Rajamouli: ಪ್ರಭಾಸ್ 'ಕಲ್ಕಿ 2898AD' ಚಿತ್ರದಲ್ಲಿ ಬಣ್ಣ ಹಚ್ಚಿದ ಜಕ್ಕಣ್ಣ? ಯಾರೂ ಊಹಿಸಿರದ ಪಾತ್ರ?

ಪ್ರಭಾಸ್ ನಟನೆಯ 'ಪ್ರಾಜೆಕ್ಟ್-K' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಬಿಗ್‌ಬಿ, ಕಮಲ್ ಹಾಸನ್ ಬಳಿಕ ನಿರ್ದೇಶಕ ರಾಜಮೌಳಿ ತಂಡ ಸೇರಿಕೊಂಡಿದ್ದಾರೆ ಎನ್ನಲಾಗ್ತಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಈ ಸೈನ್ಸ್ ಫಿಕ್ಷನ್ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟೀಸರ್ ಸೂಪರ್ ಹಿಟ್ ಆಗಿತ್ತು.

ನಾಗ್‌ ಅಶ್ವಿನ್ ನಿರ್ದೇಶನದ 'ಕಲ್ಕಿ 2898AD' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ನಿರೀಕ್ಷೆ ಸದ್ದು ಮಾಡ್ತಿದೆ. ಬಜೆಟ್ ಲೆಕ್ಕ ಹಾಕದೇ ಸಿನಿಮಾ ಮಾಡುತ್ತಾ ಹೋಗುತ್ತಿದೆ ಚಿತ್ರತಂಡ. ಮುಂದಿನ ವರ್ಷ ಸಿನಿಮಾ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ. ದೀಪಿಕಾ ಪಡುಕೊಣೆ, ದಿಶಾ ಪಟಾನಿ, ಪಶುಪತಿ, ಸಸ್ವತ ಚಟರ್ಜಿ ಚಿತ್ರದ ತಾರಾಗಣದಲ್ಲಿದ್ದಾರೆ.

Director Rajamouli cameo in Prabhas starrer Kalki 2898 AD

ಇದೀಗ ನಿರ್ದೇಶಕ ರಾಜಮೌಳಿ ಕೂಡ ಈ ಅದ್ಧೂರಿ ಚಿತ್ರದ ಭಾಗವಾಗುತ್ತಿದ್ದಾರೆ ಎನ್ನಲಾಗ್ತಿದೆ. ಸದ್ದಿಲ್ಲದೇ ಚಿತ್ರೀಕರಣದಲ್ಲೂ ಭಾಗಿ ಆಗಿದ್ದಾರೆ ಎನ್ನುವ ನ್ಯೂಸ್ ವೈರಲ್ ಆಗುತ್ತಿದೆ. ಚಿತ್ರದಲ್ಲಿ ರಾಜಮೌಳಿ ಸಿನಿಮಾ ನಿರ್ದೇಶಕರಾಗಿಯೇ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಮತ್ತೊಂದು ಕಡೆ ಜಕ್ಕಣ್ಣ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

'RRR' ಬಳಿಕ ಸೈಲೆಂಟ್ ಆಗಿರುವ ಜಕ್ಕಣ್ಣ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಭಾರೀ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಆ ಬಳಿಕ ತಮ್ಮ ಕನಸಿನ 'ಮಹಾಭಾರತ' ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಆ ಚಿತ್ರ ಮಾಡುವುದಕ್ಕೆ ಬೇಕಾದ ತಯಾರಿಗಾಗಿ ಈಗ ಸಿನಿಮಾಗಳನ್ನು ಮಾಡುತ್ತಿದ್ದೇನೆ ಎಂದು ಜಕ್ಕಣ್ಣ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ರಾಜಮೌಳಿ ತಂದೆ ಕಥೆಗಾರ ವಿಜಯೇಂದ್ರ ಪ್ರಸಾದ್ ತಮ್ಮ ಮಗನ ಮುಂದಿನ ಸಿನಿಮಾಗಳ ಬಗ್ಗೆ ಹೇಳಿದ್ದರು. ಮಹೇಶ್ ಬಾಬು ಜೊತೆ ಸಿನಿಮಾ ಮಾಡಿದ ಬಳಿಕ 'ಮಹಾಭಾರತ' ಸಿನಿಮಾ ಮಾಡ್ತಾನೆ ಎಂದಿದ್ದರು. ನಾಗ್‌ ಅಶ್ವಿನ್ ನಿರ್ದೇಶನದ 'ಕಲ್ಕಿ 2898AD' ಚಿತ್ರಕ್ಕೂ ರಾಜಮೌಳಿ 'ಮಹಾಭಾರತ'ಕ್ಕೂ ಲಿಂಕ್ ಇದೆಯಂತೆ. ಹೌದು ಇಂತಾದೊಂದು ಕ್ರೇಜಿ ನ್ಯೂಸ್ ಈಗ ವೈರಲ್ ಆಗುತ್ತಿದೆ.

'ಕಲ್ಕಿ 2898AD' ಚಿತ್ರದಲ್ಲಿ ರಾಜಮೌಳಿ ಸಿನಿಮಾ ನಿರ್ದೇಶಕನ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ಧಾರಂತೆ. 'ಕಲ್ಕಿ 2898AD' ಚಿತ್ರದಲ್ಲಿ ಭವಿಷ್ಯದ ಕಥೆ ಅಂದರೆ 2898ADನೇ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೇಳಲಾಗುತ್ತಿದೆ. ಆಗ ರಾಜಮೌಳಿ ನಿರ್ದೇಶನದ 'ಮಹಾಭಾರತ' ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತದೆಯಂತೆ. ಆ ಸನ್ನಿವೇಶದಲ್ಲಿ ರಾಜಮೌಳಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತದೆ. ಅಂದ್ರೆ ರಾಜಮೌಳಿ 'ಮಹಾಭಾರತ' ಎನ್ನುವ ಸಿನಿಮಾ ಮಾಡಿದ್ದಾಗಿ 2898ADರಲ್ಲಿ ನೆನಪಿಸಿಕೊಳ್ಳುವ ಸನ್ನಿವೇಶ ಇರಲಿದೆಯಂತೆ.

Director Rajamouli cameo in Prabhas starrer Kalki 2898 AD

ನಿಜಕ್ಕೂ ನಾಗ್‌ ಅಶ್ವಿನ್ ವಿಷನ್ ಅದ್ಭುತ ಎನ್ನಲಾಗುತ್ತಿದೆ. ಅಂದರೆ ಇನ್ನು ನಿರ್ಮಾಣವಾಗದ ಸಿನಿಮಾ ಬಗ್ಗೆ ಹಲವು ವರ್ಷಗಳ ಮುಂದೆ ಚರ್ಚಿಸುವಂತೆ ಒಂದು ಸನ್ನಿವೇಶವನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಆ ಸನ್ನಿವೇಶದಲ್ಲಿ ಜಕ್ಕಣ್ಣ ನಟಿಸ್ತಾರೆ ಅನ್ನೋದೇ ಇಂಟ್ರೆಸ್ಟಿಂಗ್. ಸದ್ಯ ವೈರಲ್ ಆಗುತ್ತಿರುವ ಈ ಸುದ್ದಿ ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಜಕ್ಕಣ್ಣ 'ಕಲ್ಕಿ 2898AD' ಚಿತ್ರದಲ್ಲಿ ನಟಿಸುತ್ತಿರುವುದು ಪಾತ್ರ ನಿಜ ಎನ್ನಲಾಗುತ್ತಿದೆ.

ಇನ್ನು ಮಹಾಭಾರತದ ಪಾತ್ರವೊಂದರ ಜೊತೆಗೆ ಕಲ್ಕಿ ಚಿತ್ರದಲ್ಲಿನ ಪ್ರಭಾಸ್ ಪಾತ್ರಕ್ಕಾಗಿ ನಂಟಿದೆ ಎಂದು ನಿರ್ದೇಶಕ ನಾಗ್‌ ಅಶ್ವಿನ್ ಸಂದರ್ಶನದಲ್ಲಿ ಹೇಳಿದ್ದರು. ಅಂದಹಾಗೆ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್ ಮಹಾಭಾರತದ ಅಶ್ವತ್ಥಾಮನ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ 'ಕಲ್ಕಿ 2898AD' ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಇನ್ನು ಚಿತ್ರದಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕೂಡ ನಟಿಸುತ್ತಾರೆ ಎನ್ನಲಾಗುತ್ತಿದೆ.

More from Filmibeat

English summary
Rajamouli will be seen in a special cameo in Prabhas's Kalki 2898AD
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X