For Quick Alerts
  ALLOW NOTIFICATIONS  
  For Daily Alerts

  ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಬರ್ತಾರಂತೆ ಮಾಜಿ ಸ್ಟಾರ್ ಹೀರೊಯಿನ್: ಯಾರವರು?

  |

  ಜೂ. ಎನ್‌ಟಿಆರ್ 30ನೇ ಸಿನಿಮಾ ಬಗ್ಗೆ ಕೂತೂಹಲ ಗರಿಗೆದರಿದೆ. ಯಾಕಂದ್ರೆ, RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ಹೀಗಾಗಿ ಕಥೆ, ಸ್ಕ್ರೀನ್ ಪ್ಲೇನಲ್ಲಿ ಕಾಂಪ್ರಮೈಸ್ ಆಗೋ ಮಾತೇ ಇಲ್ಲ. ಈ ಕಾರಣಕ್ಕೆ ತಡವಾದರೂ ಪರವಾಗಿಲ್ಲ. ಸಂಪೂರ್ಣ ರೆಡಿಯಾಗಿದ್ದು ಕೊಂಡು ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ.

  ಅಸಲಿಗೆ ಕೊರಟಾಲ ಶಿವಗೂ ಮುನ್ನ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾದಲ್ಲಿ ಜೂ. ಎನ್‌ಟಿಆರ್ ನಟಿಸಬೇಕಿತ್ತಂತೆ. ತ್ರಿವಿಕ್ರಮ್ ಸಿನಿಮಾ ಮಾಡಬೇಕು ಅಂತ ಅನಿಸಿದ್ದರೂ, ನಿರ್ದೇಶಕರು ಹೇಳಿದ ಸ್ಟೋರಿ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಇರದೇ ಇದ್ದಿದ್ದರಿಂದ ಆ ಪ್ರಾಜೆಕ್ಟ್ ಅನ್ನು ಬದಿಗಿಟ್ಟಿದ್ದಾರು ಎನ್ನಲಾಗಿದೆ. ಈ ಕಾರಣಕ್ಕೆ ಕೊರಟಾಲ ಶಿವ ಹೇಳಿದ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಎನ್ನುತ್ತಿವೆ ಟಾಲಿವುಡ್ ಮೂಲಗಳು.

  ಜೂ ಎನ್‌ಟಿಆರ್‌ಗೆ ತೆಲಂಗಾಣ ಸಿಎಂ ಟಾಂಗ್: 'ಬ್ರಹ್ಮಾಸ್ತ್ರ' ತಂಡಕ್ಕೆ ಭಾರಿ ನಷ್ಟ!ಜೂ ಎನ್‌ಟಿಆರ್‌ಗೆ ತೆಲಂಗಾಣ ಸಿಎಂ ಟಾಂಗ್: 'ಬ್ರಹ್ಮಾಸ್ತ್ರ' ತಂಡಕ್ಕೆ ಭಾರಿ ನಷ್ಟ!

  ಹೊಸ ಕಥೆ ಹೇಳಿದ ಕೊರಟಾಲ ಶಿವ

  ಹೊಸ ಕಥೆ ಹೇಳಿದ ಕೊರಟಾಲ ಶಿವ

  ಕೊರಟಾಲ ಶಿವ ಹೇಳಿದ ಕಥೆಯೊಳಗೂ ಹಲವು ಲೋಪ ದೋ‍ಷಗಳಿದ್ದು, ಸರಿಪಡಿಸಲು ಹೇಳಿದ್ದಾರೆನ್ನಲಾಗಿದೆ. ಜೂ.ಎನ್‌ಟಿಆರ್‌ಗೆ ಹಲವು ಅನುಮಾನಗಳಿರುವುದರಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ಆದರೆ, ದಿಢೀರನೇ ಕೊರಟಾಲ ಶಿವ ಇನ್ನೊಂದು ಕಥೆ ಹೇಳಿದ್ದಾರೆನ್ನಲಾಗಿದೆ. ಹೀಗಾಗಿ ಜೂ.ಎನ್‌ಟಿಆರ್ ಸಿನಿಮಾಗೆ ಸ್ಟಾರ್‌ಗಳನ್ನು ಆಯ್ಕೆ ಮಾಡುವಲ್ಲಿಯೂ ಸಾಕಷ್ಟು ಗಮನ ಹರಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಹೊಸ ವಿಷಯವೇನಂದ್ರೆ, ನಿರ್ದೇಶಕ ಕೊರಟಾಲ ಶಿವ ಇತ್ತೀಚೆಗಷ್ಟೇ ಸ್ಕ್ರಿಪ್ಟ್ ಮುಗಿಸಿದ್ದಾರಂತೆ. ಕೊರಟಾಲ ಶಿವ ಸ್ಕ್ರಿಪ್ಟ್ ಮುಗಿಸಿದ ಬಳಿಕ ಎನ್ ಟಿಆರ್‌ಗೆ ಕಾನ್ಫಿಡೆನ್ಸ್ ಬಂದಿದೆ ಎನ್ನಲಾಗಿದೆ. ಹೀಗಾಗಿ ಕೂಡಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

  ಆ ಹೀರೊಯಿನ್ ಯಾರು?

  ಆ ಹೀರೊಯಿನ್ ಯಾರು?

  ಜೂ. ಎನ್‌ಟಿಆರ್ 30ನೇ ಸಿನಿಮಾದ ಪ್ರಮುಖ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ಶುರುವಾಗಿದೆಯಂತೆ. RRR ಬಳಿಕ ಜೂ.ಎನ್‌ಟಿಆರ್ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಾಗಿ ಜನಪ್ರಿಯ ನಟರನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಪ್ರಮುಖ ಪಾತ್ರಕ್ಕಾಗಿ ನಿರ್ದೇಶಕ ಕೊರಟಾಲ ಮಾಜಿ ಸ್ಟಾರ್ ನಟಿಯರನ್ನು ಸಂಪಕ ಮಾಡಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಆಕೆ ಬೇರೆ ಯಾರೂ ಅಲ್ಲ ವಿಜಯಶಾಂತಿ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದು ಕಾಲದಲ್ಲಿ ಟಾಪ್ ಹೀರೊಯಿನ್ ಆಗಿ ವಿಜಯಶಾಂತಿ ಗುರುತಿಸಿಕೊಂಡಿದ್ದರು. ಬಳಿಕ ಕೆಲ ವರ್ಷಗಳ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಅದ್ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಟ್ಟರೋ ಅಲ್ಲಿಂದ ಬಿಗ್ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿರಲಿಲ್ಲ. ಆದರೆ, ಇತ್ತೀಚೆಗೆ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಮತ್ತೆ ನಟಿಸಿದ್ದರು.

  'ಸರಿಲೇಕು ನೀಕೆವ್ವರು' ಬಳಿಕ ಆಫರ್

  'ಸರಿಲೇಕು ನೀಕೆವ್ವರು' ಬಳಿಕ ಆಫರ್

  'ಸರಿಲೇರು ನೀಕೆವ್ವರು' ಸಿನಿಮಾ ಬಳಿಕ ವಿಜಯ್ ಶಾಂತಿಗೆ ಹಲವು ಆಫರ್‌ಗಳು ಬರುತ್ತಿವೆ. ಆದರೂ ವಿಜಯಶಾಂತಿ ಒಪ್ಪಿಕೊಳ್ಳುತ್ತಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಈಗ ಕೊರಟಾಲ ಶಿವ ಜೂ. ಎನ್‌ಟಿಆರ್ 30ನೇ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

  ಜೂ.ಎನ್‌ಟಿಆರ್ ಏನಂದ್ರು?

  ಜೂ.ಎನ್‌ಟಿಆರ್ ಏನಂದ್ರು?

  ಕೊರಟಾಲ ಶಿವ ಕಥೆ ಕೇಳಿದ ಮೇಲೆ ವಿಜಯ್ ಶಾಂತಿ ಆ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಚರ್ಚೆ ಟಾಲಿವುಡ್‌ನಲ್ಲಿ ಆಗುತ್ತಿದೆ. ಜೂ.ಎನ್‌ಟಿಆರ್ ಹಾಗೂ ನಿರ್ಮಾಪಕರೂ ಕೂಡ ಓಕೆ ಎಂದಿದ್ದಾರಂತೆ. ಆದರೆ, ವಿಜಯ್ ಶಾಂತಿ ಗ್ರೀನ್ ಸಿಗ್ನಲ್ ಕೊಟ್ಟಿರೋ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  English summary
  Director Koratala Siva Approaching Vijay Shanti For Jr NTR Starrer NTR30, Know More
  Wednesday, September 7, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X