»   » ಸಿಂಪಲ್ ಸುನಿಗೆ ಮಾಧ್ಯಮದವ್ರನ್ನ ಕಂಡ್ರೆ ಟಿಪಿಕಲ್ ಭಯ!

ಸಿಂಪಲ್ ಸುನಿಗೆ ಮಾಧ್ಯಮದವ್ರನ್ನ ಕಂಡ್ರೆ ಟಿಪಿಕಲ್ ಭಯ!

By: ಜೀವನರಸಿಕ
Subscribe to Filmibeat Kannada

'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ'ಯನ್ನ ಸದ್ದಿಲ್ಲದಂತೆ ಒಂದು ಶೆಡ್ಯೂಲ್ ಮುಗಿಸಿದ್ದಾರೆ ನಿರ್ದೇಶಕ ಸುನಿ. ಮೇಘನಾ ಗಾಂವ್ಕರ್ ಒಂದು ವರ್ಷ ಸುಮ್ಮನಿದ್ದು ಈಗ ಬಣ್ಣ ಹಚ್ಚಿದ್ದಾರೆ. ಆದ್ರೆ ಈ ನಡುವೆ ಸಿಂಪಲ್ ನಿರ್ದೇಶಕ ಸುನಿ ಮಾಧ್ಯಮಗಳಿಂದ ಸಾಧ್ಯವಾದಷ್ಟು ದೂರವೇ ಇದ್ದಾರೆ.

ಮಾಧ್ಯಮಗಳಿಗೆ ಸುದ್ದಿ ಕೊಡೋದು, ಅವ್ರು ಅದನ್ನ ಹೇಗ್ಹೇಗೋ ಹೇಳಿ ಅರ್ಥ ಬೇರೆಯಾಗಿ ಇನ್ನೇನೋ ಆಗೋದು ಸುನಿಗೆ ಇಷ್ಟವಿಲ್ಲ. 'ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ' ಗೆದ್ದಾಗ ಮಾಧ್ಯಮಗಳನ್ನ ಮೆಚ್ಚಿಕೊಂಡಿದ್ದ ಸುನಿ 'ಉಳಿದವರು ಕಂಡಂತೆ' ಸೋತಾಗ ದೂರ ಆಗಿದ್ಯಾಕೋ ಗೊತ್ತಾಗುತ್ತಿಲ್ಲ.

Director Simple Suni on tenterhooks

ಸೋಲು ಗೆಲುವು ಸಾಮಾನ್ಯ. ಮಾಧ್ಯಮಗಳಿರೋದೇ ಸೋತಾಗ, ಗೆದ್ದಾಗ ಬರೆಯೋದಕ್ಕೆ. ಆದ್ರೆ ನಿರ್ದೇಶಕ ಸುನಿಯವರಿಗೆ ಭ್ರಮನಿರಸನವಾದಂತಾಗಿದ್ದು ಭರ್ಜರಿ ನಿರೀಕ್ಷೆ ಹುಟ್ಟಿಸಿ ಸೋತ ಎರೆಡೆರೆಡು ದೊಡ್ಡ ಸಿನಿಮಾಗಳು.

ಸಿಂಪಲ್ಲಾಗಿ ಶುರುವಾದ 'ಉಳಿದವರು ಕಂಡಂತೆ' ಹಂತ ಹಂತವಾಗಿ ಅಬ್ಬರಿಸಿ ಬೊಬ್ಬಿರಿದಿತ್ತು, ಆದ್ರೆ ಕೊನೆಯಲ್ಲಿ ಮಗುಚಿ ಬಿತ್ತು. ಇನ್ನು 'ಬಹುಪರಾಕ್' ಆರಂಭದಿಂದ ಅಬ್ಬರಿಸಿ ಕೊನೆಯಲ್ಲಿ ಸದ್ದೇ ಮಾಡದೆ ಕಳೆದುಹೋಯ್ತು. ಇದ್ರಲ್ಲಿ ಮಾಧ್ಯಮದವ್ರ ತಪ್ಪಾದ್ರೂ ಏನಿದೆ.

ಆದ್ರೂ ಅದ್ಯಾಕೋ ಏನೋ ಸುನಿಯವ್ರಿಗೆ ಮೀಡಿಯಾ ಅಂದ್ರೆ ತಣ್ಣಗಿನ ಭಯ ಹಾಗೇ ಇದೆ. ಒಂದೇ ಬಾರಿ ಹೈಪ್ ಕೊಡೋ ಮೀಡಿಯಾಗಳು ಸಿನಿಮಾ ಚೆನ್ನಾಗಿಲ್ಲ ಅಂದಾಗ ಅಷ್ಟೇ ನಿಷ್ಠುರವಾಗಿ ವರ್ತಿಸೋದು ಅವರನ್ನ ಕಂಗೆಡಿಸಿದೆ. ಆದ್ರೆ ಏನ್ಮಾಡೋದು ಅದಕ್ಕೆ ನಾವು ಹೊಣೆಯಲ್ಲ ಅಂತಾರೆ ಸಿನಿಪತ್ರಕರ್ತರು ಹೌದಲ್ವಾ.

English summary
Simple Agi Ondh Love Story fame director Suni is silently finished his next project 'Simple Aag Innond Love Story'. But, the director is tightlipped on his upcoming project. Meanwhile he very much scary on media also.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada