twitter
    For Quick Alerts
    ALLOW NOTIFICATIONS  
    For Daily Alerts

    'ಸಲಗ'ಗೆ ದುನಿಯಾ ವಿಜಯ್ ಅವರೇ ಮಾವುತ.!

    |

    Recommended Video

    Salaga Movie: ಭರ್ಜರಿಯಾಗಿ ತಯಾರಾಗ್ತಿದೆ ಸಲಗ ಸಿನೆಮಾ

    ಜಾನಿ ಜಾನಿ ಎಸ್ ಪಪ್ಪಾ ಸಿನಿಮಾದ ಬಳಿಕ 'ಕುಸ್ತಿ' ಆರಂಭಿಸಿದ ದುನಿಯಾ ವಿಜಯ್ ಅದ್ಯಾಕೋ ಕುಸ್ತಿಗೆ ಮಧ್ಯಂತರ ನೀಡಿ ಸಲಗ ಕೈಗೆತ್ತಿಕೊಂಡರು. ಭರ್ಜರಿ ಸಿದ್ಧತೆಗಳೊಂದಿಗೆ ಆರಂಭವಾಗುತ್ತಿರುವ ಸಲಗ ಈಗ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ.

    ಸಲಗ ಸಿನಿಮಾಗೆ ದುನಿಯಾ ವಿಜಯ್ ನಾಯಕ. ಟಗರು ಸಿನಿಮಾ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ನಿರ್ಮಾಪಕ. ಒಂದೊಳ್ಳೆ ತಂತ್ರಜ್ಞರ ತಂಡ ಕಟ್ಟಿಕೊಂಡಿರುವ ಸಲಗ ಕಿಕ್ಕೇರಿಸುವಂತಹ ಕಲಾವಿದರನ್ನ ಆಯ್ಕೆ ಮಾಡಿಕೊಂಡಿದೆ.

    <span class='ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ " title="'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ " />'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ

    ಧನಂಜಯ್, ಕಾಕ್ರೋಚ್ ಖ್ಯಾತಿಯ ಸುಧೀ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. 'ಟಗರು' ಸಿನಿಮಾಗೆ ಸಂಭಾಷಣೆ ಬರೆದಿದ್ದು ಮಾಸ್ತಿ ಸಲಗ ಚಿತ್ರಕ್ಕೂ ಡೈಲಾಗ್ ಹೊಣೆ ಹೊತ್ತಿದ್ದಾರೆ. ಅದರ ಜೊತೆಗೆ ಇಬ್ಬರು ಸಂಗೀತ ನಿರ್ದೇಶಕರಿದ್ದು, ಚರಣ್ ರಾಜ್ ಮತ್ತು ನವೀನ್ ಸಜ್ಜು ಮ್ಯೂಸಿಕ್ ವಿಭಾಗದ ಸಾರಥಿಗಳಾಗಿದ್ದಾರೆ.

    Duniya vijay will direct to salaga

    'ಸಲಗ' ದುನಿಯಾ ವಿಜಿ ಜೊತೆ ಸೇರಿದ ಟಗರು ಟೀಂ'ಸಲಗ' ದುನಿಯಾ ವಿಜಿ ಜೊತೆ ಸೇರಿದ ಟಗರು ಟೀಂ

    ಇಷ್ಟೆಲ್ಲಾ ಹೇಳಿದ್ಮೇಲೆ ನಿರ್ದೇಶಕ ಯಾರು ಎಂಬುದು ಮಾತ್ರ ಕುತೂಹಲವಾಗಿಯೇ ಉಳಿದುಕೊಂಡಿದೆ. ಮೊದಲು ರಘು ಶಿವಮೊಗ್ಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ನಂತರ ಅವರ ಬದಲು ಮತ್ತೊಬ್ಬ ಹೊಸ ನಿರ್ದೇಶಕ ಬರಲಿದ್ದಾರೆ ಎನ್ನಲಾಯ್ತು. ಇದೀಗ, ದುನಿಯಾ ವಿಜಯ್ ಅವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.

    ಒಂದು ವೇಳೆ ಇದು ನಿಜವಾಗಿದ್ದೇ ಆದ್ರೆ ಪ್ರಪ್ರಥಮ ಬಾರಿಗೆ ದುನಿಯಾ ವಿಜಯ್ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ನಟ, ನಿರ್ಮಾಪಕರಾಗಿದ್ದ ವಿಜಿ ಡೈರೆಕ್ಟರ್ ಆಗಿಯೂ ಪ್ರಮೋಟ್ ಆಗಲಿದ್ದಾರೆ.

    English summary
    Kannada actor duniya vijay to his direction debut with salaga movie. produced by kp srikanth.
    Monday, May 13, 2019, 20:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X