For Quick Alerts
  ALLOW NOTIFICATIONS  
  For Daily Alerts

  ದಕ್ಷ IPS ಅಧಿಕಾರಿ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ: ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  |
  Annamalai playing Important role in arab film | Filmibeat Kannada

  ಕರ್ನಾಟಕದ ದಕ್ಷ, ಪ್ರಾಮಾಣಿಕ, ಖಡಕ್ ಐಎಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅಣ್ಣಾಮಲೈ ರಾಜಿನಾಮೆ ನೀಡುತ್ತಿದ್ದಂತೆ ಮುಂದಿನ ನಡೆ ಏನಾಗಿರಬಹುದು ಎನ್ನುವ ಕುತೂಹಲ ಜನತೆಯಲ್ಲಿತ್ತು. ಅಣ್ಣಾಮಲೈ ಪಕ್ಕಾ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

  ಪೊಲೀಸ್ ಅಧಿಕಾರ ತೊರೆದ ಕರ್ನಾಟಕದ ಸಿಂಗಂ ಅಣ್ಣಾಮಲೈ ಸದ್ಯ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನರಿಗೆ ಸಹಾಯ ಮಾಡಬೇಕು ಎನ್ನುವುದು ಅಣ್ಣಾಮಲೈ ಕನಸು. ಸದ್ಯ ಸಮಾಜಿಕ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಅಣ್ಣಾಮಲೈ ಇದರ ಜೊತೆಗೆ ಸಿನಿಮಾರಂಗಕ್ಕು ಎಂಟ್ರಿಕೊಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?

  ಕೋಚ್ ಪತ್ರದಲ್ಲಿ ದಕ್ಷ ಅಧಿಕಾರಿ

  ಕೋಚ್ ಪತ್ರದಲ್ಲಿ ದಕ್ಷ ಅಧಿಕಾರಿ

  'ಅರಬ್ಬಿ' ಎನ್ನುವ ಚಿತ್ರದಲ್ಲಿ ಅಣ್ಣಾಮಲೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 'ಅರಬ್ಬಿ' ಪ್ಯಾರಾ ಈಜುಪಟು ಕೆ ಎಸ್ ವಿಶ್ವಸ್ ಜೀವನಾಧಾರಿತ ಸಿನಿಮಾ. ಚಿತ್ರದಲ್ಲಿ ವಿಶ್ವಾಸ್ ಪಾತ್ರದಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಾಸ್ ಕೋಚರ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ವಿದ್ಯುತ್ ಸ್ಪರ್ಶಕ್ಕೆ ಕೈಗಳನ್ನು ಕಳೆದುಕೊಂಡಿರುವ ವಿಶ್ವಾಸ್

  ವಿದ್ಯುತ್ ಸ್ಪರ್ಶಕ್ಕೆ ಕೈಗಳನ್ನು ಕಳೆದುಕೊಂಡಿರುವ ವಿಶ್ವಾಸ್

  ಪ್ಯಾರಾ ಸ್ವಿಮ್ಮಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿಭೆ. ಹತ್ತನೆ ವಯಸ್ಸಿನಲ್ಲಿ ಮನೆಯಲ್ಲಿ ಹೈಟೆನ್ಷನ್ ವೈರ್ ಮೇಲೆ ಬಿದ್ದು ಎರಡು ತಿಂಗಳು ಕೋಮದಲ್ಲಿ ಇದ್ದರು. ವಿದ್ಯುತ್ ಸ್ಪರ್ಶಕ್ಕೆ ತನ್ನ ಎರಡು ಕೈಗಳನ್ನು ಕಳೆದುಕೊಂಡರು. ವಿಶ್ವಾಸ್ ಕಾಪಾಡಲು ಮುಂದಾದ ತಂದೆ ವಿದ್ಯುತ್ ಶಾಕ್ ನಿಂದ ನಿಧನಹೊಂದಿದರು. ಎರಡು ಕೈ ಕಳೆದುಕೊಂಡು ವಿಶ್ವಾಸ್ ಚಲ ಬಿಡದೆ ಏನಾದರು ಮಾಡಬೇಕು ಎಂದು ಮುನ್ನುಗ್ಗುತ್ತಿರುವಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ.

  ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್ಒಂದೇ ವರ್ಷದಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸುದೀಪ್

  ಒಂದು ರೂಪಾಯಿ ಸಂಭಾವನೆ

  ಒಂದು ರೂಪಾಯಿ ಸಂಭಾವನೆ

  ಪವರ್ ಫುಲ್ ಅಧಿಕಾರವನ್ನು ತೊರೆದು ಸಾಮಾಜಿಕ ಕಾರ್ಯ ಮಾಡುತ್ತಿರುವ ಅಣ್ಣಾಮಲೈ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದರೆ ಅವರ ಸಂಭಾವನೆ ಎಷ್ಟಿರ ಬಹುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇರುತ್ತೆ. ಆದರೆ ಅಣ್ಣಾಮಲೈ ಪಡೆದ ಸಂಭಾವನೆ ಕೇಳಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಅರಬ್ಬಿ ಚಿತ್ರಕ್ಕಾಗಿ ಅಣ್ಣಾಮಲೈ ಕೇವಲ '1' ರೂಪಾಯಿ ಪಡೆದಿದ್ದಾರಂತೆ.

  ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆ

  ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

  ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

  ಕೆನಡಾ ಮತ್ತು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಚಿನ್ನ ಹಾಗೂ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ. ಹೆಮ್ಮೆಯ ಭಾರತೀಯ ಕುವರ ವಿಶ್ವಾಸ್ ಜೀವನಾಧಾರಿತ ಚಿತ್ರದಲ್ಲಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿರುವುದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಯಾಗಿ ನೋಡಿದ್ದ ಜನತೆಗೆ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

  Read more about: movie ಸಿನಿಮಾ
  English summary
  Efficient police officer annamalai entered to Film Industry. He is playing Important role in arab film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X