ಮತ್ತೊಬ್ಬ ನಿರ್ದೇಶಕನಿಗೆ ಸಿಕ್ತು ಯಶ್ ಕಾಲ್ ಶೀಟ್

By Naveen

Recommended Video

ಕೆ.ಜಿ.ಎಫ್ ನಂತರ ಮೂರು ಸಿನಿಮಾಗಳಲ್ಲಿ ಯಶ್ ಬ್ಯುಸಿ ಆಗಲಿದ್ದಾರೆ..!! | Filmibeat Kannada

ಯಶ್ ಹೆಸರು ಕೇಳುತ್ತಿದ್ದ ಹಾಗೆ ಸದ್ಯ ನೆನಪಾಗುವ ಸಿನಿಮಾ 'ಕೆ ಜಿ ಎಫ್'. ಈ ಸಿನಿಮಾಗಾಗಿ ಯಶ್ ತಮ್ಮ ಎಲ್ಲ ಸಮಯವನ್ನು ಮೀಸಲಿಟ್ಟಿದ್ದಾರೆ. ಬೆಳಗ್ಗೆಯಿಂದ ರಾತ್ರಿ ವರೆಗೆ 'ಕೆ ಜಿ ಎಫ್' ಸೆಟ್ ನಲ್ಲಿರುವ ಯಶ್ ಆ ಸಿನಿಮಾಗಾಗಿ ತುಂಬ ಕೆಲಸ ಮಾಡುತ್ತಿದ್ದಾರೆ.

'ಕೆ ಜಿ ಎಫ್' ನಂತರ 'ಕೆ ಜಿ ಎಫ್' ಎರಡನೇ ಭಾಗ ಬರಲಿದೆ. ಆ ಬಳಿಕ ನಿರ್ದೇಶಕ ಹರ್ಷ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ. ಅದು ಮುಗಿದ ಮೇಲೆ 'ಮಫ್ತಿ' ಖ್ಯಾತಿಯ ನರ್ತನ್ ಅವರು ಯಶ್ ಗೆ ಡೈರೆಕ್ಷನ್ ಮಾಡಲಿದ್ದಾರೆ. ಈ ಎಲ್ಲ ಸಿನಿಮಾಗಳ ಜೊತೆಗೆ ಈಗ ಕನ್ನಡದ ಮತ್ತೊಬ್ಬ ನಿರ್ದೇಶಕನಿಗೆ ಯಶ್ ಕಾಲ್ ಶೀಟ್ ಸಿಕ್ಕಿದೆ.

ಅಂದಹಾಗೆ, ಯಶ್ ಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ಪಡೆದಿರುವ ಆ ನಿರ್ದೇಶಕ ಯಾರು ಎಂಬ ವಿವರ ಮುಂದಿದೆ ಓದಿ.

ನಿರ್ದೇಶಕ ಅನಿಲ್ ಕುಮಾರ್

ನಿರ್ದೇಶಕ ಅನಿಲ್ ಕುಮಾರ್

ಕನ್ನಡದ ನಿರ್ದೇಶಕ ಅನಿಲ್ ಕುಮಾರ್ ಈಗ ಯಶ್ ಗಾಗಿ ಒಂದು ಕಥೆ ಮಾಡುತ್ತಿದ್ದಾರಂತೆ. ರಾಕಿಂಗ್ ಸ್ಟಾರ್ ಕಡೆಯಿಂದ ಅನಿಲ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯ ಬರವಣಿಗೆ ಕೆಲಸದಲ್ಲಿ ಅವರು ತೊಡಗಿದ್ದಾರೆ. ಸೋ, ಸ್ಯಾಂಡಲ್ ವುಡ್ ಓಡುವ ಕುದುರೆ ಯಶ್ ಕಾಲ್ ಶೀಟ್ ಸಿಕ್ಕ ಖುಷಿಯಲ್ಲಿ ಸದ್ಯ ಅನಿಲ್ ಇದ್ದಾರೆ.

'Rambo 2' ನಿರ್ದೇಶಕ

'Rambo 2' ನಿರ್ದೇಶಕ

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವರ್ಷಗಳಿಂದ ಸಂಭಾಷಣೆ ಬರೆಯುತ್ತಿದ್ದ ಅನಿಲ್ ಕುಮಾರ್ 'ದಿಲ್ ವಾಲ' ಚಿತ್ರದ ಮೂಲಕ ನಿರ್ದೇಶಕರಾದರು. ಇತ್ತೀಚಿಗಷ್ಟೆ ಶರಣ್ ನಟನೆಯ 'Rambo 2' ಸಿನಿಮಾಗೆ ಸಹ ಅನಿಲ್ ಅವರೇ ಆಕ್ಷನ್ ಕಟ್ ಹೇಳಿದ್ದರು. ಇದೀಗ 'Rambo 2' ಗೆಲುವಿನ ಜೊತೆಗೆ ಅನಿಲ್ ಗೆ ಬಂಪರ್ ಅವಕಾಶ ಬಂದಿದೆ.

ಯಶ್ ಚಿತ್ರಗಳಿಗೆ ಕೆಲಸ ಮಾಡಿದ್ದರು

ಯಶ್ ಚಿತ್ರಗಳಿಗೆ ಕೆಲಸ ಮಾಡಿದ್ದರು

ಯಶ್ ನಟನೆಯ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾಗೆ ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದರು. ಜೊತೆಗೆ ಯಶ್ ಬಳಗದಲ್ಲಿ ಸಹ ಇದ್ದರು. ಹೀಗಾಗಿ ಅನಿಲ್ ಅವರ ಪ್ರತಿಭೆ ತಿಳಿದಿದ್ದ ಯಶ್ ಅವರ ಜೊತೆಗೆ ಒಂದು ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.

ಯಾವಾಗ ಶುರು ಆಗುತ್ತದೆ

ಯಾವಾಗ ಶುರು ಆಗುತ್ತದೆ

ಅನಿಲ್ ಕುಮಾರ್ ಮತ್ತು ಯಶ್ ಕಾಂಬಿನೇಶನ್ ಸಿನಿಮಾ ಯಾವಗ ಶುರು ಆಗುತ್ತದೆ ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ನಿರ್ದೇಶಕ ಅನಿಲ್ ರೀತಿ ಹರ್ಷ ಹಾಗೂ ನರ್ತನ್ ರೊಂದಿಗೆ ಸಹ ಯಶ್ ಸಿನಿಮಾ ಮಾಡಬೇಕಾಗಿದ್ದು, ಇವುಗಳಲ್ಲಿ ಯಾವ ಚಿತ್ರ ಮೊದಲ ಶುರು ಆಗುತ್ತದೆ ನೋಡಬೇಕು.

ಸಿನಿಮಾಗಳ ಸಾಲು

ಸಿನಿಮಾಗಳ ಸಾಲು

ನಟ ಯಶ್ ಒಂದು ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದರು ಆದರೆ, ಈಗ ಅವರ ಸಿನಿಮಾಗಳ ಸಾಲು ದೊಡ್ಡದಾಗಿದೆ. ಈ ಮೂರು ಸಿನಿಮಾಗಳ ಪೈಕಿ ಒಂದರ ನಂತರ ಒಂದರಲ್ಲಿ ಯಶ್ ನಟಿಸುತ್ತಾರೆ.

More from Filmibeat

English summary
Kannada Director, 'Rambo 2' movie fame Anil Kumar writing a story for Rocking Star Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X