For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್-ಅಟ್ಲಿ ಚಿತ್ರದ ಅಪ್‌ಡೇಟ್: ಆಗಸ್ಟ್ ತಿಂಗಳಲ್ಲಿ ಸರ್ಪ್ರೈಸ್

  |

  ತಮಿಳು ನಿರ್ದೇಶಕ ಅಟ್ಲಿ ಜೊತೆ ಬಾಲಿವುಡ್ ನಟ ಶಾರೂಖ್ ಖಾನ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ. ವಿಜಯ್ ಜೊತೆ ಸತತವಾಗಿ ಸಿನಿಮಾ ಮಾಡಿ ಹಿಟ್ ಮೇಲೆ ಹಿಟ್ ಬಾರಿಸಿರುವ ಅಟ್ಲಿ ಈಗ ಬಿಟೌನ್ ಬಾದ್‌ಶಾ ಜೊತೆ ಪ್ರಾಜೆಕ್ಟ್‌ಗೆ ತಯಾರಿ ನಡೆಸಿದ್ದಾರೆ. ಈ ಚಿತ್ರ ಅಧಿಕೃತವಾಗಿ ಯಾವಾಗ ಘೋಷಣೆ ಆಗುತ್ತೆ ಎಂಬ ಕುತೂಹಲ ಕಾಡ್ತಿದೆ. ಅದಕ್ಕೀಗ ಉತ್ತರ ಸಿಕ್ಕಿದೆ.

  ಶಾರೂಖ್ ಖಾನ್ ಮತ್ತು ಅಟ್ಲಿ ಸಿನಿಮಾದ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಈ ಜೋಡಿಯಿಂದ ಸರ್ಪ್ರೈಸ್ ಸುದ್ದಿ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾರೂಖ್ ಖಾನ್ ಜೊತೆಗಿನ ಸಿನಿಮಾವನ್ನು ಬಹಳ ವಿಶೇಷವಾಗಿ ಘೋಷಿಸಲು ಯೋಜನೆ ಹಾಕಿರುವ ಅಟ್ಲಿ ಅದಕ್ಕಾಗಿ ಸ್ಪೆಷಲ್ ಟೀಸರ್ ಸಿದ್ದಪಡಿಸುತ್ತಿದ್ದಾರಂತೆ. ಈಗಾಗಲೇ ಮುಂಬೈಗೆ ಹೋಗಿರುವ ಅಟ್ಲಿ ಟೀಸರ್ ರೆಡಿ ಮಾಡುತ್ತಿರುವ ಸಮಾಚಾರ ಈಗ ಸೌತ್ ದುನಿಯಾದಲ್ಲಿ ವರದಿಯಾಗಿದೆ.

  'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್

  ಇದುವರೆಗೂ ಹಲವು ಬಾರಿ ಶಾರೂಖ್ ಖಾನ್ ಮತ್ತು ಅಟ್ಲಿ ಪರಸ್ಪರ ಭೇಟಿ ಮಾಡಿದ್ದಾರೆ. ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದಾರೆ. ಆದರೂ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೆ, ಬೇರೊಂದು ಚಿತ್ರದಲ್ಲಿ ಶಾರೂಖ್ ನಟಿಸುತ್ತಿದ್ದಾರೆ. ಅಂತಿಮವಾಗಿ ಅಟ್ಲಿ ಜೊತೆಗಿನ ಚಿತ್ರ ಪ್ರಕಟಿಸುವ ಸಮಯ ಬಂದಿದೆ. ಮುಂದೆ ಓದಿ...

  ಆಗಸ್ಟ್ 15ಕ್ಕೆ ಸಿನಿಮಾ ಘೋಷಣೆ

  ಆಗಸ್ಟ್ 15ಕ್ಕೆ ಸಿನಿಮಾ ಘೋಷಣೆ

  ವಿಶೇಷವಾದ ಟೀಸರ್ ಮೂಲಕ ಶಾರೂಖ್ ಖಾನ್ ಜೊತೆಗಿನ ಸಿನಿಮಾವನ್ನು ಘೋಷಿಸಲು ನಿರ್ಧರಿಸಿದ್ದಾರೆ ಅಟ್ಲಿ. ಅದಕ್ಕಾಗಿ ಪೂರ್ವ ಸಿದ್ದತೆ ನಡೆಯುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15 ರಂದು ಟೀಸರ್ ರಿಲೀಸ್ ಮಾಡಲಿದ್ದಾರೆ ಎನ್ನಲಾಗಿದೆ. ಸುಮಾರು ಎರಡು ವರ್ಷದಿಂದ ಈ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದು, ಅಂತಿಮವಾಗಿ ಚಿತ್ರದ ಅಪ್‌ಡೇಟ್ ಸಿಗುತ್ತಿದೆ.

  ಶೀರ್ಷಿಕೆ ಇದೇನಾ?

  ಶೀರ್ಷಿಕೆ ಇದೇನಾ?

  ಅಟ್ಲಿ ಹೇಳಿದ ಕಥೆಯನ್ನು ಮೆಚ್ಚಿಕೊಂಡ ಶಾರೂಖ್ ಖಾನ್ ಈ ಪ್ರಾಜೆಕ್ಟ್ ಮಾಡಲು ಸಮ್ಮತಿ ಸೂಚಿಸಿದ್ದರು. ಚಿತ್ರದ ಪ್ರಮುಖ ಕಥೆ ಇಷ್ಟ ಆದ್ಮೇಲೆ ಸ್ಕ್ರಿಪ್ಟ್ ಮೇಲೆ ಮತ್ತಷ್ಟು ಕೆಲಸ ಮಾಡಲು ಶಾರೂಖ್ ಸಲಹೆ ಕೊಟ್ಟಿದ್ದರಂತೆ. ಶಾರೂಖ್ ಸಲಹೆ ಹಿನ್ನೆಲೆ ಕೆಲವು ಬದಲಾವಣೆಗಳೊಂದಿಗೆ ಸ್ಕ್ರಿಪ್ಟ್ ಫೈನಲ್ ಮಾಡಲಾಗಿದೆ. ಶಾರೂಖ್ ಆಪ್ತ ನಿರ್ದೇಶಕರು ಸಹ ಈ ಸ್ಕ್ರಿಪ್ಟ್‌ಗೆ ಸಲಹೆ ಕೊಟ್ಟಿರುವ ಬಗ್ಗೆಯೂ ಸುದ್ದಿ ಇದೆ. ಈ ಕಥೆಗೆ ಶಾರೂಖ್ ಖಾನ್ ಅವರೇ ಸೂಕ್ತ ಎಂದು ನಿರ್ಧರಿಸಿದ್ದ ಅಟ್ಲಿ ಅವರ ಇಷ್ಟದಂತೆ ಸ್ಕ್ರಿಪ್ಟ್ ಪಕ್ಕಾ ಮಾಡಿದ್ದಾರೆ. ಸದ್ಯದ ವರದಿ ಪ್ರಕಾರ, ಈ ಚಿತ್ರಕ್ಕೆ 'ಸಂಖಿ' ಎಂದು ಹೆಸರಿಡಲಾಗಿದೆಯಂತೆ. ಆದರೆ, ಇದು ಅಂತಿಮವಾಗಿಲ್ಲ.

  'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ

  ರಾಜ್ ಕುಮಾರ್ ಹಿರಾನಿ ಜೊತೆ ಸಿನಿಮಾ

  ರಾಜ್ ಕುಮಾರ್ ಹಿರಾನಿ ಜೊತೆ ಸಿನಿಮಾ

  ಸದ್ಯ ಶಾರೂಖ್ ಖಾನ್ 'ಪಠಾಣ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದು, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ. ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಹೊಸ ಸಿನಿಮಾವೊಂದು ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

  ಅಟ್ಲಿ ಚಿತ್ರಕ್ಕೆ ನಯನತಾರ ನಾಯಕಿ

  ಅಟ್ಲಿ ಚಿತ್ರಕ್ಕೆ ನಯನತಾರ ನಾಯಕಿ

  ಅಟ್ಲಿ ಮತ್ತು ಶಾರೂಖ್ ಖಾನ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಲಿರುವ ಹೊಸ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಅಟ್ಲಿ ಜೊತೆ 'ರಾಜರಾಣಿ' ಸಿನಿಮಾದಲ್ಲಿ ನಯನತಾರ ಅಭಿನಯಿಸಿದ್ದರು. ಈಗ ಶಾರೂಖ್ ಚಿತ್ರದೊಂದಿಗೆ ಬಾಲಿವುಡ್‌ ಪ್ರವೇಶಿಸಿಲಿದ್ದಾರೆ ಎನ್ನಲಾಗಿದೆ.

  ಮೂರು ವರ್ಷದಿಂದ ಸಿನಿಮಾ ಇಲ್ಲ

  ಮೂರು ವರ್ಷದಿಂದ ಸಿನಿಮಾ ಇಲ್ಲ

  2018ರಲ್ಲಿ 'ಜೀರೋ' ಸಿನಿಮಾ ಬಿಡುಗಡೆಯಾಗಿತ್ತು. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಹಾಗೂ ಶಾರೂಖ್ ಖಾನ್ ನಟಿಸಿದ್ದರು. ಈ ಸಿನಿಮಾ ಬಳಿಕ ಶಾರೂಖ್ ಖಾನ್ ನಟನೆಯ ಯಾವ ಚಿತ್ರಗಳು ಬಿಡುಗಡೆಯಾಗಿಲ್ಲ. ಸುಮಾರು ಮೂರು ವರ್ಷದ ನಂತರ 'ಪಠಾಣ್' ಸಿನಿಮಾ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿದೆ.

  ಮುಂದಿನ ಚಿತ್ರದ ಬಗ್ಗೆ 'ದೊಡ್ಡ ಸುಳಿವು' ನೀಡಿದ ಶಾರೂಖ್ ಖಾನ್ಮುಂದಿನ ಚಿತ್ರದ ಬಗ್ಗೆ 'ದೊಡ್ಡ ಸುಳಿವು' ನೀಡಿದ ಶಾರೂಖ್ ಖಾನ್

  ಎನ್‌ಟಿಆರ್ ಜೊತೆ ಅಟ್ಲಿ ಸಿನಿಮಾ

  ಎನ್‌ಟಿಆರ್ ಜೊತೆ ಅಟ್ಲಿ ಸಿನಿಮಾ

  ಥೇರಿ, ಮೆರ್ಸಲ್, ಬಿಗಿಲ್ ಅಂತಹ ಚಿತ್ರಗಳ ಮೂಲಕ ಸತತ ಹಿಟ್ ಬಾರಿಸಿದ ಅಟ್ಲಿ, ತೆಲುಗು ನಟ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾವೊಂದು ಮಾಡಬೇಕಿದೆ. ಎನ್‌ಟಿಆರ್ ಸಹ ಅಟ್ಲಿ ಜೊತೆ ಪ್ರಾಜೆಕ್ಟ್ ಮಾಡಲು ಮನಸ್ಸು ಮಾಡಿದ್ದರು. ಅದಕ್ಕೂ ಮುಂಚೆ ಶಾರೂಖ್ ಖಾನ್ ಚಿತ್ರಕ್ಕೆ ಅಟ್ಲಿ ಕಮಿಟ್ ಆಗಿರುವ ಕಾರಣ ಈ ಕಾಂಬಿನೇಷನ್ ಸಿನಿಮಾ ಸ್ವಲ್ಪ ವಿಳಂಬವಾಗಬಹುದು.

  English summary
  According to latest buzz, Tamil Director Atlee set plan to launch teaser of Shahrukh khan movie.
  Wednesday, August 4, 2021, 13:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X