Don't Miss!
- News
ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
- Sports
ಟಿ20 ವಿಶ್ವಕಪ್ನ ಭಾರತ ತಂಡಕ್ಕೆ ಆಯ್ಕೆಯಾಗುವ ಮೂವರು ಕ್ರಿಕೆಟಿಗರನ್ನು ಹೆಸರಿಸಿದ ಕೈಫ್
- Technology
ಒಪ್ಪೋ ರೆನೋ 8 ಸ್ಮಾರ್ಟ್ಫೋನ್ ಬಿಡುಗಡೆ! 33W ಚಾರ್ಜಿಂಗ್ ವಿಶೇಷ!
- Lifestyle
ಆ. 17ಕ್ಕೆ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: 4 ರಾಶಿಗಳಿಗೆ ಅದೃಷ್ಟ, 3 ರಾಶಿಯವರು ಹುಷಾರು
- Automobiles
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Finance
5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಸಗಟು ಹಣದುಬ್ಬರ: ಜುಲೈನಲ್ಲಿ ಶೇ. 13.93 ದಾಖಲು
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ದುಬೈನಲ್ಲಿದೆ ಅಪ್ಪು ನೆಚ್ಚಿನ ಲ್ಯಾಂಬೋರ್ಗಿನಿ ಕಾರು: ಈಗ ಯಾರು ಬಳಸುತ್ತಿದ್ದಾರೆ?
ನಟ ಪುನೀತ್ ರಾಜ್ಕುಮಾರ ಎಲ್ಲರ ಮನಸ್ಸಲ್ಲಿ ಅಳಿಯದ ಧ್ರುವತಾರೆಯಾಗಿ ಉಳಿದುಬಿಟ್ಟಿದ್ದಾರೆ. ಅಪ್ಪು ಎಂದರೆ ಪ್ರೀತಿಯಿಂದ ಸದಾ ಅಪ್ಪಿಕೊಳ್ಳುವಷ್ಟು ಸವಿ ನೆನಪುಗಳನ್ನೇ ಕೊಟ್ಟು ಹೋಗದ್ದಾರೆ ಪುನೀತ್ ರಾಜ್ಕುಮಾರ್. ಪುನೀತ್ ರಾಜ್ಕುಮಾರ್ ಅವರಿಗೆ ಹಲವು ಆಸಕ್ತಿಗಳಿದ್ದವು.
ಸಿನಿಮಾ ಹೊರತು ಪಡಿಸಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಇದ್ದ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದರು ಅಪ್ಪು. ಹೊಸ ರುಚಿಯನ್ನು ಹುಡುಕಿಕೊಂಡು ಹೋಗುತ್ತಿದ್ದರು ಅಪ್ಪು, ಹಾಗೆ ಹೊಸ ಜಾಗಳನ್ನು ಎಕ್ಸ್ಪ್ಲೋರ್ ಮಾಡುವ ಹವ್ಯಾಸಗಳನ್ನು ಅಪ್ಪು ಹೊಂದಿದ್ದರು.
'ವೇದಾ'
ವೇದಿಕೆಯಲ್ಲಿ
ಡಾ.ರಾಜ್ಕುಮಾರ್,
ಪುನೀತ್
ಅನ್ನು
ನೆನೆದ
ಅನಿಲ್
ಕುಂಬ್ಳೆ
ಅದರಲ್ಲಿ ಅಪ್ಪುಗೆ ಕಾರ್ ಮತ್ತು ಬೈಕ್ ಕ್ರೇಜ್ ಕೂಡ ಇತ್ತು. ಹಾಗಾಗಿ ಹಲವು ಬಗೆಯ ದುಬಾರಿ ಕಾರು ಮತ್ತು ಬೈಕ್ಗಳು ಪುನೀತ್ ರಾಜ್ಕುಮಾರ್ ಅವರ ಬಳಿ ಇದ್ದವು. ಅದರಲ್ಲಿ ಅಪ್ಪುಗೆ ಲ್ಯಾಂಬೋರ್ಗಿನಿ ಕಾರು ಎಂದರೆ ಅಚ್ಚು ಮೆಚ್ಚು. ಆದರೆ ಅಪ್ಪು ಬಳಿಕ ಆ ಕಾರು ಅವರ ಮನೆಯಲ್ಲಿ ಇಲ್ಲ.

ಅಪ್ಪು ಪತ್ನಿಗೆ ಲ್ಯಾಂಬೋರ್ಗಿನಿ ಗಿಫ್ಟ್!
ನಟ ಪುನೀತ್ ರಾಜ್ಕುಮಾರ್ ಮನೆಗೆ ಈ ಲ್ಯಾಂಬೋರ್ಗಿನಿ ಬಂದಿದ್ದು 2019ರಲ್ಲಿ. ಈ ಕಾರನ್ನು ಪುನೀತ್ ರಾಜ್ಕುಮಾರ್ ತಮಗಾಗಿ ತೆಗೆದುಕೊಂಡಿದ್ದಲ್ಲ. ಬದಲಿಗೆ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಅದರಲ್ಲೂ ಈ ಕಾರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಅಪ್ಪು, ಅಶ್ವಿನಿ ಅವರಿಗೆ ಗಿಫ್ಟ್ ಮಾಡಿದ್ದರು.
'ರಾಜಕುಮಾರ'ನ
ನಿವಾಸ
ತೊರೆದ
ಗನ್ಮ್ಯಾನ್
ಚಲಪತಿ:
ಈಗ
ಏನು
ಮಾಡುತ್ತಿದ್ದಾರೆ?

ಅಪ್ಪು ಇಷ್ಟದ ಕಾರು!
ಈ ನೀಲಿ ಬಣ್ಣ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 4 ಕೋಟಿ ರೂ. ಈ ಕಾರನ್ನು ಅಪ್ಪು ಪತ್ನಿಗಾಗಿ ಕೊಟ್ಟಿದ್ದರು. ಆದರೆ ಇದನ್ನು ಹೆಚ್ಚಾಗಿ ಅಪ್ಪು ಬಳಕೆ ಮಾಡುತ್ತಿದ್ದರು. ಈ ಕಾರಿನಲ್ಲಿ ರೈಡ್ ಹೋಗುವುದು ಎಂದರೆ ಅಪ್ಪುಗೆ ಅಚ್ಚು ಮೆಚ್ಚು. ಸ್ಯಾಂಡಲ್ವುಡ್ನಲ್ಲಿ ಪುನೀತ್ ರಾಜ್ಕುಮಾರ್ ಸೇರಿದಂತೆ ಕೆಲವರ ಬಳಿ ಮಾತ್ರವೇ ಈ ಕಾರು ಇದೆ.

ದುಬೈಗೆ ಹೋಯ್ತು ಅಪ್ಪು ಲ್ಯಾಂಬೋರ್ಗಿನಿ!
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಲ್ಯಾಂಬೋರ್ಗಿನಿ ಕಾರನ್ನು ಯಾರು ಬಳಕೆ ಮಾಡುತ್ತಿರಲಿಲ್ಲವಂತೆ. ಈಗ ಈ ಕಾರು ಪುನೀತ್ ರಾಜ್ಕುಮಾರ್ ನಿವಾಸದಲ್ಲಿ ಇಲ್ಲ. ದುಬೈನಲ್ಲಿ ಇದೆ ಎನ್ನಲಾಗಿದೆ. ಈ ಕಾರನ್ನು ಪುನೀತ್ ಧರ್ಮಪತ್ನಿ ಅಶ್ವಿನಿ ಅವರ ಸೋದರನ ಬಳಿ ಇದೆ ಎನ್ನಲಾಗಿದೆ. ಅಪ್ಪು ಬಳಿಕ ಅಶ್ವಿನಿ ಅವರು ಕೂಡ ಈ ಕಾರನ್ನು ಬಳಸುತ್ತಿಲ್ಲ.
ಯುವರಾಜ್
ಕುಮಾರ್
ಚಿತ್ರದ
ಶೂಟಿಂಗ್ಗೆ
ದಿನಾಂಕ
ನಿಗದಿ!

ಅಪ್ಪುಗೆ ಬೈಕ್, ಕಾರ್ ಕ್ರೇಜ್!
ಅಂದಹಾಗೆ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಕಾರ್ ಕ್ರೇಜ್ ಬಾಲ್ಯದಿಂದನೂ ಇತ್ತು. ಅಪ್ಪು ಸಾಕಷ್ಟು ಐಶಾರಾಮಿ ಕಾರುಗಳ ಒಡೆಯನಾಗಿದ್ದರು. ಅವರ ಬಳಿ ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳಿದ್ದವು. ಅಷ್ಟೆಯಲ್ಲ ದುಬಾರಿ ಬೈಕ್ಗಳು ಸಹ ಪುನೀತ್ ಬಳಿ ಇದ್ದವು. ಈ ಲಿಸ್ಟ್ಗೆ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿತ್ತು.