ರಿಯಲ್ ಸ್ಟಾರ್ ಮತ್ತು ಕ್ರೇಜಿ ಸ್ಟಾರ್ ಸೇರಿ ಹೊಸ ಮಲ್ಟಿಸ್ಟಾರ್ ಸಿನಿಮಾ!

By Naveen

Recommended Video

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾ ಬರಲಿದೆ...! | Filmibeat Kannada

ಕನ್ನಡದಲ್ಲಿ ಈಗ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚು ಹೆಚ್ಚು ಬರುತ್ತಿದೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ನಟಿಸಿರುವ 'ದಿ ವಿಲನ್' ಸಿನಿಮಾ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಇದೇ ಸಮಯಕ್ಕೆ ಈಗ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ಬರುವುದಕ್ಕೆ ಸಿದ್ಧತೆ ನಡೆದಿದೆ.

ನಟ ಉಪೇಂದ್ರ ಈಗಾಗಲೇ ದರ್ಶನ್, ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸಿದ್ದಾರೆ. ರವಿಚಂದ್ರನ್ ಕೂಡ ಸುದೀಪ್ ಜೊತೆಗೆ ಮೂರು ಸಿನಿಮಾ ಹಾಗೂ ಶಿವಣ್ಣನ ಜೊತೆಗೆ 'ಕೋದಂಡ ರಾಮ' ಸಿನಿಮಾ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಉಪೇಂದ್ರ ಹಾಗೂ ರವಿಚಂದ್ರನ್ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ. ಮುಂದೆ ಓದಿ...

ಕನಕಪುರ ಶ್ರೀನಿವಾಸ್ ನಿರ್ಮಾಣ

ಕನಕಪುರ ಶ್ರೀನಿವಾಸ್ ನಿರ್ಮಾಣ

ಈ ಹಿಂದೆಯೇ ಕನಕಪುರ ಶ್ರೀನಿವಾಸ್ ಅವರ ಬ್ಯಾನರ್ ನಲ್ಲಿ ಉಪೇಂದ್ರ ಒಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಈಗ ಆ ಚಿತ್ರಕ್ಕೆ ರವಿಚಂದ್ರನ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್ ರನ್ನು ಒಂದೇ ಚಿತ್ರದಲ್ಲಿ ಸೇರಿಸುವ ಸಾಹಸವನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡುತ್ತಿದ್ದಾರೆ. 'ಭರ್ಜರಿ' ಚಿತ್ರದ ನಂತರ ಕನಕಪುರ ಶ್ರೀನಿವಾಸ್ ಬಂಡವಾಳ ಹಾಕುತ್ತಿರುವ ಚಿತ್ರ ಇದಾಗಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನ

ಓಂ ಪ್ರಕಾಶ್ ರಾವ್ ನಿರ್ದೇಶನ

ಉಪೇಂದ್ರ ಹಾಗೂ ರವಿಚಂದ್ರನ್ ಅವರ ಈ ಸಿನಿಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ರವಿಚಂದ್ರನ್ ಹಾಗೂ ಉಪೇಂದ್ರ ಇಬ್ಬರು ನಟರಿಗೆ ಹೊಂದಿಕೆ ಆಗುವ ಕಥೆ ತಯಾರಿ ಮಾಡಿಕೊಂಡಿರುವ ಅವರು ಇಬ್ಬರ ಅಭಿಮಾನಿಗಳಿಗೆ ತೃಪ್ತಿ ನೀಡುವ ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ.

ಉಪೇಂದ್ರ ಜೊತೆ ಓಂ ಪ್ರಕಾಶ್ ರಾವ್ ಮೊದಲ ಚಿತ್ರ

ಉಪೇಂದ್ರ ಜೊತೆ ಓಂ ಪ್ರಕಾಶ್ ರಾವ್ ಮೊದಲ ಚಿತ್ರ

ಶಿವರಾಜ್ ಕುಮಾರ್, ದರ್ಶನ್, ರವಿಚಂದ್ರನ್, ಸುದೀಪ್ ಹೀಗೆ ಕನ್ನಡದ ಅನೇಕ ಸ್ಟಾರ್ ನಟರಿಗೆ ಆಕ್ಷನ್ ಹೇಳಿದ್ದ ಓಂ ಪ್ರಕಾಶ್ ರಾವ್ ಇದೇ ಮೊದಲ ಬಾರಿಗೆ ಉಪೇಂದ್ರ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ಓಂ ಪ್ರಕಾಶ್ ರಾವ್ ತಮ್ಮ 'ಸಾಹುಕರ' ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರನ್ನು ಒಟ್ಟಿಗೆ ಸೇರಿಸಿದ್ದರು. ಈಗ ರವಿಚಂದ್ರನ್ ಅವರಿಗೆ ಮತ್ತೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಆಗಸ್ಟ್ ನಲ್ಲಿ ಪ್ರಾರಂಭ

ಆಗಸ್ಟ್ ನಲ್ಲಿ ಪ್ರಾರಂಭ

ಉಪೇಂದ್ರ ಹಾಗೂ ರವಿಚಂದ್ರನ್ ಅವರ ಈ ಸಿನಿಮಾ ಇದೇ ಆಗಸ್ಟ್ ನಲ್ಲಿ ಶುರು ಆಗಲಿದೆಯಂತೆ. ಸದ್ಯಕ್ಕೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಮೂಲಕ ರಿಯಲ್ ಸ್ಟಾರ್ ಹಾಗೂ ಕ್ರೇಜಿ ಸ್ಟಾರ್ ಇಬ್ಬರನ್ನು ಒಂದೇ ಚಿತ್ರದಲ್ಲಿ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಒದಗಲಿದೆ.

ಬೇರೆ ಬೇರೆ ಸಿನಿಮಾದಲ್ಲಿ ಬಿಜಿ

ಬೇರೆ ಬೇರೆ ಸಿನಿಮಾದಲ್ಲಿ ಬಿಜಿ

ಸದ್ಯ ಉಪೇಂದ್ರ 'ಐ ಲವ್ ಯೂ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಳ ಜೊತೆಗೆ ಇಬ್ಬರು ನಟರು ಬೇರೆ ಬೇರೆ ಸಿನಿಮಾಗಳಲ್ಲಿ ಬಿಜಿ ಇದ್ದಾರೆ.

More from Filmibeat

English summary
Kannada director Om Prakash Rao planning to do a multi star movie with Ravichandran and Upedra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X