ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸೇರಿ ತನ್ನ ಕೆರಿಯರ್ ಹಾಳು ಮಾಡಿಕೊಂಡ ಬಾಲಿವುಡ್ ನಟಿ ಇವರೇ!
80 ರ ದಶಕದಲ್ಲಿ ನಟಿಯರಿಗೆ ಇಷ್ಟೊಂದು ಸ್ವಾತಂತ್ರ್ಯವಿರಲಿಲ್ಲ. ಬಟ್ಟೆಗಳ ಆಯ್ಕೆ, ನಟಿಸುವ ಪಾತ್ರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ, ಅಂತಹ ಸಮಯದಲ್ಲಿಯೂ ಟಾಪ್‌ಲೆಸ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡವರು ನಟಿ ಮಂದಾಕಿನಿ. ಸಿನಿಮಾದಲ್ಲಿನ ಟಾಪ್‌ಲೆಸ್ ದೃಶ್ಯಗಳಿಂದ ಸಂಚಲನ ಮೂಡಿಸಿದ್ದ ನಟಿ ಕೆಲವು ವರ್ಷಗಳಲ್ಲಿಯೇ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಲಿಲ್ಲ. ಅದಕ್ಕೆ ಕಾರಣ ಆಕೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧ.
ಹೌದು... ನಟಿ ಮಂದಾಕಿನಿ ಖ್ಯಾತ ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ತನ್ನ ಮಹತ್ವಾಕಾಂಕ್ಷೆಯ ಚಿತ್ರ 'ರಾಮ್ ತೇರಿ ಗಂಗಾ ಮೈಲಿ' (1987) ಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ರಾಜ್ ಕಪೂರ್ ತಮ್ಮ ಕಿರಿಯ ಮಗ ರಾಜೀವ್ ಕಪೂರ್ ಅವರನ್ನೂ ಲಾಂಚ್ ಮಾಡಿದ್ದರು. ನಟಿ ತನ್ನ ನಟನೆಗಾಗಿ, ವಿಶೇಷವಾಗಿ ಜಲಪಾತದ ಕೆಳಗೆ ಸ್ನಾನ ಮಾಡುವ ಬೋಲ್ಡ್ ದೃಶ್ಯದಿಂದ ಹೆಚ್ಚು ಖ್ಯಾತಿ ಗಳಿಸಿದ್ದರು.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಮಂದಾಕಿನಿ
ಮೊದಲ ಸಿನಿಮಾದಲ್ಲಿಯೇ ಹೆಚ್ಚು ಹೆಸರು ಪಡೆದ ನಟಿ ಮತ್ತೆ ತಿರುಗಿ ನೋಡುವಂತಿರಲಿಲ್ಲ. ಬೇರೆ ಸಿನಿಮಾಗಳೊಂದಿಗೆ ಹಿಂದಿ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಆದರೆ, ಒಂದು ದುರದೃಷ್ಟಕರ ಘಟನೆ ಅವರ ವೃತ್ತಿಜೀವನವನ್ನೇ ಶಾಶ್ವತವಾಗಿ ಬದಲಾಯಿಸಿತು. ದಾವೂದ್ ಇಬ್ರಾಹಿಂ ಜೊತೆಗಿನ ಒಂದು ಫೋಟೋ ಅವರನ್ನು ಪಾತಾಳಕ್ಕೆ ತಳ್ಳಿತು.
1994 ರಲ್ಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕ್ರಿಕೆಟ್ ಪಂದ್ಯವನ್ನು ನೋಡುತ್ತಿರುವ ನಟಿ ಮಂದಾಕಿನಿಯ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡವು. ಇದು ಆಕಯ ಬೋಲ್ಡ್ ಫೋಟೋಗಳಿಗಿಂತಲೂ ಹೆಚ್ಚು ಸುದ್ದಿಯಾದವು. ಇದೇ ಅವರ ವೃತ್ತಿಜೀವನಕ್ಕೆ ಗಂಭೀರವಾದ ಹೊಡೆತ ಕೂಡ ನೀಡಿತು.
ಇದರ ಜೊತೆಗೆ ನಟಿ ಮಂದಾಕಿನಿಯ ಫೋಟೋಗಳು ವೈರಲ್ ಆಗುವ ಒಂದು ವರ್ಷದ ಮೊದಲು, ಮಾರ್ಚ್ 12, 1993 ರಂದು, ಮುಂಬೈನಲ್ಲಿ 12 ಬಾಂಬ್ ಸ್ಫೋಟಗಳು ನಡೆದಿದ್ದವು. ಈ ದುರ್ಘಟನೆಯಲ್ಲಿ 257 ಜನರು ಬಲಿಯಾಗಿ, 1,400 ಮಂದಿ ಗಾಯಗೊಂಡರು. ಇದು ಇಡೀ ಬಾಂಬೆಯ ಚಿತ್ರಣವನ್ನೇ ಶಾಶ್ವತವಾಗಿ ಬದಲಾಯಿಸಲಾಯಿತು. ಈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ.

ಮತ್ತೆ ಸರಿಯಾಗದ ನಟಿ ಮಂದಾಕಿನಿ ಇಮೇಜ್!
ದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬರ ಜೊತೆಗೆ ನಟಿ ಮಂದಾಕಿನಿಯ ಅವರ ಫೋಟೋಗಳು ಕಾಣಿಸಿಕೊಂಡ ನಂತರ ಮತ್ತೆ ಆಕೆಯ ಇಮೇಜ್ ಸರಿಪಡಿಸಲಾಗಲೇ ಇಲ್ಲ. ಅಷ್ಟು ವರ್ಷ ಕಷ್ಟದಿಂದ ಕಟ್ಟಿದ್ದ ಆಕೆಯ ಕೆರಿಯರ್ ಕೊಚ್ಚಿ ಹೋಗಿತ್ತು. ಆಗಿನ ದೊಡ್ಡ ನಟಿಯಾಗಿದ್ದ ಅವರು ಮತ್ತೆ ಚಿತ್ರರಂಗದಿಂದ ದೂರವಾಗುವಂತಾಯಿತು.
ಬೆಂಗಳೂರಿನಲ್ಲಿ ದಾವೂದ್ ಇಬ್ರಾಹಿಂ ಮಗ!
ಆ ಸಮಯದಲ್ಲಿ ಇಬ್ಬರಿಗೆ ಒಬ್ಬ ಮಗನಿದ್ದ ಎಂದು ವರದಿಯಾಗಿದೆ. ಮಗುವನ್ನು ಮಂದಾಕಿನಿಯ ಸಹೋದರಿ ಬೆಂಗಳೂರಿನಲ್ಲಿ ಸಾಕುತ್ತಿದ್ದರು ಎಂದು ದೆಹಲಿಯ ಮಾಜಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಅವರು ತಮ್ಮ ಡಯಲ್ ಡಿ ಫಾರ್ ಡಾನ್ ಪುಸ್ತಕದಲ್ಲಿ ಈ ಬಗ್ಗೆ ಬರೆದಿದ್ದಾರೆ.
ಇನ್ನು, ಮುಂಬೈನಲ್ಲಿ ರಕ್ತಪಾತಕ್ಕೆ ಕಾರಣವಾದ ಭೂಗತ ಪಾತಕಿ ಜೊತೆಗೆ ಸಂಬಂಧದಲ್ಲಿದ್ದ ಕಾರಣ ಅವರ ಬ್ಗಗೆ ದ್ವೇಷ ಕೂಡ ಹೆಚ್ಚಿತ್ತು. ಹೀಗಾಗಿ ಶೀಘ್ರದಲ್ಲೇ ಆಕೆ ಬಾಲಿವುಡ್ ಬಿಡಬೇಕಾಯಿತು. ಆದರೆ, ದಾವೂದ್ ಜೊತೆ ಕೇವಲ ಸ್ನೇಹ ಸಂಬಂಧವಾಗಿತ್ತು. ದುಬೈಗೆ ಹೋದ ನಂತರ ಕೇವಲ ಒಂದೆರಡು ಬಾರಿ ಮಾತ್ರ ಅವರನ್ನು ಭೇಟಿಯಾಗಿದ್ದೆ ಎಂದು ಅವರು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದಾರೆ.


Click it and Unblock the Notifications










