'ಚೌಕ' ಸಾರಥಿಗೆ ಕೂಡಿಬಂತು ಕಂಕಣಭಾಗ್ಯ, ಆ ನಟಿ ಜೊತೆ ತರುಣ್ ಮದುವೆ ಫಿಕ್ಸ್?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ನಿರ್ದೇಶಕ ತರುಣ್ ಸುಧೀರ್. 'ಚೌಕ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ತರುಣ್ ಮುಂದೆ ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟರು. ಸದ್ಯ ಕಿರುತೆರೆಯ 'ಮಹಾನಟಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕೂಡ ಗುರ್ತಿಸಿಕೊಂಡಿದ್ದಾರೆ.

ಇದೀಗ ತರುಣ್ 4ನೇ ಸಿನಿಮಾ ತಯಾರಿಯಲ್ಲಿದ್ದಾರೆ. ಇದೆಲ್ಲದರ ನಡುವೆ ಖ್ಯಾತ ಖಳನಟ ಸುಧೀರ್ ಕಿರಿಯಪುತ್ರನ ಮದುವೆ ಫಿಕ್ಸ್ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಅದು ಯಾರು ಇಂತಾದೊಂದು ವದಂತಿ ಹಬ್ಬಿಸಿದರೋ ಗೊತ್ತಿಲ್ಲ. ಇದೇ ವಿಚಾರ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತಿದೆ. ಕನ್ನಡ ಸಿನಿಮಾ ನಟಿ ಜೊತೆಗೆ ತರುಣ್ ಸುಧೀರ್ ಮದುವೆ ಎಂದು ಹೇಳಲಾಗುತ್ತಿದೆ.

Director Tharun Sudhir getting married to this popular kannada actress

ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾಲತಿ ಕೂಡ ಮಗನಿಗೆ ಮದುವೆ ಮಾಡಬೇಕು ಎನ್ನುತ್ತಿರುತ್ತಾರೆ. ಆದರೆ ಸಿನಿಮಾ ಕೆಲಸಗಳಲ್ಲಿ ಮುಳುಗಿ ಹೋಗಿರುವ ತರುಣ್ ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ, ಮದುವೆ ಆಗದೇ ನೆಮ್ಮದಿಯಾಗಿ ಇದ್ದೀನಿ ಎಂದು ತಮಾಷೆಯಾಗಿ ಹೇಳುತ್ತಾ ಬರುತ್ತಿದ್ದರು. ಆದರೆ ಇದೀಗ ಮದುವೆ ಫಿಕ್ಸ್ ಆಗೋಗಿದೆ. ಇನ್ನೆರಡು ತಿಂಗಳಲ್ಲಿ ಗಟ್ಟಿಮೇಳ ಕೇಳಲಿದೆ ಎನ್ನುವ ಊಹಾಪೋಹ ಶುರುವಾಗಿದೆ.

ತೆರೆಮರೆಯಲ್ಲಿ ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಅವರ ಆಪ್ತರಿಗೂ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಇದು ಕೇವಲ ಊಹಾಪೋಹ, ಜಸ್ಟ್ ಗಾಳಿಸುದ್ದಿ ಎನ್ನುವವರು ಇದ್ದಾರೆ. ಆದರೂ ಕೂಡ ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎನ್ನುವವರು ಇದ್ದಾರೆ.

ಹೊಸಪೇಟೆಯಲ್ಲಿ ಹುಟ್ಟಿ ಬೆಳೆದ ತರುಣ್ ಸುಧೀರ್ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿ ಒಂದು ವರ್ಷ ಅಶೋಕ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಸಲಹೆಯಂತೆ ಚಿತ್ರರಂಗಕ್ಕೆ ಬಂದರು. 'ಎಕ್ಸ್‌ಕ್ಯೂಸ್‌ಮಿ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದರು. 'ರ್ಯಾಂಬೊ' ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ತರುಣ್ 'ಚೌಕ' ಚಿತ್ರದಿಂದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು.

Director Tharun Sudhir getting married to this popular kannada actress

ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಂಥೆರೊ ಕೈ ಹಿಡಿಯುತ್ತಾರೆ ಎನ್ನುವ ಗುಸುಗುಸು ಈಗ ಕೇಳಿಬರ್ತಿದೆ. ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಮಿಂಚಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. 'ಅಭಿಸಾರಿಕೆ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು.

'ಪಂಚತಂತ್ರ', 'ಡೆಮೊ ಪೀಸ್', 'ಗರಡಿ' ಹಾಗೂ 'ಶುಗರ್ ಫ್ಯಾಕ್ಟರಿ' ಸಿನಿಮಾಗಳಲ್ಲಿ ಆಕೆ ಕಾಣಿಸಿಕೊಂಡಿದ್ದರು. ಇದೀಗ ತರುಣ್- ಸೋನಲ್ ಮದುವೆ ಆಗುತ್ತಾರೆ ಎನ್ನುವ ಸುದ್ದಿಯನ್ನು ಯಾರು ಹಬ್ಬಿಸಿದರೋ ಗೊತ್ತಿಲ್ಲ. ಆದರೆ ಇಬ್ಬರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆಗಸ್ಟ್ 10ಕ್ಕೆ ಮದುವೆ ಎನ್ನಲಾಗ್ತಿದೆ. ತರುಣ್ ಆಪ್ತರು ಕೂಡ ಈ ಬಗ್ಗೆ ಯಾವುದೇ ಸುಳಿವು ಇಲ್ಲ ಎನ್ನುತ್ತಿದ್ದಾರೆ. ಹಾಗಾಗಿ ಇದು ಬರೀ ಗಾಳಿಸುದ್ದಿನಾ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Director Tharun sudhir to get married soon? Is this the details about his bride?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X