'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ಎದುರು ಇಂಗ್ಲಿಷ್ ನಟಿ!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. 'ಪುಷ್ಪ' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ 2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾದ ಕೆಲಸಗಳು ಭರದಿಂದ ಸಾಗಿದ್ದು, ಇದೇ ವರ್ಷ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಚಿತ್ರದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಸುದ್ದಿ ಬಂದಿತ್ತು. ಇದೀಗ ಚಿತ್ರದ ಮತ್ತೊಂದು ಪಾತ್ರದ ಬಗ್ಗೆ ಗುಸುಗುಸು ಹಬ್ಬಿದೆ.

ಹೌದು, ಈ ಚಿತ್ರಕ್ಕೆ ಮತ್ತೊಂದು ಹೊಸ ಪಾತ್ರ ಸೇರ್ಪಡೆಯಾಗಲಿದೆ. ಅದು ಕೂಡ ನಾಯಕಿ ರಶ್ಮಿಕಾ ಮಂದಣ್ಣ ವಿರುದ್ಧವಾಗಿ. ಅಂದರೆ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯ ಎಂಟ್ರಿ ಆಗುತ್ತದೆಯಂತೆ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ...

ವಿದೇಶದಲ್ಲೇ 'ಪುಷ್ಪ' ರಾಜ್ ವ್ಯವಹಾರ!

ವಿದೇಶದಲ್ಲೇ 'ಪುಷ್ಪ' ರಾಜ್ ವ್ಯವಹಾರ!

'ಪುಷ್ಪ 2' ಸಿನಿಮಾದ ಕಥೆ ಹೆಚ್ಚಾಗಿ ವಿದೇಶಗಳಲ್ಲಿ ನಡೆಯಲಿದೆ. ಯಾಕೆಂದರೆ ಚಿತ್ರದ ನಾಯಕ ಪುಷ್ಪ ರಾಜ್ ರಕ್ತಚಂದನ ದಂಧೆಯ ವ್ಯಾಪಾರವನ್ನು ವಿದೇಶಗಳಿಗೂ ಹಬ್ಬಿಸಿ ಬೆಳೆಯುತ್ತಾ ಹೋಗುತ್ತಾನೆ. ಹಾಗಾಗಿ ಪುಷ್ಪ ಭಾಗ-1 ಭಾರತ ಮತ್ತು ಭಾರತದ ಕಾಡು, ಮೇಡುಗಳಲ್ಲಿ ಚಿತ್ರೀಕರಿಸಲಾಗಿತ್ತು. ಆದರೀಗ ಪುಷ್ಪ 2 ಸಿನಿಮಾ ದೇಶ-ವಿದೇಶಗಳ ನಡುವೆ ನಡೆಯುವ ವ್ಯವಹಾರಗಳ ಕಥೆಯನ್ನು ಹೊಂದಿದೆ.

'ಪುಷ್ಪ 2' ಚಿತ್ರದಲ್ಲಿ ಭಾವನೆಗಳ ಆಗರ!

'ಪುಷ್ಪ 2' ಚಿತ್ರದಲ್ಲಿ ಭಾವನೆಗಳ ಆಗರ!

'ಪುಷ್ಪ 2' ಸಿನಿಮಾ ಹೆಚ್ಚಾಗಿ ಎಮೋಷನ್‌ಗಳ ಮೇಲೆಯೇ ಆಧಾರಿಸಲಿದೆಯಂತೆ. ಭಾಗ ಒಂದರಲ್ಲಿ ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿತ್ತು. ಎಲ್ಲಾ ಪಾತ್ರಗಳ ಗುಣಗಳನ್ನು ಬಿಡಲಾಗಿತ್ತು. ಮುಂದುವರೆದ ಭಾಗದ ಈ ಚಿತ್ರದಲ್ಲಿ ಹೆಚ್ಚಿನ ಹೊಡೆದಾಟ-ಬಡಿದಾಟ ಹೆಚ್ಚಾಗಿ ಇರುವುದಿಲ್ಲ. ಬದಲಾಗಿ ಭಾವನೆಗಳ ಕಾದಾಟ ಇರುತ್ತದೆಯಂತೆ.

ಶ್ರೀವಲ್ಲಿ ಎದುರು ಇಂಗ್ಲಿಷ್ ಬೆಡಗಿ!

ಶ್ರೀವಲ್ಲಿ ಎದುರು ಇಂಗ್ಲಿಷ್ ಬೆಡಗಿ!

'ಪುಷ್ಪ' ಭಾಗವೊಂದರ ಕ್ಲೈಮ್ಯಾಕ್ಸ್‌ಲ್ಲಿ ನಟಿ ಪುಷ್ಪ ರಾಜ್ ಶ್ರೀವಲ್ಲಿಯನ್ನು ಮದುವೆಯಾಗುತ್ತಾನೆ. ಮತ್ತೊಂದು ಕಡೆ, ಪೋಲಿಸ್ ಪಾತ್ರಧಾರಿ ಫಹಾದ್ ಫಾಸಿಲ್, ಪುಷ್ಪರಾಜ್ ಮಟ್ಟ ಹಾಕಲು ಹೊಂಚು ರೂಪಿಸುತ್ತಾನೆ. ಇಲ್ಲಿಂದ ಮುಂದುವರೆಯುವ 'ಪುಷ್ಪ 2' ಚಿತ್ರದಲ್ಲಿ ಹೆಚ್ಚಾಗಿ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆಯಂತೆ. ಹಾಗಾಗಿ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಎದುರು ಮತ್ತೊಬ್ಬ ಇಂಗ್ಲಿಷ್ ಹುಡುಗಿ ಇರಲಿದ್ದಾರಂತೆ.

ರಶ್ಮಿಕಾ ಮಂದಣ್ಣ ಪಾತ್ರ ಕಡಿತ!

ರಶ್ಮಿಕಾ ಮಂದಣ್ಣ ಪಾತ್ರ ಕಡಿತ!

ಪುಷ್ಪ ರಾಜ್ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರವನ್ನು ವಿಸ್ತರಿಸುತ್ತಾನೆ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತೊಬ್ಬ ನಟಿಯನ್ನು ಆರಿಸಲಾಗಿದೆ. ಹಾಗಾಗಿ ನಟ ಅಲ್ಲು ಅರ್ಜುನ್‌ ಜೊತೆಗೆ ಮತ್ತೊಬ್ಬ ನಟಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ನಟಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಎದುರುಗೆ ನಿಲ್ಲಲ್ಲು ಇಂಗ್ಲಿಷ್ ಬೆಡಗಿ ಬರ್ತಿದ್ದಾಳಂತೆ.

More from Filmibeat

English summary
English Actress Opposite Rashmika Mandanna In Pushpa 2 , Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X