ಪ್ರಭಾಸ್ ಜೊತೆ ದಿಲ್ ರಾಜು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಈ ಪ್ರಾಜೆಕ್ಟ್‌ ಬಗ್ಗೆ ಸದ್ಯಕ್ಕೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನಿರ್ಮಾಪಕರ ಮೂಲ ಖಚಿತಪಡಿಸಿದೆಯಂತೆ.

  ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್?

  ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್?

  ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿರುವ ಪ್ರಶಾಂತ್ ನೀಲ್, ಇದಾದ ಬಳಿಕ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾಗೆ ಕೈಹಾಕಿದ್ದಾರಂತೆ. ಆದ್ರೆ, ಈ ಚಿತ್ರಕ್ಕೆ ನಿರ್ಮಾಪಕ ಯಾರಾಗಬಹುದು ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ. ಈ ನಡುವೆ ವಿಜಯ್-ದಿಲ್ ರಾಜು ಪ್ರಾಜೆಕ್ಟ್ ವಿಷಯ ಚರ್ಚೆಯಾಗುತ್ತಿರುವುದು ಕುತೂಹಲ ಹೆಚ್ಚಿಸಿದೆ.

  English summary
  Producer Dil Raju planning to make Pan india movie with Tamil superstar Vijay. It will be directed by prashanth neel says sources.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X