ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಇನ್ನೊಂದು ಚಿತ್ರ: ನಿರ್ಮಾಪಕ ಯಾರು?

ಬಾಹುಬಲಿ ನಟ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಸಲಾರ್ ಸಿನಿಮಾ ತಯಾರಾಗುತ್ತಿದೆ. 'ಬಾಹುಬಲಿ' ಆದ್ಮೇಲೆ ಪ್ರಭಾಸ್‌ರಿಂದ ಒಳ್ಳೆಯ ಚಿತ್ರ ಬಂದಿಲ್ಲ. ಬಹುಶಃ ಸಲಾರ್ ಸಿನಿಮಾ ಡಾರ್ಲಿಂಗ್‌ಗೆ ಮತ್ತೆ ಬ್ರೇಕ್ ಕೊಡಬಹುದು ಎಂದು ಅಂದಾಜಿಸಲಾಗಿದೆ. ಕೆಜಿಎಫ್ ಚಿತ್ರದಂತೆ ಸಲಾರ್ ಕೂಡ ಬಾಕ್ಸ್ ಆಫೀಸ್‌ ಧೂಳೆಬ್ಬಿಸಲಿದೆ ಎಂಬ ಮಾತುಗಳಿವೆ.

ಸಲಾರ್ ಚಿತ್ರೀಕರಣ ಹಂತಹಂತವಾಗಿ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈಗಾಗಲೇ ಎರಡು ಶೆಡ್ಯೂಲ್‌ ಮುಗಿಸಿರುವ ಸಲಾರ್ ಈಗ ಮೂರನೇ ಶೆಡ್ಯೂಲ್‌ಗೆ ತಯಾರಿ ಮಾಡಿಕೊಂಡಿದೆ. ಸಲಾರ್ ಚಿತ್ರದ ನಂತರ ಪ್ರಭಾಸ್ ಮೂರ್ನಾಲ್ಕು ಮೆಗಾ ಪ್ರಾಜೆಕ್ಟ್‌ಗಳು ಲೈನ್ ಅಪ್ ಆಗಿದೆ. ಈ ಕಡೆ ಪ್ರಶಾಂತ್ ನೀಲ್‌ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದೀಗ, ಟಾಲಿವುಡ್ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೋಡಿಯಲ್ಲಿ ಇನ್ನೊಂದು ಚಿತ್ರಕ್ಕೆ ತಯಾರಿ ನಡೆದಿದೆಯಂತೆ. ಮುಂದೆ ಓದಿ...

ಸಲಾರ್ ಮುಗಿದ್ಮೇಲೆ ಮತ್ತೆ ಸಿನಿಮಾ

ಸಲಾರ್ ಮುಗಿದ್ಮೇಲೆ ಮತ್ತೆ ಸಿನಿಮಾ

'ಸಲಾರ್' ಸಿನಿಮಾ ಮುಗಿದ ಮೇಲೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಮತ್ತೊಂದು ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎನ್ನುವ ಸುದ್ದಿ ಈಗ ಮಾಯಾನಗರಿಯಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಭಾಸ್ ಅದಾಗಲೇ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಟ್ಟಿದ್ದು, ಈ ಚಿತ್ರ ನಿರ್ದೇಶಿಸಲು ಪ್ರಶಾಂತ್ ನೀಲ್ ಅವರನ್ನೇ ಬುಕ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಇನ್ನು ಸಲಾರ್ ಚಿತ್ರ 2022ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ಹಿನ್ನೆಲೆ ಸಲಾರ್ ಬಿಡುಗಡೆ ಮುಂದೂಡಲಾಗಿದೆ. ಸಲಾರ್ ಘೋಷಿಸಿದ್ದ ದಿನಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ.

ದಿಲ್ ರಾಜು ನಿರ್ಮಾಣ

ದಿಲ್ ರಾಜು ನಿರ್ಮಾಣ

ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್- SVC ಸಂಸ್ಥೆಯಲ್ಲಿ ಪ್ರಭಾಸ್‌ಗೆ ಸಿನಿಮಾ ಮಾಡಬೇಕು ಎನ್ನುವುದು ಬಹಳ ವರ್ಷಗಳ ಕಮಿಟ್‌ಮೆಂಟ್. ಈಗ ಈ ಪ್ರಾಜೆಕ್ಟ್‌ಗೆ ಪ್ರಶಾಂತ್ ನೀಲ್ ಅವರಿಂದ ಆಕ್ಷನ್ ಕಟ್ ಹೇಳಿಸಬೇಕು ಎಂದು ನಿರ್ಮಾಪಕರು ಮುಂದಾಗಿದ್ದಾರೆ. ಆ ಕಡೆ ಪ್ರಶಾಂತ್ ನೀಲ್ ಜೊತೆಯೂ ದಿಲ್ ರಾಜು ಈಗಾಗಲೇ ಮಾತನಾಡಿದ್ದಾರೆ.

ದಳಪತಿ 66 ಆರಂಭ

ದಳಪತಿ 66 ಆರಂಭ

ತಮಿಳಿನ ಸೂಪರ್ ಸ್ಟಾರ್ ವಿಜಯ್ ಜೊತೆ ದಿಲ್ ರಾಜು ಸಿನಿಮಾ ಮಾಡ್ತಿದ್ದಾರೆ. ಇದು ದಳಪತಿ 66ನೇ ಪ್ರಾಜೆಕ್ಟ್. ತೆಲುಗಿನ ಖ್ಯಾತ ನಿರ್ದೇಶಕ ವಂಶಿ ಪೈದಿಪಲ್ಲಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಪೂರ್ವ ತಯಾರಿ ನಡೆದಿದ್ದು, 65ನೇ ಸಿನಿಮಾ ಬೀಸ್ಟ್ ಮುಗಿದ ಬಳಿಕ ಈ ಚಿತ್ರ ಪ್ರಾರಂಭವಾಗಲಿದೆ.

ಪ್ರಭಾಸ್ ಸಿನಿಮಾಗಳು

ಪ್ರಭಾಸ್ ಸಿನಿಮಾಗಳು

ಸದ್ಯಕ್ಕೆ ಪ್ರಭಾಸ್ ಸಹ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಹೈದರಾಬಾದ್, ಮುಂಬೈ ಅಂತಹ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ಮಾಡ್ತಿದ್ದಾರೆ. ರಾಧೆಶ್ಯಾಮ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ಜೊತೆ ಸಲಾರ್ ಹಾಗೂ ಓಂ ರಾವತ್ ಜೊತೆಗಿನ ಆದಿಪುರುಷ್ ಸಿನಿಮಾಗಳ ಚಿತ್ರೀಕರಣ ಸಾಗ್ತಿದೆ. ನಾಗ್ ಅಶ್ವಿನ್ ಜೊತೆಗಿನ 21ನೇ ಸಿನಿಮಾ ಪೂರ್ವ ತಯಾರಿ ಮಾಡ್ತಿದ್ದು, ಶೀಘ್ರದಲ್ಲಿ ಈ ಚಿತ್ರವೂ ಶುರುವಾಗಲಿದೆ. ಹಾಗ್ನೋಡಿದ್ರೆ, ಎರಡು ವರ್ಷಕ್ಕೆ ಪ್ರಭಾಸ್ ಕಾಲ್‌ಶೀಟ್ ಬುಕ್ ಆಗಿದೆ. ಈ ನಡುವೆ ರಾಜಮೌಳಿ ಜೊತೆ ಪ್ರಭಾಸ್ ಮತ್ತೆ ಸಿನಿಮಾ ಮಾಡುವ ಬಗ್ಗೆ ಬೆಳವಣಿಗೆ ನಡೆಯುತ್ತಿದೆಯಂತೆ.

More from Filmibeat

English summary
Sri venkateswara creations producer Dil Raju Planning To Next Project With Prabhas and Prashanth neel?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X