twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಯ್ ಮುಂದಿನ ಚಿತ್ರ ಆಂಧ್ರದಲ್ಲಿ ನಿಷೇಧ?

    |

    ಕನ್ನಡ ಚಿತ್ರವೊಂದು ಬಿಡುಗಡೆಗೆ ಮುನ್ನ ಪಕ್ಕದ ಆಂಧ್ರ ಪ್ರದೇಶದಲ್ಲಿ ಭಾರೀ ಹವಾ ಹುಟ್ಟು ಹಾಕಿದೆ. ದುನಿಯಾ ವಿಜಯ್ ಅಭಿನಯದ, ಶ್ರೀಜೈ ನಿರ್ದೇಶನದ 'RX ಸೂರಿ' ಸಿನಿಮಾ ಸದ್ಯ ಸುದ್ದಿಯಲ್ಲಿರುವ ಚಿತ್ರ.

    ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆಯೆಂದರೆ ಈ ಚಿತ್ರವನ್ನು ಆಂಧ್ರದಲ್ಲಿ ಯಾವ ಕಾರಣಕ್ಕೂ ಬಿಡುಗಡೆ ಮಾಡಬಾರದು ಎನ್ನುವ ನಿರ್ಧಾರಕ್ಕೆ ಅಲ್ಲಿನ ಮಂಡಳಿಯವರು ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ರಾಯಲಸೀಮಾ ಭಾಗದ ಇಬ್ಬರು ರೌಡಿಗಳ ನೈಜ ಕಥೆಯನ್ನಾಧರಿಸಿದ ಸಿನಿಮಾ ಇದು ಎನ್ನಲಾಗಿದ್ದು, ಚಿತ್ರವನ್ನು ತೆಲುಗು ಭಾಷೆಗೆ ಡಬ್ ಮಾಡಿದರೆ 'ಅಂತೇ' ಎನ್ನುವ ಬೆದರಿಕೆ ಕರೆಗಳು ನಿರ್ಮಾಪಕ, ನಿರ್ದೇಶಕ ಮತ್ತು ದುನಿಯಾ ಸೂರಿಗೆ ಬರುತ್ತಿದೆ ಎನ್ನುವ ಸುದ್ದಿಯಿದೆ.

    ಈ ಹಿಂದೆ ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ ಚಿತ್ರ ನಿರ್ಮಿಸಿದ್ದ ಕೆ ಎ ಸುರೇಶ್ 'RX ಸೂರಿ' ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಬೆಂಗಾಳಿ ಮೂಲದ ಆಕಾಂಕ್ಷ ನಾಯಕಿ. ಅರ್ಜುನ್ ಜನ್ಯಾ ಚಿತ್ರಕ್ಕೆ ಸಂಗೀತ ನೀಡಿದ್ದು, ಮೇ 1, 2015ರಂದು ಚಿತ್ರದ ಆಡಿಯೋ ಬಿಡುಗಡೆಗೊಂಡಿತ್ತು.

    ಏನು 'RX ಸೂರಿ' ಚಿತ್ರದ ಕಥಾಹಂದರ?

    ರಾಯಲಸೀಮಾ ಭಾಗದ ಕಥೆ

    ರಾಯಲಸೀಮಾ ಭಾಗದ ಕಥೆ

    ರಾಯಲಸೀಮಾ ಭಾಗದ ರಕ್ತಸಿಕ್ತ ಅಧ್ಯಾಯದ ಕೇಂದ್ರ ಬಿಂದುಗಳಾದ ಪೆರಿಟಾಲ ರವಿ ಮತ್ತು ಮದ್ದೆಲ ಚೆರವು ಸೂರಿ ನಡುವಿನ ಜಿದ್ದಾಜಿದ್ದಿನ ವೈಮನಸ್ಸಿನ ಕಥೆಯನ್ನು 'RX ಸೂರಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ತರಲಾಗುತ್ತಿರುವುದೇ ಆಂಧ್ರದಲ್ಲಿ ಚಿತ್ರ ನಿಷೇಧಕ್ಕೆ ಕಾರಣ. (ಚಿತ್ರದಲ್ಲಿ ರವಿ ಮತ್ತು ಸೂರಿ)

    ಪೆರಿಟಾಲ ರವಿ

    ಪೆರಿಟಾಲ ರವಿ

    SSLC ಓದುತ್ತಿದ್ದ ವೇಳೆಯಲ್ಲಿ ಭೂದಣಿಗಳ ಮಾಲೀಕರು ರವೀಂದ್ರ ಆಲಿಯಾಸ್ ಪೆರಿಟಾಲ ರವಿಯ ತಂದೆಯನ್ನು ಬರ್ಭರವಾಗಿ ಹತ್ಯೆಗೈಯುತ್ತಾರೆ. ಮುಂದೆ ತಂದೆಯ ಸಾವಿಗೆ ಮದ್ದೆಲ ಚೆರವು ಸೂರಿಯ ಕುಟುಂಬದವರೇ ಕಾರಣ ಎಂದು ಪೆರಿಟಾಲ, ವಿರೋಧಿ ಬಣದವರನ್ನು ಮುಗಿಸುತ್ತಾ ಬರುತ್ತಾನೆ.

    ಮದ್ದೆಲ ಚೆರವು ಸೂರಿ

    ಮದ್ದೆಲ ಚೆರವು ಸೂರಿ

    ರಾಜಕೀಯವಾಗಿಯೂ (ತೆಲುಗುದೇಶಂ) ಭಾರೀ ಪ್ರಾಭಲ್ಯ ಹೊಂದಿದ್ದ ಪೆರಿಟಾಲ ರವಿ ಆರ್ಭಟ ತಡೆಯಲಾರದೇ ಸೂರಿ, ರಾಯಲಸೀಮಾ ತೊರೆದು ಬೆಂಗಳೂರಿಗೆ ಬಂದು ನೆಲೆಸುತ್ತಾನೆ. ಬೆಂಗಳೂರಿನಿಂದಲೇ ಪೆರಿಟಾಲ ಹತ್ಯೆಗೆ ಸಂಚು ರೂಪಿಸುವ ಸೂರಿ ರಿಮೋಟ್ ಬಾಂಬ್ ಮೂಲಕ ಅವನನ್ನು ಸಾಯಿಸುವ ಸಂಚು ಮಾಡುತ್ತಾನೆ. ಆದರೆ ಅದು ಮಿಸ್ ಆಗಿ ಇತರ 27 ಮಂದಿ ಸಾವನ್ನಪ್ಪುತ್ತಾರೆ. ಈ ಕಾರಣಕ್ಕಾಗಿ ಸೂರಿಗೆ ಜೀವಾವಧಿ ಶಿಕ್ಷೆಯಾಗಿ ಹೈದರಾಬಾದಿನ ಚೆಲ್ಲಪಲ್ಲಿ ಜೈಲು ಪಾಲಾಗುತ್ತಾನೆ.

    ಜೈಲಿನಿಂದಲೇ ಮತ್ತೆ ಸ್ಕೆಚ್

    ಜೈಲಿನಿಂದಲೇ ಮತ್ತೆ ಸ್ಕೆಚ್

    ಜೈಲಿನಿಂದಲೇ ಪೆರಿಟಾಲ ರವಿ ಹತ್ಯೆಗೆ ಮತ್ತೆ ಸ್ಕೆಚ್ ರೂಪಿಸಿ ಅವನನ್ನು ಬರ್ಭರವಾಗಿ ಕೊಲೆಮಾಡಿಸುವಲ್ಲಿ ಸೂರಿ ಯಶಸ್ವಿಯಾಗುತ್ತಾನೆ. ಆಂಧ್ರದ ಸಿಎಂ ಆಗಿದ್ದ ವೈಎಸ್ಆರ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಸೂರಿ 2008ರಲ್ಲಿ ಬಿಡುಗಡೆಯಾಗಿ, ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಾನೆ. ಆದರೆ 2011ರಲ್ಲಿ ತಮ್ಮ ಸಹಪಾಲುದಾರನ ಗುಂಡಿಗೆ ಸೂರಿ ಬಲಿಯಾಗುತ್ತಾನೆ.

    ಸೂರಿ ಪಾತ್ರದಲ್ಲಿ ವಿಜಿ

    ಸೂರಿ ಪಾತ್ರದಲ್ಲಿ ವಿಜಿ

    ಈ ಕಥೆಯನ್ನು ಆಧರಿಸಿದ ಚಿತ್ರವೇ 'RX ಸೂರಿ' ಎನ್ನಲಾಗುತ್ತಿದೆ. ಸೂರಿ ಪಾತ್ರದಲ್ಲಿ ದುನಿಯಾ ವಿಜಯ್ ಮತ್ತು ಪೆರಿಟಾಲ ರವಿ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿದೆ.

    ಇದೇ ವಿವಾದಕ್ಕೆ ಕಾರಣ

    ಇದೇ ವಿವಾದಕ್ಕೆ ಕಾರಣ

    ಬಿಡುಗಡೆಗೆ ಸಿದ್ದವಾಗಿರುವ ಈ ಸಿನಿಮಾ ಈಗ ವಿವಾದದ ಕೇಂದ್ರಬಿಂದು. ಚಿತ್ರದಲ್ಲಿ ತಮ್ಮ ತಮ್ಮ ನಾಯಕರನ್ನು ಸರಿಯಾಗಿ ತೋರಿಸಿದ್ದಾರೋ ಇಲ್ಲವೋ ಎನ್ನುವ ಕಾರಣಕ್ಕಾಗಿ ಪೆರಿಟಾಲ ಮತ್ತು ಸೂರಿ ಬೆಂಬಲಿಗರು ಚಿತ್ರ ನಿಷೇಧಕ್ಕೆ ಒತ್ತಡ ತರುತ್ತಿದ್ದಾರೆ ಎನ್ನುವುದು ಪಕ್ಕದ ಅನಂತಪುರಂ ಕಡೆಯಿಂದ ಬರುತ್ತಿರುವ ಸುದ್ದಿ. (ಮಾಹಿತಿ ಕೃಪೆ: ಹಾಯ್ ಬೆಂಗಳೂರು)

    New layer...
    New layer...

    English summary
    Black Cobra Duniya Vijay's upcoming movie RX Soori will be banned in Andhra Pradesh?
    Monday, May 25, 2015, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X