'ಡೆವಿಲ್' ಸಿನಿಮಾಗಾಗಿ ಇಲ್ಲಿವರೆಗೂ ಸುರಿದಿದ್ದು ಎಷ್ಟು ಕೋಟಿ? ನಿರ್ಮಾಪಕರ ಪಾಲಿಗೀಗ 'ಡೆವಿಲ್' ಯಾರು?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಹೊಸ ಸಿನಿಮಾ ಶುರುವಾಗುತ್ತಿರೋ ಸುದ್ದಿ ಸಿಕ್ಕಿದರೆ ಸಾಕು ಸ್ಯಾಂಡಲ್‌ವುಡ್ ಅಲರ್ಟ್ ಆಗುವಂತಹ ಸ್ಥಿತಿಯಿತ್ತು. ದರ್ಶನ್‌ರದ್ದು ಪ್ಯಾನ್ ಇಂಡಿಯಾ ಸಿನಿಮಾ ಆಗದೇ ಹೋದರೂ, ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿತ್ತು. ಅದಕ್ಕೆ ಉತ್ತಮ ಉದಾಹರಣೆ ಅಂದರೆ 'ಕಾಟೇರ'. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗಿದೆ.

'ಕ್ರಾಂತಿ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಹೀಗಾಗಿ ಅಳೆದು ತೂಗಿ 'ಕಾಟೇರ' ಸಿನಿಮಾವನ್ನು ದರ್ಶನ್ ಆಯ್ಕೆ ಮಾಡಿಕೊಂಡಿದ್ದರು. ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ 'ಕಾಟೇರ' ನೂರು ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿದೆ ಅಂತ ಚಿತ್ರತಂಡದಿಂದ ಮಾಹಿತಿ ಹೊರಬಂದಿದ್ದವು. ಅದ್ಯಾವಾಗ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತೋ ಆಗಲೇ ಮಿಲನ ಪ್ರಕಾಶ್ ನಿರ್ದೇಶಿಸಬೇಕಿದ್ದ 'ಡೆವಿಲ್' ಸೆಟ್ಟೇರಿತ್ತು.

Do you know how much money has been spent on Darshan s Devil movie so far

'ಡೆವಿಲ್' ದರ್ಶನ್ ಅಭಿಮಾನಿಗಳು ಇಷ್ಟ ಪಡುವಂತಹ ಕಥೆ ಅಂತ ಚಿತ್ರತಂಡವೇ ಹೇಳಿಕೊಂಡಿತ್ತು. 'ಕಾಟೇರ' ಸಕ್ಸಸ್ ಬೆನ್ನಲ್ಲೇ ಮತ್ತೊಮ್ಮೆ ಪ್ರಯೋಗಕ್ಕೆ ಕೈ ಹಾಕಿರಲಿಲ್ಲ. ಅಭಿಮಾನಿಗಳಿಗೆ ಪಕ್ಕಾ ಮಾಸ್, ಆಕ್ಷನ್ ಸಿನಿಮಾ ಕೊಡುವುದಕ್ಕೆ ದರ್ಶನ್ ಮುಂದಾಗಿದ್ದರು. ಆರಂಭದಲ್ಲಿ ಬಿಟ್ಟಿದ್ದ ಚಿಕ್ಕದೊಂದು ಟೀಸರ್ ಅದನ್ನು ಸಾರಿ ಹೇಳಿತ್ತು. ಹೀಗಾಗಿ ಸಿನಿಮಾದ ಶೂಟಿಂಗ್ ಕೂಡ ವೇಗವಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲೇ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಹಾಗಿದ್ದರೆ, 'ಡೆವಿಲ್' ಮುಂದಿನ ಕಥೆಯೇನು? ಎಷ್ಟು ಭಾಗ ಶೂಟಿಂಗ್ ಆಗಿದೆ? ಎಷ್ಟು ಖರ್ಚಾಗಿದೆ? ನಷ್ಟ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ..

ದರ್ಶನ್ ಬಂಧನಕ್ಕೂ ಮುನ್ನ 'ಡೆವಿಲ್' ಸಿನಿಮಾಗಾಗಿ ದೊಡ್ಡ ಸೆಟ್‌ ಹಾಕಲಾಗಿತ್ತು. ಹೀಗಾಗಿ ಮೈಸೂರಿನಲ್ಲಿ 'ಡೆವಿಲ್' ಬೀಡು ಬಿಟ್ಟಿತ್ತು. ಒಂದ್ಕಡೆ ಸಿನಿಮಾ ಶೂಟಿಂಗ್‌ಗೆ ಬೇಕಿರೋ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ರನ್ನು ಅರೆಸ್ಟ್ ಆಗಿದ್ದರು. ದರ್ಶನ್ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ 'ಡೆವಿಲ್' ತಂಡಕ್ಕೆ ಶಾಕ್ ಆಗಿತ್ತು. ಅದರಲ್ಲೂ ನಿರ್ದೇಶಕ ಪ್ರಕಾಶ್ ವೀರ್ (ಮಿಲನ ಪ್ರಕಾಶ್) ಇನ್ನೂ ಈ ಶಾಕ್‌ನಿಂದ ಹೊರಬಂದಿಲ್ಲ ಅಂತ ಇಡೀ ಸ್ಯಾಂಡಲ್‌ವುಡ್‌ ಮಾತಾಡಿಕೊಳ್ಳುತ್ತಿದೆ.

ಗಾಂಧಿನಗರದ ಪ್ರಕಾರ, 'ಡೆವಿಲ್' ಸಿನಿಮಾದ ಶೂಟಿಂಗ್ ಈಗಾಗಲೇ ಶೇ.25ರಷ್ಟು ಮುಗಿದಿದೆ ಅನ್ನೋ ಮಾಹಿತಿಯಿದೆ. ಇದೇ ವರ್ಷ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದ್ದರಿಂದ ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್ ಅನ್ನು ಮುಗಿಸುವುದಕ್ಕೆ ಪ್ಲಾನ್ ಮಾಡಲಾಗಿತ್ತಂತೆ. ಯಾಕಂದ್ರೆ, ಎರಡನೇ ಶೆಡ್ಯೂಲ್ ಆರಂಭಕ್ಕೂ ಮುನ್ನವಷ್ಟೇ ನಿರ್ದೇಶಕ ಮಿಲನ ಪ್ರಕಾಶ್ ಕಿಸ್‌ಮಸ್‌ಗೆ 'ಡೆವಿಲ್' ರಿಲೀಸ್ ಅಂತ ಅನೌನ್ಸ್ ಮಾಡಿದ್ದರು.

Do you know how much money has been spent on Darshan s Devil movie so far

25 ದಿನಗಳು ನಡೆದಿರೋ 'ಡೆವಿಲ್' ಶೂಟಿಂಗ್‌ಗಾಗಿ ಸುಮಾರು 10 ರಿಂದ 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಸೆಕೆಂಡ್ ಶೆಡ್ಯೂಲ್‌ನಲ್ಲೂ ದುಬಾರಿ ವೆಚ್ಚದಲ್ಲಿ ಸೆಟ್ ಅನ್ನು ಹಾಕಲಾಗಿತ್ತಂತೆ. ಈ ಸೆಟ್ಟುಗಳಿಗೂ ಸಿಕ್ಕಾಪಟ್ಟೆ ಹಣ ಖರ್ಚು ಮಾಡಿದ್ದರು ಎನ್ನಲಾಗಿದೆ. ಆದ್ರೀಗ ದರ್ಶನ್‌ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ನ್ಯಾಯಾಂಗ ಬಂಧನ ನೀಡಿದರೂ, ಬೆಲ್ ಸಿಗುವುದಕ್ಕೆ ಕಮ್ಮಿ ಅಂದರೂ ಮೂರು ತಿಂಗಳು ಬೇಕು ಎನ್ನಲಾಗಿದೆ. ಹೀಗಾಗಿ ಈ ಸೆಟ್ಟುಗಳು ಉಪಯೋಗಕ್ಕೆ ಬರೋದು ಅನುಮಾನ.

ಹೀಗಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಹಾಕಿದ ಸೆಟ್ಟನಿಂದ ನಷ್ಟ ಆಗಿದೆ. ದರ್ಶನ್ ರಿವೀಲ್ ಆಗಿ ಮತ್ತೆ ಶೂಟಿಂಗ್‌ಗೆ ಹೋಗುವಾಗ ಮತ್ತೆ ಸೆಟ್ಟು ಹಾಕಬೇಕಾದ ಅನಿವಾರ್ಯತೆ ಎದುರಾಗಬಹುದು. ಅಲ್ಲದೆ, ಸಿನಿಮಾ ರಿಲೀಸ್‌ ಕೂಡ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಲಿದೆ. ಹೀಗಾಗಿ ನಿರ್ಮಾಪಕರಿಗೆ ನಷ್ಟ ಅನ್ನೋದು ಕಟ್ಟಿದ್ದೆ. ದರ್ಶನ್ ಬಂಧನದ ಬಳಿಕ ಸಿನಿಮಾವನ್ನೇ ನಿಲ್ಲಿಸಿಬಿಡಬಹುದಾ? ಅನ್ನೋ ಆತಂಕ ಅಭಿಮಾನಿಗಳಲ್ಲಿ ಇತ್ತು. ದರ್ಶನ್ ರಿಲೀಸ್ ಬಳಿಕ 'ಡೆವಿಲ್' ಅವತಾರ ತಾಳುತ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ನಿರ್ಮಾಪಕರಿಗೆ ಮಾತ್ರ ನಷ್ಟ ಕೋಟಿ ಲೆಕ್ಕದಲ್ಲೇ ನಷ್ಟ ಆಗಿದೆ ಅಂತ ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.

More from Filmibeat

English summary
Devil movie future and details of spent money:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X