For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಒಡೆತನದ 150 ಎಕರೆ ದುಬಾರಿ ಫಾರ್ಮ್ ಹೌಸ್!

  |

  ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಟಾಪ್ ಸ್ಟಾರ್ ಎನ್ನುವುದರಲ್ಲಿ ಡೌಟ್ ಇಲ್ಲ. ದಶಕಗಳಿಂದ ಸಿನಿಮಾರಂಗದಲ್ಲಿ ಸಲ್ಲು ಸಕ್ರಿಯವಾಗಿದ್ದಾರೆ. ಇನ್ನು ಸಲ್ಮಾನ್ ಖಾನ್‌ ಅವರು ಕೂಡ ಇತರೆ ಸ್ಟಾರ್‌ಗಳಂತೆ ಸಿಕ್ಕಾ ಪಟ್ಟೆ ಆಸ್ತಿ ಹೊಂದಿದ್ದಾರೆ. ತಮ್ಮ ಕುಟುಂಬದೊಂದಿಗೆ ಸಲ್ಲು ಮುಂಬೈನಲ್ಲಿ ವಾಸ ಇರುತ್ತಾರೆ.

  ಹಾವು ಕಡಿತಕ್ಕೆ ಒಳಗಾಗಿದ್ದ ಸಲ್ಲು ಮೊದಲ ಬಾರಿಗೆ ಪ್ರತಿಕ್ರೀಯೆ

  ಸಲ್ಮಾನ್‌ ಖಾನ್‌ ಅವರ ಲೈಫ್‌ ಸ್ಟೈಲ್‌ ಬಗ್ಗೆ ನಿಮಗೆಲ್ಲಾ ಕೊಂಚ ಮಟ್ಟಿಗೆ ಗೊತ್ತಿರುತ್ತದೆ. ಇಲ್ಲವಾದರೆ ನೀವೂ ಹಾಗೆ ಸುಮ್ಮನೆ ಅಂದಾಜಿಸ ಬಹುದು. ಅವರು ದೊಡ್ಡ ಸ್ಟಾರ್‌ ನಟ ಸಿನಿಮಾ ಕುಟುಂಬದವರು, ಹಾಗಾಗಿ ಅವರು ಕೋಟಿ ಬೆಲೆ ಬಾಳುವ ಬಂಗಲೆಯಲ್ಲೇ ವಾಸ ಮಾಡುತ್ತಾರೆ. ಮುಂಬೈನಲ್ಲಿ ಸಲ್ಮಾನ್‌ ಖಾನ್‌ ವಾಸ ಇರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಬಗ್ಗೆ ಈಗಾಗಲೆ ಸಾಕಷ್ಟು ಸುದ್ದಿಗಳು ಬಂದಿವೆ.

  ಸಲ್ಮಾನ್ ಖಾನ್ ಮನೆ ಮಾತ್ರ ಅಲ್ಲ. ಅವರ ತೋಟದ ಮನೆ ಕೂಡ ಕೋಟಿ ಬೆಲೆ ಬಾಳುವಂಹದ್ದು. ಅದೇ ಇತ್ತೀಚೆಗೆ ಸಲ್ಮಾನ್‌ ಖಾನ್‌ ಅವರಿಗೆ ಹಾವು ಕಚ್ಚಿ ಸುದ್ದಿ ಆಗಿತ್ತಲ್ಲವಾ, ಅದೇ ಪನ್ವೆಲ್ ಫಾರ್ಮ್ ಹೌಸ್ ಬಗ್ಗೆ ನಾವು ಹೇಳ್ತಾ ಇರುವುದು. ಈ ಫಾರ್ಮ್ ಹೌಸ್ ಎಷ್ಟು ಬೆಲೆಯುಳ್ಳದ್ದು, ಎಷ್ಟು ಎಕರೆ ಇದೆ, ಹೇಗೆ ನಿರ್ಮಾಣ ಆಗಿದೆ ಎನ್ನುವ ವರದಿ ಇಲ್ಲಿದೆ ಮುಂದೆ ಓದಿ...

  ಸಲ್ಲು ತೋಟದ ಮನೆ 150 ಎಕರೆ ಇದೆ!

  ಸಲ್ಮಾನ್‌ ಖಾನ್‌ ಅವರ ಪನ್ವೆಲ್ ಫಾರ್ಮ್‌ ಹೌಸ್‌ ಒಟ್ಟು ವಿಸ್ತೀರ್ಣ 150 ಎಕರೆ. 150 ಎಕರೆಯ ವಿಶಾಲ ಜಾಗದಲ್ಲಿ ಸಲ್ಮಾನ್‌ ಖಾನ್‌ ಅವರು ಫಾರ್ಮ್‌ ಹೌಸ್‌ ನಿರ್ಮಾಣ ಮಾಡಿಕೊಂಡಿದ್ದಾರೆ. ಫಾರ್ಮ್ ಹೌಸ್‌ಗೆ ಇಷ್ಟು ಜಾಗ ಬೇಕಾ ಎಂದು ಅಚ್ಚರಿ ಆಗಬಹುದು. ಆದರೆ ಈ ಜಾಗದಲ್ಲಿ ಮನೆ, ತೋಟ, ಸೇರಿದಂತೆ ಅಗತ್ಯ ಇರುವ ಎಲ್ಲವನ್ನು ಸಲ್ಲು ನಿರ್ಮಾಣ ಮಾಡಿಕೊಂಡಿದ್ದಾರೆ. ಆಗಾಗ ಇಲ್ಲಿಗೆ ಭೇಟಿ ನೀಡುತ್ತಾ ಸಲ್ಮಾನ್ ಖಾನ್‌ ಸುದ್ದಿ ಆಗುತ್ತಾರೆ. ಲಾಕ್ ಡೌನ್‌ ಸಮಯದಲ್ಲಿ ಸಲ್ಮಾನ್ ಖಾನ್ ಹೆಚ್ಚಾಗಿ ಇಲ್ಲೇ ಕಾಲ ಕಳೆದಿದ್ದಾರಂತೆ.

  80 ಕೋಟಿ ರೂ. ಬೆಲೆ ಬಾಳುತ್ತೆ ಪನ್ವೆಲ್ ಫಾರ್ಮ್ ಹೌಸ್!

  150 ಎಕರೆ ಜಾಗದಲ್ಲಿ ನಿರ್ಮಾಣ ಆಗಿರುವ ಈ ಫಾರ್ಮ್‌ ಹೌಸ್‌ ಬೆಲೆ 80 ಕೋಟಿ ಎಂದು ವರದಿ ಆಗಿದೆ. ಸಂಪೂರ್ಣ ಫಾರ್ಮ್ ಹೌಸನ್ನು ತಮಗೆ ಬೇಕಾದ ರೀತಿಯಲ್ಲಿ ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಸಲ್ಮಾನ್‌ ಖಾನ್ ಇಲ್ಲಿಗೆ ಬಂದು ವಾಸ ಮಾಡುತ್ತಾರೆ. ಹಾಗಾಗಿಯೇ ಈ ಫಾರ್ಮ್ ಹೌಸ್‌ನಲ್ಲಿ ಮನೆಯಲ್ಲಿ ಇರಬೇಕಾದ ಎಲ್ಲಾ ವ್ಯವಸ್ತೆಗಳು ಇವೆ. ಬೆಳಗ್ಗೆ ಬಂದು ಸಂಜೆ ಮನೆ ಕಡೆಗೆ ಹೋಗುವುದಿಲ್ಲ ಸಲ್ಮಾನ್ ಖಾನ್. ವಾರಗಟ್ಟಲೇ, ತಿಂಗಳುಗಟ್ಟಲೇ ಇಲ್ಲೇ ವಾಸ ಮಾಡುತ್ತಾರಂತೆ. ಹಾಗಾಗಿಯೇ ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದ್ದಾರೆ.

  3 ಬಂಗಲೆ, ಸ್ವಿಮ್ಮಿಂಗ್ ಪೂಲ್, ಜಿಮ್ ಇದೆ!

  150 ಎಕರೆಯ ಈ ಜಾಗದಲ್ಲಿ 3 ಭವ್ಯವಾದ ಬಂಗಲೆಗಳನ್ನು ನಿರ್ಮಾಣ ಮಾಡಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಇಲ್ಲಿಗೆ ಭೇಟಿ ನೀಡಿದರೆ, ವಾಸ ಮಾಡಲೆಂದು 3 ಪ್ರತ್ಯೇಕ ಬಂಗಲೆಗಳನ್ನು ಕಟ್ಟಲಾಗಿದೆ. ಜೊತೆಗೆ ಇಲ್ಲಿ ವಿಶಾಲವಾದ ಸ್ವಿಮ್ಮಿಂಗ್ ಪೂಲ್ ಕೂಡ ಇದೆ. ಇಷ್ಟೇ ಅಲ್ಲಾ ಒಂದು ಜಿಮ್‌ ಸೆಟಪ್ ಕೂಡ ಮಾಡಿದ್ದಾರೆ ಸಲ್ಲು. ಜೊತೆಗೆ ಕುದುರೆಗಳನ್ನು ಸಲ್ಲು ಸಾಕಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ತೋಟದ ಸುತ್ತಲೂ ಕುದುರೆ ಸವಾರಿ ಮಾಡುತ್ತಾರಂತೆ ಸಲ್ಮಾನ್ ಖಾನ್.

  ಇಲ್ಲಿ ವ್ಯವಸಾಯ ಮತ್ತು ಪಾರ್ಟಿಗಳು ನಡೆಯುತ್ತವೆ!

  ಈ ಜಾಗದಲ್ಲಿ ವ್ಯವಸಾಯ ಮಾಡಲೆಂದು ಒಂದಷ್ಟು ಜಾಗವನ್ನು ನಿಗದಿ ಮಾಡಲಾಗಿದೆ. ಅಲ್ಲಿ ಏನಾದರು ಬೆಳೆಗಳನ್ನು ಬೆಳೆಯುತ್ತಾ ಇರುತ್ತಾರೆ. ಸಲ್ಮಾನ್‌ ಖಾನ್ ಕೂಡ ತೋಟದಲ್ಲಿ ಕೆಲಸ ಮಾಡುತ್ತಾರೆ, ಆಗಾಗ ಅಲ್ಲಿನ ಫೊಟೋಗಳನ್ನು ಕೂಡ ಸಲ್ಲು ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನು ಇಲ್ಲಿ ದೊಡ್ಡ ಜಾಗ ಇರುವುದರಿಂದ ಹೆಚ್ಚಿನ ಪಾರ್ಟಿಗಳು ಇಲ್ಲೆ ನಡೆಯುತ್ತವೆ ಅಂತೆ. ಇತ್ತೀಚೆಗೆ ಸಲ್ಮಾನ್ ಖಾನ್‌ ಅವರ ಹುಟ್ಟು ಹಬ್ಬದ ಪಾರ್ಟಿ ಕೂಡ ಇದೇ ಫಾರ್ಮ್ ಹೌಸ್‌ನಲ್ಲಿ ಮಾಡಲಾಗಿತ್ತು.

  English summary
  Here Is The Details About Salman Khan Panvel Farmhouse Cost Of 150 Acres Land

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X