ಮದಕರಿ ವೇಷ ತೊಟ್ಟು ನಿಂತ ಕಿಚ್ಚ ಸುದೀಪ್
Recommended Video

ಸದ್ಯ ಕನ್ನಡ ಚಿತ್ರರಂಗದಲ್ಲಿ ಚರ್ಚೆ ಆಗುತ್ತಿರುವ ದೊಡ್ಡ ವಿಷಯಗಳ ಪೈಕಿ ಮದಕರಿ ಸಿನಿಮಾ ಕೂಡ ಒಂದಾಗಿತ್ತು. ಈ ಸಿನಿಮಾದ ಮೇಲೆ ಜಾತಿವಾದಿಗಳ ಕಣ್ಣು ಬಿದ್ದಿದೆ.
ದರ್ಶನ್ ಹಾಗೂ ಸುದೀಪ್ ಇಬ್ಬರು ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದರು. ಆದರೆ. ಸುದೀಪ್ ಬಿಟ್ಟು ಬೇರೆ ಯಾರು ಮದಕರಿ ನಾಯಕರ ಪಾತ್ರದಲ್ಲಿ ನಟಿಸಬಾರದು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾ ಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಇವುಗಳ ನಂತರ ಸಿನಿಮಾಗೆ ಜಾತಿ ತರಬೇಡಿ ಎಂದು ಅನೇಕರು ಹೇಳಿದರು. ನಿರ್ಮಾಪಕ ಮುನಿರತ್ನ ಕೂಡ ದರ್ಶನ್, ಸುದೀಪ್ ಇಬ್ಬರು ಸಿನಿಮಾ ಮಾಡಲಿ ಎಂದಿದ್ದರು.
ಅಂದಹಾಗೆ, ಈ ರೀತಿಯ ವಿವಾದಗಳ ನಡುವೆ ಈಗ ಸುದೀಪ್ ಅವರ ಮದಕರಿ ಚಿತ್ರದ ಲುಕ್ ಹೊರ ಬಂದಿದೆ. ಮುಂದೆ ಓದಿ...

ಮದಕರಿಯಾದ ಸುದೀಪ್
ಮದಕರಿ ನಾಯಕರ ಪಾತ್ರವನ್ನು ನಟ ಸುದೀಪ್ ಮಾಡುತ್ತಿದ್ದಾರೆ ಎಂದಾಗಲೇ ಅವರ ಲುಕ್ ಬಗ್ಗೆ ನಿರೀಕ್ಷೆ ಇತ್ತು. ಈಗ ಅವರ ಪಾತ್ರದ ಎರಡು ಫೋಟೋಗಳು ಹೊಸ ಬಂದಿದೆ. ಉದ್ದ ಕೂದಲು ಬಿಟ್ಟ ಕಿಚ್ಚ ಮೀಸೆ ತಿರುವಿದ್ದಾರೆ. ಇದು ಸುದೀಪ್ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದ ಫೋಟೋಗಳೆ ಎನ್ನಲಾಗುತ್ತಿದೆ.

ಫ್ಯಾನ್ ಗಳ ಪೋಸ್ಟರ್ ಗಳು
ಈಗಾಗಲೇ 'ದುರ್ಗದ ಹುಲಿ' ಸಿನಿಮಾದ ಸುದೀಪ್ ಅವರ ಅನೇಕ ಪೋಸ್ಟರ್ ಗಳನ್ನು ಅವರ ಅಭಿಮಾನಿಗಳೆ ಮಾಡಿದ್ದಾರೆ. ಫ್ಯಾನ್ಸ್ ಗಳು ತಮ್ಮ ಕ್ರಿಯಾಶೀಲತೆ ಉಪಯೋಗಿಸಿ ಮಾಡಿರುವ ಪೋಸ್ಟರ್ ಗೆ ಸುದೀಪ್ ಕೂಡ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ಸೂಚಿಸಿದ್ದರು.

ಪ್ರಿಯಾ ಸುದೀಪ್ ನಿರ್ಮಾಪಕಿ
ಸುದೀಪ್ ಅವರ ಈ ಮಹಾ ಸಿನಿಮಾವನ್ನ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಎರಮ್ಮೂರು ಭಾಷೆಗಳಲ್ಲಿ ಈ ಸಿನಿಮಾ ಕನ್ನಡದ ಜೊತೆಗೆ ಇನ್ನೂ ಎರಡು ಭಾಷೆಗಳಲ್ಲಿ ನಿರ್ಮಾಣ ಆಗಲಿಯಂತೆ.

ನಿನ್ನೆ ಬಂದಿತ್ತು ಸೈರಾ ಲುಕ್
ನಿನ್ನೆ ಸುದೀಪ್ ಅವರ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಲುಕ್ ಬಿಡುಗಡೆಯಾಗಿತ್ತು. ಈ ಫೋಟೋದಲ್ಲಿ ನಟ ಸುದೀಪ್ ಹಾಗೂ ತಮಿಳು ನಟ ವಿಜಯ್ ಸೇತುಪತಿ ಇದ್ದು, ಅದರಲ್ಲಿಯೂ ಸುದೀಪ್ ವೇಷ ನಿಜಕ್ಕೂ ಸಿನಿಮಾದ ಮೇಲೆ, ಅವರ ಪಾತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟುವಂತೆ ಮಾಡಿದೆ.


Click it and Unblock the Notifications











