ಪ್ರೀತಿ ಗೀತಿ ಏನು ಇಲ್ಲ..ಬರೀ ಸ್ನೇಹಾ ಎನ್ನುತ್ತಲೇ ಒಟ್ಟಿಗೆ ದೀಪಾವಳಿ ಆಚರಿಸಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಗೀತಾ ಗೋವಿದಂ ಎನ್ನುತ್ತಾ ಒಟ್ಟಿಗೆ ನಟಿಸಿ ಅಲ್ಲಿಂದ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗೆ ದಾರಿ ಮಾಡಿಕೊಟ್ಟವರು. ಒಟ್ಟೊಟ್ಟಿಗೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡ ಈ ಜೋಡಿ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ.
ಆದರೆ ಈ ವಿಚಾರವನ್ನು ವಿಜಯ್ ದೇವರಕೊಂಡ ಆಗಲಿ, ರಶ್ಮಿಕಾ ಮಂದಣ್ಣ ಆಗಲಿ ಒಪ್ಪಿಕೊಂಡಿಲ್ಲ. ನಾವಿಬ್ಬರೂ ಬರಿ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಇರುವುದು ಸಾಕ್ಷಿ ಸಮೇತ ಸಿಕ್ಕಿದ್ದರೂ ಕೂಡ ಸಾರ್ವಜನಿಕವಾಗಿ ಇದನ್ನು ಒಪ್ಪಿಕೊಂಡಿಲ್ಲ. ಈಗ ಮತ್ತೆ ನಟಿ ರಶ್ಮಿಕಾ ಅವರು ವಿಜಯ್ ದೇವರಕೊಂಡ ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ.

ವಿಜಯ್ ಮನೆಯಲ್ಲಿ ದೀಪ ಹಚ್ಚಿದ ರಶ್ಮಿಕಾ ಮಂದಣ್ಣ
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ದೀಪಾವಳಿ ಸಂಭ್ರಮದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇದರಲ್ಲಿ ಇರುವ ಸಾಮ್ಯತೆಯನ್ನು ಅಭಿಮಾನಿಗಳು ಕಂಡು ಹಿಡಿದಿದ್ದಾರೆ. ಇಬ್ಬರು ಒಟ್ಟಿಗೆ ಹಬ್ಬ ಆಚರಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಕೂಡ ನೀಡಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ಒಟ್ಟಿಗೆ ದೀಪಾವಳಿಯನ್ನು ಆಚರಿಸಿದ್ದಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ಹಂಚಿಕೊಂಡಿರುವ ಫೋಟೋ ಮತ್ತು ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳ ಬ್ಯಾಕ್‌ಗ್ರೌಂಡ್ ಅನ್ನು ಗುರುತಿಸಿದ್ದಾರೆ. ವಿಜಯ್ ದೇವರಕೊಂಡ ನವೆಂಬರ್ 12 ರಂದು, ತಮ್ಮ ತಂದೆ- ತಾಯಿ, ಸಹೋದರ ಆನಂದ್ ದೇವರಕೊಂಡ ಮತ್ತು ಸಾಕು ನಾಯಿಯೊಂದಿಗೆ ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇತ್ತ, ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಸೀರೆಯನ್ನು ಧರಿಸಿ "ದೀಪಾವಳಿಯ ಶುಭಾಶಯಗಳು ನನ್ನ ಪ್ರೀತಿಪಾತ್ರರೇ" ಎಂದು ಫೋಟೋ ಹಂಚಿಕೊಂಡಿದ್ದಾರೆ. ಎರಡೂ ಚಿತ್ರಗಳಲ್ಲಿನ ಗೋಡೆಯ ವಿನ್ಯಾಸ ಒಂದೇ ಎಂಬುದನ್ನು ಅವರ ಅಭಿಮಾನಿಗಳು ಗಮನಿಸಿದ್ದಾರೆ.

ಬೇಗ ಸಂಬಂಧದ ಬಗ್ಗೆ ಘೋಷಣೆ ಮಾಡಿ!
ಫೋಟೋ ನೋಡಿದ ನೆಟ್ಟಿಗರು "ಈಗಲೇ ನಿಮ್ಮ ಸಂಬಂಧವನ್ನು ಅಧಿಕೃತಗೊಳಿಸಿ" ಎಂದು ಬೇಡಿಕೆಯಿಟ್ಟಿದ್ದಾರೆ. ಮತ್ತೊಬ್ಬರು, ಆ ಫೋಟೋ ಹಿಂದಿನ ಗೋಡೆಯನ್ನು ಯಾರು ಯಾರು ಗಮನಿಸಿದ್ದಿರಿ...? ಇದು ವಿಜಯ್ ಅವರ ಮನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಆಕೆ ವಿಜಯ್ ದೇವರಕೊಂಡ ಮನೆಯಲ್ಲಿ ಇದ್ದಾರೆ ಎಂಬುದನ್ನು ಒಪ್ಪುವವರು ಯಾರು ಯಾರು ಇದ್ದಿರಿ?' ಎಂದು ಪ್ರಶ್ನಿಸಿದ್ದು, ಹಲವರು ನಮಗೂ ಹಾಗೆ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವೃತ್ತಿ ಜೀವನ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಎಂಬ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರ ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಕೆಮಿಸ್ಟ್ರೀ ಅಭಿಮಾನಿಗಳಿಗೆ ಇಷ್ಟವಾಗಿದೆ. ಸದ್ಯ ವಿಜಯ್ ಅವರು 'ಫ್ಯಾಮಿಲಿ ಸ್ಟಾರ್' ಮತ್ತು 'ವಿಡಿ 12' ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರ ಬಾಲಿವುಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಣಬೀರ್ ಕಪೂರ್ ಜೊತೆಗೆ 'ಅನಿಮಲ್' ನಲ್ಲಿ ಕಾಣಿಸಿಕೊಳ್ಳಲಿದ್ದು, ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದರ ಬಳಿಕ 'ರೇನ್‌ಬೋ' ಮತ್ತು 'ಪುಷ್ಪಾ: ದಿ ರೂಲ್' ಕೂಡ ಆಕೆಯ ಕೈಯಲ್ಲಿವೆ.


Click it and Unblock the Notifications











