ವಿಜಯ್ -ರಶ್ಮಿಕಾ ಮಂದಣ್ಣ ಫಾಲೋ ಮಾಡ್ತಿದ್ದಾರಾ ಕಾರ್ತಿಕ್ ಮಹೇಶ್-ನಮ್ರತಾ ಗೌಡ? ನೆಟ್ಟಿಗರ ಕೊಟ್ಟ ಸಾಕ್ಷಿ ಏನು?

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ, ಕಿರುತೆರೆ ಅಂದ್ಮೇಲೆ ಗುಸು ಗುಸು ಸುದ್ಧಿಗಳೇನು ಕಮ್ಮಿ ಹೇಳಿ. ಆ ಸಿನಿಮಾ ಮಾಡ್ತಾರೆ, ಈ ಸಿನಿಮಾ ಮಾಡ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ ಲವ್ ಸ್ಟೋರಿ, ಡೇಟಿಂಗ್ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತವೆ. ಈಗಲೂ ಸೆಲೆಬ್ರಿಟಿಗಳ ಒಂದೊಂದು ಹೆಜ್ಜೆಯನ್ನೂ ನೆಟ್ಟಿಗರು ಗಮನಿಸುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳು ಬಿಟ್ಟು ಕೊಡುವ ಒಂದೊಂದು ಚಿಕ್ಕ ಸುಳಿವಿಗಾಗಿ ಕಾಯುತ್ತಿರುತ್ತಾರೆ. ಹೀಗೆ ಸಿಕ್ಕಿ ಬಿದ್ದವರಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಂದು ಒಬ್ಬರು. ಇನ್ನೊಂದು ಜೋಡಿ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಡೇಟಿಂಗ್ ಮ್ಯಾಟರ್ ನೆಟ್ಟಿಗರು ಆಗಾಗ ಬಹಿರಂಗ ಪಡಿಸುತ್ತಲೇ ಇದ್ದಾರೆ. ಹುಟ್ಟುಹಬ್ಬ, ಇವೆಂಟ್, ಯಾವುದೇ ಸಮಾರಂಭವಿದ್ದಾಗ ಇಬ್ಬರು ಒಂದೇ ಲೋಕೇಶ್‌ನಲ್ಲಿ ಇರುತ್ತಾರೆ ಅನ್ನೋದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಇಷ್ಟಾದರೂ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಡೇಟಿಂಗ್ ಮ್ಯಾಟರ್ ಅನ್ನು ಒಪ್ಪಿಕೊಂಡಿಲ್ಲ ಅದೇ ಬೇರೆ ಮಾತು. ಆ ಹಾದಿಯನ್ನೇ ಮಾಜಿ ಬಿಗ್‌ಬಾಸ್‌ ಸ್ಪರ್ಧಿಗಳು ಕೂಡ ಫಾಲೋ ಮಾಡುತ್ತಿದ್ದಾರಾ? ಇಂತಹದ್ದೊಂದು ಪ್ರಶ್ನೆಯಂತೂ ಎದ್ದಿದೆ.

Ex Bigg Boss Kannada contestant Karthik Mahesh and Namrata Gowda dating here is the proof

ಕಾರ್ತಿಕ್ ಗೌಡ ಹಾಗೂ ನಮ್ರತಾ ಗೌಡ ಇಬ್ಬರೂ ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಲಾಗಿದ್ದರು. ಇಬ್ಬರೂ ಮೊದಲಿನಿಂದಲೂ ನಟನೆಯ ಕ್ಷೇತ್ರದಲ್ಲಿ ಇರುವುದರಿಂದ ಪರಿಚಯ ಹೊಸದೇನು ಆಗಿರಲಿಲ್ಲ. ಈಗ ನೆಟ್ಟಿಗರು ಇವರಿಬ್ಬರ ಮೇಲೆ ಕಣ್ಣಿಟ್ಟಿದ್ದಾರೆ. ಕಾರ್ತಿಕ್ ಹಾಗೂ ನಮ್ರತಾ ಗೌಡ ಇಬ್ಬರೂ ಕದ್ದು ಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ವಿಜಯ್-ರಶ್ಮಿಕಾರಂತೆ ಇವರಿಬ್ಬರ ಲವ್‌ ಮ್ಯಾಟರ್ ಅನ್ನು ಸಾಕ್ಷಿ ಸಮೇತ ನೀಡಿದ್ದಾರೆ. ಅಷ್ಟಕ್ಕೂ ಆ ಸಾಕ್ಷಿ ಏನು? ಇಬ್ಬರೂ ಡೇಟಿಂಗ್ ಮಾಡುತ್ತಿರೋದು ನಿಜವೇ? ತಿಳಿಯುವುದಕ್ಕೆ ಮುಂದೆ ಓದಿ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬರ್ತ್‌ಡೇಗೋ, ಕ್ರಿಸ್‌ಮಸ್‌ಗೋ, ಹೊಸ ವರ್ಷಕ್ಕೋ ಪ್ರವಾಸ ಮಾಡಿದರೆ, ಅಲ್ಲಿಂದೊಂದು ಫೋಟೊಗಳನ್ನು ಪೋಸ್ಟ್ ಮಾಡಿತ್ತಿದ್ದರು. ಇಬ್ಬರೂ ಒಟ್ಟಿಗೆ ನಿಂತು ಫೋಟೊ ತೆಗೆಸಿಕೊಳ್ಳದೇ ಇದ್ದರೂ, ಇಬ್ಬರೂ ಶೇರ್ ಮಾಡಿದ ಫೋಟೊಗಳ ಬ್ಯಾಕ್‌ಗ್ರೌಂಡ್ ದೊಡ್ಡದೊಂದು ಸುಳಿವು ನೀಡುತ್ತಿತ್ತು. ಇದನ್ನೇ ಇಟ್ಟುಕೊಂಡು ನೆಟ್ಟಿಗರು ಹಲವು ಬಾರಿ ಟ್ರೋಲ್ ಮಾಡಿದ್ದು ಇದೆ. ಹಲವು ಸನ್ನಿವೇಶಗಳಲ್ಲಿ ಇಬ್ಬರೂ ಒಂದೇ ಸ್ಥಳದಲ್ಲಿ ಇದ್ದರು ಅನ್ನೋದನ್ನು ಪ್ರೂವ್ ಮಾಡಿದ್ದರು. ಈಗ ಕಾರ್ತಿಕ್ ಹಾಗೂ ನಮ್ರತಾ ಸರದಿ.

ಹೌದು, ಬಿಗ್‌ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಕೂಡ ಹೀಗೆ ಸಿಕ್ಕಿ ಬಿದ್ದರೇ? ಇಂತಹದೊಂದು ಅನುಮಾನ ಮೂಡುವುದಕ್ಕೆ ಕಾರಣ ಈ ಫೋಟೊಗಳು. ಬಿಗ್‌ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಒಂದೇ ಲೋಕೇಶ್‌ನ ಫೋಟೊಗಳನ್ನು ಹಂಚಿಕೊಂಡಿದ್ದರು. ಆ ಫೋಟೊಗಳು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಅಂದ್ಮೇಲೆ ಈ ಜೋಡಿ ಕೂಡ ಡೇಟಿಂಗ್ ಮಾಡುತ್ತಿರಬಹುದು? ಅನ್ನೋ ಅನುಮಾನ ಮೂಡುವುದಕ್ಕೆ ಶುರುವಾಗಿದೆ.

ಬಿಗ್‌ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಇಬ್ಬರೂ ಪ್ರೀತಿಯಿಂದ ಮಾತಾಡಿದ್ದಕ್ಕಿಂತ ಕಿತ್ತಾಡಿದ್ದೇ ಹೆಚ್ಚು. ಆದರೆ, ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರಲ್ಲೂ ಹತ್ತಿರ ಆಗಿದ್ದರು. ಸ್ನೇಹಿತರಾಗಿ ಮುಂದುವರೆದಿದ್ದರು. ಇತ್ತೀಚೆಗಷ್ಟೇ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಇಬ್ಬರ ಮದುವೆ ಡ್ರೆಸ್‌ನಲ್ಲಿ ಇರುವ ಫೋಟೊಗಳು ವೈರಲ್ ಆಗಿದ್ದವು. ಒಂದು ಕ್ಷಣಕ್ಕೆ ಇವರಿಬ್ಬರ ಫೋಟೊಗಳು ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದೂ ಇದೆ.

ಆ ಫೋಟೊಗಳನ್ನು ನೋಡಿ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಮದುವೆ ಆಗೇ ಬಿಟ್ಟರು ಎಂಬ ಸುದ್ದಿ ಒಂದು ಓಡಾಡಿತ್ತು. ಆದರೆ, ಅದು ಜ್ಯುವೆಲರಿ ಅಂಗಡಿಯೊಂದರ ಜಾಹೀರಾತಿಗಾಗಿ ಮಾಡಿದ ಫೋಟೊಶೂಟ್ ಆಗಿತ್ತು. ಇನ್ನು ಬಿಗ್‌ ಬಾಸ್ ಮನೆಯಿಂದ ಆಚೆ ಬಂದು ನೋಡಿದರೆ, ಇಬ್ಬರೂ ಉತ್ತಮ ಸ್ನೇಹಿತರಾಗಿದ್ದಾರೆ. ಇನ್ನು ನೆಟ್ಟಿಗರ ಕೈಗೆ ಸಿಕ್ಕಿರೋ ಈ ಫೋಟೊಗಳು ಬೇರೆ ಕಥೆಯನ್ನೇ ಹೇಳುತ್ತಿವೆ. ಈಗ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೋ ಇಲ್ಲವೋ? ಅನ್ನೋದನ್ನು ಅವರೇ ಹೇಳಬೇಕಿದೆ. ಅಲ್ಲಿವರೆಗೂ ಸೋಶಿಯಲ್ ಮೀಡಿಯಾದಲ್ಲಿ ಇದೇ ಚರ್ಚೆ ನಡೆಯುತ್ತಲೇ ಇರುತ್ತೆ.

More from Filmibeat

English summary
Ex-Bigg Boss Kannada contestant Karthik Mahesh and Namrata Gowda dating here is the proof;
Read more about: bigg boss kannada namratha dating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X