»   » 'ಕಿರಾತಕ' ನಿರ್ದೇಶಕ ಪ್ರದೀಪ್ ರಾಜ್ ಕಿರಿಕ್ ಸುದ್ದಿ

'ಕಿರಾತಕ' ನಿರ್ದೇಶಕ ಪ್ರದೀಪ್ ರಾಜ್ ಕಿರಿಕ್ ಸುದ್ದಿ

By: ಜೀವನರಸಿಕ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಗೆ ಮೊದಲಿಗೆ ಒಂದು ಭರ್ಜರಿ ಯಶಸ್ವಿ ಸಿನಿಮಾ ಕೊಟ್ಟ ನಿರ್ದೇಶಕ ಅಂದ್ರೆ ಪ್ರದೀಪ್ ರಾಜ್. ಹಾಗಂತ ಅದೇನು ಪ್ರದೀಪ್ ರಾಜ್ ಮಾಡಿದ ಅದ್ಭುತ ಪ್ರಯತ್ನ ಅಲ್ಲ, ಯಾಕಂದ್ರೆ ಅದು ತಮಿಳಿನ ರೀಮೇಕ್ ಚಿತ್ರ.

ಅದಾದ ನಂತರ ದುನಿಯಾ ವಿಜಯ್ ಗೆ 'ರಜನಿಕಾಂತ' ಮಾಡಿ ಸೋತ ಪ್ರದೀಪ್ ರಾಜ್ ಬಳಿಕ 'ಲೂಸಿಯಾ' ನಾಯಕ ನೀನಾಸಂ ಸತೀಶ್ ಗೆ ತಮಿಳಿಂದ ಮತ್ತೊಂದು ರೀಮೇಕ್ ಚಿತ್ರ ತಂದು 'ಅಂಜಂದ ಗಂಡು' ಅಂತ ಟೈಟಲ್ ಇಟ್ಟು ಡೈರೆಕ್ಟ್ ಮಾಡಿದ್ರು ಅದೂ ಕೂಡ ಯಶಸ್ಸು ಕಾಣಲಿಲ್ಲ.

Director Pradeep Raj lands in trouble

ಸದ್ಯ 'ಬೆಂಗಳೂರು 560023' ಅನ್ನೋ ಕ್ರಿಕೆಟ್ ಗೆ ಸಂಬಂಧಪಟ್ಟ ಚಿತ್ರವನ್ನ ತೆರೆಗೆ ತರೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಚಿತ್ರ ಕಳೆದ ವರ್ಷವೇ ಮುಗಿದ್ರೂ ರಿಲೀಸಾಗೋಕೆ ತಿಣುಕಾಡ್ತಿರೋದು ನಿರ್ದೇಶಕ ಮತ್ತು ನಿರ್ಮಾಪಕರಾಗಿರೋ ಪ್ರದೀಪ್ ರಾಜ್ ಬ್ರದರ್ಸ್ ಮಾಡಿರೋ 'ಕಿರಾತಕ' ಕೆಲಸದಿಂದ ಅಂತಿದೆ ಗಾಸಿಪ್ ಗಾಳಿ.

ಚಿತ್ರಕ್ಕಾಗಿ ಕೆಲಸ ಮಾಡಿದ ಹಲವು ಜನರಿಗೆ ಕೊಡೋ ಕಾಸನ್ನ ಕೊಡದೇ ಕಾಡಿಸ್ತಿರೋ ನಿರ್ಮಾಪಕ ಕಮ್ ನಿರ್ದೇಶಕರು ಸಿನಿಮಾ ರಿಲೀಸ್ ಮಾಡೋಕೂ ಕಾಸಿಲ್ಲದೆ. ಹೊರಬಂದಿರೋ ಹಾಡುಗಳೂ ಹಿಟ್ಟಾಗದೇ ಒದ್ದಾಡ್ತಿದ್ದಾರೆ ಅಂತಿದೆ ಗಲ್ಲಿಮೂಲ.

ಸಿನಿಮಾ ರಿಲೀಸ್ ಮಾಡ್ಲಿ ಬಿಡ್ಲಿ ನಮ್ ಕಾಸು ನಮ್ಗೆ ಬರ್ಲಿ ಅಂತಿದ್ದಾರೆ ಕೆಲಸ ಮಾಡಿದವ್ರು. ಆದ್ರೆ ಇದೆಲ್ಲಾ ನಿಜಾನಾ ಅಂತ ಸ್ವತಃ ನಿರ್ಮಾಪಕ ಕಮ್ ನಿರ್ದೇಶಕ 'ಕಿರಾತಕ' ಪ್ರದೀಪ್ ರಾಜ್ ಅವರೇ ಹೇಳಬೇಕು.

English summary
Kirataka fame director Pradeep Raj lands in trouble. According to sources, the director cum producer not giving money to team. His latest movie 'Bangalore 560023' not releasing due to finacial problems, sources add.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada