ಉಪಾಸನಾ ಹೆರಿಗೆಯ ಆಸ್ಪತ್ರೆ ಬಿಲ್ ಎಷ್ಟು ಕೋಟಿ? ಅಷ್ಟು ದೊಡ್ಡ ಮೊತ್ತ ಕಟ್ಟಿದ್ದು ಯಾರು?
ಮದುವೆಯಾಗಿ 11 ವರ್ಷಗಳ ನಂತರ ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಕಳೆದ ಮಂಗಳವಾರ ಮೆಗಾ ಫ್ಯಾಮಿಲಿ ಸೊಸೆ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಮೆಗಾ ಅಭಿಮಾನಿಗಳು ಖುಷಿಯಾಗಿದ್ದಾರೆ. 4 ದಿನಗಳ ನಂತರ ಉಪಾಸನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದಾರೆ.
ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯಲ್ಲಿ ಒಂದು ದಿನ ಮೊದಲು ಉಪಾಸನಾ ಹೆರಿಗೆಗಾಗಿ ದಾಖಲಾಗಿದ್ದರು. ನುರಿತ ವೈದ್ಯರು ಹೆರಿಗೆ ಮಾಡಿಸಿದ್ದರು. ಆಕೆ ಡಿಸ್ಚಾರ್ಜ್ ಆಗಿದ್ದ ದಿನ ರಾಮ್‌ಚರಣ್ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಬಹಳ ಸಹಕರಿಸಿದರು ಅವರಿಗೂ ಧನ್ಯವಾದ. ನಮ್ಮ ಮಗುವಿನ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇದೆ ಎಂದು ಹೇಳಿದ್ದರು. ಇನ್ನು ಅಭಿಮಾನಿಗಳು ಮೆಗಾ ಪ್ರಿನ್ಸೆಸ್‌ನ ನೋಡಲು ಉತ್ಸುಕರಾಗಿದ್ದಾರೆ.

ಉಪಾಸನಾ ಹೆರಿಗೆ ದಿನ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದರು. ಎಲ್ಲರಿಗೂ ಮೆಗಾ ಫ್ಯಾಮಿಲಿ ಧನ್ಯವಾದ ತಿಳಿಸಿತ್ತು. ಇನ್ನು ಉಪಾಸನಾ ತಮ್ಮ ಮಗಳ ಜೊತೆಗೆ ತಾಯಿಯ ಮನೆಗೆ ಹೊರಟಿದ್ದಾರೆ ಎನ್ನಲಾಗ್ತಿದೆ. ಇನ್ನು ಹೆರಿಗೆಯ ಆಸ್ಪತ್ರೆಯ ಬಿಲ್ ಎಷ್ಟಾಯ್ತು? ಯಾರು ಕಟ್ಟಿದರು? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಉಪಾಸನಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ನುರಿತ ವೈದ್ಯರಿಂದ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಇನ್ನು ಹೈದರಾಬಾದ್‌ನ ಪ್ರತಿಷ್ಟಿತ ಅಪೋಲೊ ಆಸ್ಪತ್ರೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ. ಹೈದರಾಬಾದ್‌ನ ನುರಿತ ವೈದ್ಯರ ಜೊತೆಗೆ ವಿದೇಶದ ವೈದ್ಯರು ಈ ವೇಳೆ ಹಾಜರಿದ್ದರು ಎನ್ನಲಾಗ್ತಿದೆ. ಹಾಗಾಗಿ ಹೆರಿಗೆಗೆ ಭಾರೀ ಮೊತ್ತವನ್ನೇ ವ್ಯಯಿಸಿದ್ಧಾರೆ ಎನ್ನಲಾಗ್ತಿದೆ.
ಆಸ್ಪತ್ರೆ ಹೆರಿಗೆ ಬಿಲ್ 1.50 ಕೋಟಿ?
ಉಪಾಸನಾ ಹೆರಿಗೆಗೆ ಬೇಕಾದ ಪರಿಕರಗಳನ್ನು ಕೂಡ ವಿದೇಶದಿಂದ ತರಿಸಲಾಗಿತ್ತು ಎನ್ನಲಾಗ್ತಿದೆ. ಇನ್ನು ಉಪಾಸನಾ ತಮ್ಮ ಹೊಕ್ಕುಳ ಬಳ್ಳಿಯ ರಕ್ತ ಶೇಖರಿಸಿಡಲು ನಿರ್ಧರಿಸಿದ್ದರು. ಅದಕ್ಕಾಗಿಯೂ ವಿಶೇಷ ಕಾಳಜಿ ವಯಿಸಲಾಗಿತ್ತು ಎನ್ನಲಾಗ್ತಿದೆ. ಹಾಗಾಗಿ ಹೆರಿಗೆ ಹಾಗೂ 5 ದಿನ ಆಸ್ಪತ್ರೆಯಲ್ಲಿ ಇದ್ದಿದ್ದಕ್ಕೆ ಅಂದಾಜು 1.50 ಕೋಟಿ ರೂ. ವೆಚ್ಚವಾಗಿದೆ ಎನ್ನುವ ಗುಸುಗುಸು ಕೇಳಿಬರ್ತಿದೆ.

ಬಿಲ್ ಪಾವತಿಸಿದ ರಾಮ್‌ಚರಣ್?
ಉಪಾಸನಾ ಅಲೋಲೋ ಆಸ್ಪತ್ರೆ ಸಮೂಹದ ಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಮೊಮ್ಮಗಳು. ಉಪಾಸನಾ ಅಫೋಲೊ ಚಾರಿಟಿಯ ವೈಸ್ ಪ್ರೆಸಿಡೆಂಟ್ ಕೂಡ ಆಗಿದ್ದಾರೆ. ತಮ್ಮದೇ ಆಸ್ಪತ್ರೆಯಲ್ಲಿ ಉಪಾಸನಾ ಹೆರಿಗೆ ನಡೆದಿದೆ. ಹಾಗಾಗಿ ಯಾವುದೇ ಬಿಲ್ ಕಟ್ಟುವ ಪ್ರಮೇಯ ಬರುವುದಿಲ್ಲ ಎನ್ನುವುದು ಕೆಲವರ ವಾದ. ಅವರದ್ದೇ ಆಸ್ಪತ್ರೆ ಆದರೂ ಕೂಡ ಹೆರಿಗೆಗೆ 1.50 ಕೋಟಿ ರೂ. ವೆಚ್ಚ ತಗುಲಿದೆ. ಅದನ್ನು ರಾಮ್‌ಚರಣ್ ಪಾವತಿಸಿದರು ಎಂದು ಕೆಲವರು ಹೇಳುತ್ತಿದ್ದಾರೆ. ಅತ್ತೆ ಮಾವ ಬಿಲ್ ಪಾವತಿಸಲು ಚರಣ್ ಒಪ್ಪಲಿಲ್ಲವಂತೆ.
ಶೀಘ್ರದಲ್ಲೇ ಮೆಗಾ ಪ್ರಿನ್ಸೆಸ್ ನಾಮಕರಣ
ಉಪಾಸನಾ ಡಿಸ್ಚಾರ್ಜ್ ಆಗಿದ್ದ ದಿನವೇ ರಾಮ್‌ಚರಣ್ ಮಾತನಾಡಿ 21 ದಿನಗಳ ನಂತರ ಹೆಸರಿಡುತ್ತೇವೆ ಎಂದಿದ್ದರು. ಈಗಾಗಲೇ ಒಂದು ಹೆಸರನ್ನು ಮನೆಯವರೆಲ್ಲಾ ಸೇರಿ ಫೈನಲ್ ಮಾಡಿದ್ದೇವೆ, ನಾಮಕರಣದ ದಿನ ಅದು ಗೊತ್ತಾಗುತ್ತದೆ. ಇನ್ನು ಮಗಳು ನನ್ನಂತೆಯೇ ಇದ್ದಾಳೆ ಎಂದು ಹೇಳಿ ಸಂಭ್ರಮಿಸಿದ್ದರು. ಅಭಿಮಾನಿಗಳಂತೂ ಮೆಗಾ ಪ್ರಿನ್ಸೆಸ್‌ನ ನೋಡಲು, ಆಕೆಯ ಹೆಸರು ತಿಳಿಸುಕೊಳ್ಳಲು ಕಾತರರಾಗಿದ್ದಾರೆ.
ತಡವಾಗಲಿಗೆ 'ಗೇಮ್ ಚೇಂಜರ್'
ಸದ್ಯ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ನಟಿಸ್ತಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಪತ್ನಿ ಉಪಾಸನಾ ಗರ್ಭೀಣಿ ಎನ್ನುವ ವಿಷಯ ತಿಳಿದ ಬಳಿಕ ರಾಮ್‌ಚರಣ್ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಹೆಚ್ಚಿನ ಸಮಯ ಪತ್ನಿಯೊಂದಿಗೆ ಕಳೆದರು. ವಿದೇಶಕ್ಕೆ ಪ್ರವಾಸಕ್ಕೆ ಹೋಗಿ ಬಂದರು. ಮಡದಿಯ ಹೆರಿಗೆ ನಂತರ ಮತ್ತಷ್ಟು ಸಮಯ ಫ್ಯಾಮಿಲಿಗೆ ಮೀಸಲಿಡಲು ನಿರ್ಧರಿಸಿದ್ದಾರೆ. ಹಾಗಾಗಿ ಸಿನಿಮಾ ರಿಲೀಸ್ ತಡವಾಗುತ್ತಿದೆ.


Click it and Unblock the Notifications











