'ಒಂದಲ್ಲ ಎರಡಲ್ಲ' ಸತ್ಯ ಪ್ರಕಾಶ್ ಮುಂದಿನ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'
ರಾಮಾ ರಾಮಾ ರೇ ಹಾಗೂ ಒಂದಲ್ಲ ಎರಡಲ್ಲ ಚಿತ್ರಗಳ ನಂತರ ನಿರ್ದೇಶಕ ಸತ್ಯ ಪ್ರಕಾಶ್ ಮೂರನೇ ಪ್ರಾಜೆಕ್ಟ್ ಆರಂಭಿಸಿದ್ದಾರೆ. ಮೂರನೇ ಚಿತ್ರಕ್ಕೆ 'ಮ್ಯಾನ್ ಆಫ್ ದಿ ಮ್ಯಾಚ್' ಎಂದು ಹೆಸರಿಟ್ಟಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮಾರ್ಚ್ 18 ರಂದು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ. ವಿಭಿನ್ನ ಶೀರ್ಷಿಕೆ ಹಾಗೂ ವಿಭಿನ್ನ ಕಥಾಹಂದರ ಮೂಲಕ ಸತ್ಯ ಪ್ರಕಾಶ್ ಪ್ರೇಕ್ಷಕರನ್ನು ಸೆಳೆದಿದ್ದಾರೆ.
ಸತ್ಯ ಪ್ರಕಾಶ್ ಸಿನಿಮಾಗಳು ಅಂದ್ರೆ ಒಂದೊಳ್ಳೆ ಸದಭಿರುಚಿ ಕಥೆ ಹೊಂದಿರುವ ಸಿನಿಮಾ ಎನ್ನುವ ಮಟ್ಟಿಗೆ ನಂಬಿಕೆ ಉಳಿಸಿಕೊಂಡಿದ್ದಾರೆ.

ಮಯೂರ ಮೌಲ್ಯ ಮೋಷನ್ ಪಿಕ್ಚರ್ಸ್ ಜೊತೆ ಸೇರಿ ತಮ್ಮದೇ ಸ್ವಂತ ಬ್ಯಾನರ್ ಸತ್ಯ ಪಿಕ್ಚರ್ಸ್ ಅಡಿ ಈ ಚಿತ್ರ ನಿರ್ಮಿಸಲು ತೀರ್ಮಾನಿಸಲಾಗಿದೆ. ರಾಮಾ ರಾಮಾ ರೇ ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಮತ್ತು ಸಿಬ್ಬಂದಿ ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ.
ಇನ್ನುಳಿದಂತೆ ನಟ ಜಯರಾಂ, ಧರ್ಮಣ್ಣ ಕಡೂರು, ನಟರಾಜ್ ಸೇರಿದಂತೆ ಹಲವರು ತಾರಬಳಗದಲ್ಲಿ ಇರಲಿದ್ದಾರೆ. ನೊಬಿಲ್ ಪೌಲ್ ಮತ್ತು ವಾಸುಕಿ ವೈಭವ್ ಸಂಗೀತ ನೀಡಲಿದ್ದು, ಲವಿತ್ ಅವರ ಛಾಯಾಗ್ರಹಣ ಇದೆ.


Click it and Unblock the Notifications











