ತನಗಿಂತ 5 ವರ್ಷ ಚಿಕ್ಕವನ ಜೊತೆ ದಿಶಾ ಪಟಾನಿ ಲವ್ವಿ ಡವ್ವಿ? ಮದುವೆ ಸಂಭ್ರಮದಲ್ಲಿ ಕೈ ಕೈ ಹಿಡಿದು ಓಡಾಡಿದ ಜೋಡಿ
ಪ್ರೀತಿ ಅಂದರೆ ಅದು ನಾಟಕವೂ ಅಲ್ಲ. ಆಟಿಕೆಯೂ ಅಲ್ಲ. ಈ ಪ್ರೀತಿ ಯಾರ ಮೇಲೆ ಯಾವಾಗ ಬೇಕಾದರೂ ಹೇಗೆ ಬೇಕಾದರೂ ಆಗಬಹುದು. ಎಲ್ಲರೂ ತನ್ನ ಕೈಹಿಡಿಯುವ ಸಂಗಾತಿ ಹೀಗಿರಬೇಕು. ಹಾಗಿರಬೇಕು ಎಂದು ಕನಸಿನ ಮೂಟೆಯನ್ನೇ ಹೊತ್ತು ಸಾಗುತ್ತಾರೆ. ಚಿತ್ರರಂಗದಲ್ಲಿರುವವರು ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಬಣ್ಣದ ಲೋಕದಲ್ಲಿ ಅನೇಕರು ಪ್ರೀತಿಯಲ್ಲಿ ಬಿದ್ದಿದ್ದಾರೆ.
ಅನುಷ್ಕಾ ಶರ್ಮಾ.. ದೀಪಿಕಾ ಪಡುಕೋಣೆ.. ಹೀಗೆ ಖ್ಯಾತ ಖ್ಯಾತ ನಾಯಕಿಯರೆಲ್ಲಾ ಈ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಮದುವೆಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇವರಲ್ಲಿ ಇನ್ನೊಂದು ವರ್ಗ ಕೂಡ ಇದೆ. ಇವರಿಗೆ ಲವ್ & ಬ್ರೇಕಪ್ ತುಂಬಾನೇ ಮಾಮೂಲಿ. ಪದೇ ಪದೇ ಇವರು ಪ್ರೀತಿಯಲ್ಲಿ ಬೀಳುತ್ತಾರೆ. ಉದಾಹರಣೆಗೆ ದಿಶಾ ಪಟಾನಿ.

ಹೌದು, ಪೂರ್ಣ ಪ್ರಮಾಣದ ನಾಯಕಿಯಾಗಿ ಮೂರು ಮತ್ತೊಂದು ಚಿತ್ರಗಳನ್ನು ಮಾಡಿದ್ದರು ಕೂಡ, ತನ್ನ ಗ್ಲಾಮರಸ್ ಲುಕ್‌ಗಳಿಂದ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುವ ದಿಶಾ ಈ ಹಿಂದೆ ಟೈಗರ್ ಶ್ರಾಫ್ ಅವರ ಜೊತೆ ಪ್ರೀತಿಯ ಅಮಲೇರಿಸಿಕೊಂಡಿದ್ದರು. ಆದರೆ. ಈ ಸಂಬಂಧ ಕೇವಲ 6 ವರ್ಷ ಮಾತ್ರ ಬಾಳಿಕೆ ಬಂತು.
ಆ ನಂತರ 2022ರಿಂದ ಮತ್ತೆ ಸಿಂಗಲ್ ಆಗಿದ್ದ ದಿಶಾಗೆ ಈಗ ಮತ್ತೆ ಪ್ರೀತಿಯ ನಶೆ ಏರಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಂಜಾಬಿ ಗಾಯಕ ತಲ್ವಿಂದರ್ ಅವರ ಜೊತೆ ದಿಶಾ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ನ ಚೆಲುವೆ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ಮದುವೆಯಲ್ಲಿ ತಲ್ವಿಂದರ್ ಜೊತೆ ದಿಶಾ ಕಾಣಿಸಿಕೊಂಡಿದ್ದಾರೆ. ತಲ್ವಿಂದರ ತೋಳಿನಲ್ಲಿ ಬಂಧಿಯಾಗಿ ನಗೆ ಬೀರಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇವಲ ಮದುವೆಯಲ್ಲಿ ಮಾತ್ರ ಅಲ್ಲ ಮುಂಬೈನ ವಿಮಾನ ನಿಲ್ದಾಣದಲ್ಲಿ ಕೂಡ ತಲ್ವಿಂದರ್ ಮತ್ತು ದಿಶಾ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಆದರೆ.. ಇಲ್ಲಿ ಎಂದಿನಂತೆ ತಲ್ವಿಂದರ್ ತಮ್ಮ ಮುಖ ತೋರಿಸಿಲ್ಲ. ಬದಲಿಗೆ ಮಾಸ್ಕ್ ಹಾಕಿಕೊಂಡು ಹೊರಗಡೆ ಬಂದಿದ್ದಾರೆ.

ಯಾರು ಈ ಮಾಸ್ಕ್ ಮ್ಯಾನ್.. ?
ತಲ್ವಿಂದರ್ 28 ವರ್ಷದ ಯುವ ಗಾಯಕ. ಕಳೆದ ವರ್ಷಾಂತ್ಯದಲ್ಲಿ ಕಾರ್ತಿಕ್ ಆರ್ಯನ್ ಅಭಿನಯದ ''ತು ಮೇರಿ ಮೇ ತೇರಾ'' ಚಿತ್ರದಲ್ಲಿನ ''ತೇನು ಜ್ಯಾದಾ ಮೊಹಬ್ಬತ್'' ಹಾಡನ್ನು ಹಾಡಿದವರು ಇವರೇ. 28ರ ಹರೆಯದಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಹೆಸರು ಮಾಡಿರುವ ತಲ್ವಿಂದರ್ ಜಗದ್ವಿಖ್ಯಾತ ಗಾಯಕರಾದ ದುವಾ ಲಿಪಾ ಮತ್ತು ಶಾನ್ ಮೆಂಡೆಸ್ ಅವರ ಜೊತೆ ಕೂಡ ವೇದಿಕೆ ಹಂಚಿಕೊಂಡಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ಇನ್ನೂ ತಲ್ವಿಂದರ್‌ಗೆ ತಮ್ಮ ಖಾಸಗಿತನ ಮುಖ್ಯ. ಎಲ್ಲರಂತೆ ತಾನು ಕೂಡ ನೆಮ್ಮದಿಯಿಂದ ಎಲ್ಲೆಂದರಲ್ಲಿ ಓಡಾಡಬೇಕು ಎನ್ನುವ ಹಂಬಲ. ಈ ಹಿನ್ನೆಲೆ ತಲ್ವಿಂದರ್ ಇಲ್ಲಿಯವರೆಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ಎಲ್ಲಿಯೂ ತೋರಿಸಿಲ್ಲ. ಮುಖವಾಡ ಹಾಕಿಕೊಂಡು ಇಲ್ಲವಾದಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂಗೀತ ಸುಧೆಯನ್ನು ಹರಿಸಿದ್ದಾರೆ ತಲ್ವಿಂದರ್. ಆದರೆ.. ನೂಪುರ್ ಮದುವೆಯಲ್ಲಿ ತಲ್ವಿಂದರ್ ಮುಖವಾಡ ಕಳಚಿ ಬಿದ್ದಿದೆ. ಮುಖವಾಡದ ಹಿಂದಿದ್ದ ಮುಖದ ದರ್ಶನವೂ ಇವರ ಅಭಿಮಾನಿಗಳಿಗೆ ಆಗಿದೆ.
ಸದ್ಯ ತಲ್ವಿಂದರ್ ಮತ್ತು ದಿಶಾ ಪಠಾನಿ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ದಿಶಾ ಪಟಾನಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇಬರದ್ದು ಹಾಟ್ ಜೋಡಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ಧಾರೆ.ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಕೂಡ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











