»   » ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!

ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!

By: ಹರಾ
Subscribe to Filmibeat Kannada

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಈ ಬಾರಿ 'ಬಿಗ್ ಬಾಸ್-3' ಕಲರ್ಸ್ ಕನ್ನಡ ವಾಹಿನಿ ಪಾಲಾಗಿದೆ.

ಕಳೆದ ಎರಡು ಆವೃತ್ತಿಗಳಂತೆ 'ಬಿಗ್ ಬಾಸ್-3' ಶೋಗೆ ಕಿಚ್ಚ ಸುದೀಪ್ ಹೋಸ್ಟ್ ಆಗಿದ್ದಾರೆ. ಈಗಾಗಲೇ 'ಬಿಗ್ ಬಾಸ್-3' ಪ್ರೋಮೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಮಿಂಚಿದ್ದು ಆಗಿದೆ. ಈಗ ಎಲ್ಲರ ಕುತೂಹಲ ಇರುವುದು ಸ್ಪರ್ಧಿಗಳ ಮೇಲೆ. [ಶುರುವಾಗಲಿದೆ 'ಬಿಗ್ ಬಾಸ್' ಕನ್ನಡ ಸೀಸನ್ 3]

'ಬಿಗ್ ಬಾಸ್-3'ನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳು ಯಾರ್ಯಾರು ಅನ್ನುವ ಕುತೂಹಲಕ್ಕೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಬ್ರೇಕ್ ಹಾಕಿದೆ. ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ 'ಇವರೆಲ್ಲಾ' 'ಬಿಗ್ ಬಾಸ್-3' ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. 'ಅವರೆಲ್ಲಾ' ಯಾರ್ಯಾರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಹುಚ್ಚ ವೆಂಕಟ್

ಅನೇಕರು ಊಹಿಸಿದ ಹಾಗೆ, ಕಲರ್ಸ್ ಕನ್ನಡ ವಾಹಿನಿ 'ಯೂಟ್ಯೂಬ್ ಸ್ಟಾರ್' ಹುಚ್ಚ ವೆಂಕಟ್ ರಿಗೆ 'ಬಿಗ್ ಬಾಸ್-3'ನಲ್ಲಿ ಭಾಗವಹಿಸುವಂತೆ ಆಫರ್ ನೀಡಿದೆ. ಹುಚ್ಚ ವೆಂಕಟ್ ಮನಸ್ಸು ಮಾಡಿದರೆ, 'ಬಿಗ್ ಬಾಸ್-3' ಮನೆಯಲ್ಲಿ ನೀವು ವೆಂಕಟನ ಹುಚ್ಚಾಟವನ್ನ ನೋಡಬಹುದು. [ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?]

ದಿಗಂತ್

ಕನ್ನಡ ಬೆಳ್ಳಿತೆರೆ ಮೇಲೆ ಆಲ್ಮೋಸ್ಟ್ ಕಣ್ಮರೆಯಾಗಿರುವ ದೂದ್ ಪೇಡ ದಿಗಂತ್ 'ಬಿಗ್ ಬಾಸ್-3'ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಈಗಾಗಲೇ 'ಬಿಗ್ ಬಾಸ್-3' ಕಾರ್ಯಕ್ರಮ ನಿರ್ಮಾಪಕರು ದಿಗಂತ್ ಜೊತೆ ಮಾತುಕತೆ ನಡೆಸಿದ್ದಾರೆ. ಈಗೆಲ್ಲವೂ ದಿಗಂತ್ ನಿರ್ಧಾರದ ಮೇಲೆ ನಿಂತಿದೆ.

ಐಂದ್ರಿತಾ ರೇ

ದಿಗಂತ್ ಬರ್ತಾರೆ ಅಂದ್ರೆ, ಅವರ ಬೆಸ್ಟ್ ಫ್ರೆಂಡ್ ಐಂದ್ರಿತಾ ರೇ ಕೂಡ ಪಾಲ್ಗೊಂಡ್ರೆ ಹೇಗೆ..?? ಈ ಯೋಚನೆ 'ಬಿಗ್ ಬಾಸ್-3' ಟೀಂಗೆ ಬಂದಿರುವ ಕಾರಣ ಐಂದ್ರಿತಾ ರೇ ಜೊತೆ ಕೂಡ ಒಂದು ರೌಂಡ್ ಮಾತುಕತೆ ಮಾಡಿದ್ದಾರೆ. ಐಂದ್ರಿತಾ ರೇ ಕಾಲ್ ಶೀಟ್ ಫ್ರೀ ಇದ್ರೆ, 'ಬಿಗ್ ಬಾಸ್' ಮನೆ ಸೇರುವುದು ಪಕ್ಕಾ.

ಚಿಕ್ಕಣ್ಣ

ಸ್ಯಾಂಡಲ್ ವುಡ್ ನ ಸದ್ಯದ ಬಹುಬೇಡಿಕೆಯ ಕಾಮಿಡಿ ನಟ ಚಿಕ್ಕಣ ಕೂಡ 'ಬಿಗ್ ಬಾಸ್-3'ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲಿಗೆ, 'ಬಿಗ್ ಬಾಸ್' ಮನೆಯಲ್ಲಿ ನಗುವಿಗೆ ಮೋಸವಿರುವುದಿಲ್ಲ.

ಪ್ರಿಯಾಂಕಾ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರಿಗೂ 'ಬಿಗ್ ಬಾಸ್-3'ನಲ್ಲಿ ಸ್ಪರ್ಧಿಸುವಂತೆ ಆಫರ್ ಸಿಕ್ಕಿದೆ. ನಟಿ ಕಮ್ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಉಪೇಂದ್ರ ತಮ್ಮ ಮನೆಬಿಟ್ಟು 'ಬಿಗ್ ಬಾಸ್' ಮನೆ ಸೇರ್ತಾರಾ ಅನ್ನೋದು ಸದ್ಯದ ಸಸ್ಪೆನ್ಸ್.

ನಯನ ಕೃಷ್ಣ

'ಕೊಟ್ಲಲ್ಲಪ್ಪೋ ಕೈ' ಚಿತ್ರದ ನಾಯಕ ನಟಿ, ಹನಿ ಟ್ರ್ಯಾಪ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಕುಖ್ಯಾತಿ ಗಳಿಸಿದ ನಯನ ಕೃಷ್ಣ ಈ ಬಾರಿ 'ಬಿಗ್ ಬಾಸ್-3' ನಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ.

ಮೈತ್ರಿಯಾ ಗೌಡ

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ ಅಂತ್ಹೇಳಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ನಟಿ ಮೈತ್ರಿಯಾ ಗೌಡ ಕೂಡ ಈ ಬಾರಿ 'ಬಿಗ್ ಬಾಸ್' ಮನೆ ಸೇರುವುದು ಆಲ್ಮೋಸ್ಟ್ ಪಕ್ಕಾ. [ಮೈತ್ರಿಯಾ ಪ್ರಕಾರ ಬಿಗ್ ಬಾಸ್ 3 ಬ್ಲಡಿ ಫಿಕ್ಸಿಂಗ್ ಶೋ!]

ರ್ಯಾಪಿಡ್ ರಶ್ಮಿ

ರೇಡಿಯೋ ಜಾಕಿಯಾಗಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ರ್ಯಾಪಿಡ್ ರಶ್ಮಿ ಕೂಡ 'ಬಿಗ್ ಬಾಸ್' ಮನೆಗೆ ಬರಲಿದ್ದಾರೆ ಅನ್ನುತ್ತಿವೆ ಕಲರ್ಸ್ ಕನ್ನಡ ವಾಹಿನಿ ಮೂಲಗಳು.

ಸೂಪರ್ ಸ್ಟಾರ್ ಜೆ.ಕೆ.

ಕಿಚ್ಚ ಸುದೀಪ್ ಅತ್ಯಾಪ್ತ, ಕಿರುತೆರೆಯ ಸೂಪರ್ ಸ್ಟಾರ್ ಜೆ.ಕೆ ಕೂಡ 'ಬಿಗ್ ಬಾಸ್-3'ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತ.

ಚಂದನ್

'ಲಕ್ಷ್ಮೀ ಬಾರಮ್ಮ' ಸೀರಿಯಲ್ ಖ್ಯಾತಿಯ ಚಂದನ್ ಗೆ ಕಲರ್ಸ್ ಕನ್ನಡ ವಾಹಿನಿ ಮೂಲಕ 'ಬಿಗ್ ಬಾಸ್-3'ನಲ್ಲಿ ಸ್ಪರ್ಧಿಸುವಂತೆ ಅಧಿಕೃತ ಆಫರ್ ಸಿಕ್ಕಿದೆ. ಈಗ ಚಂದನ್ ಒಪ್ಪಿಕೊಳ್ಳೋದು ಬಾಕಿ ಅಷ್ಟೆ. ['ಬಿಗ್ ಬಾಸ್-3'ನಲ್ಲಿ ಹಾಟ್ ಅಂಡ್ ಹ್ಯಾಂಡ್ಸಮ್ ಚಂದನ್?]

ರಕ್ಷಿತ್ ಶೆಟ್ಟಿ

'ಸಿಂಪಲ್ಲಾಗೊಂದು ಲವ್ ಸ್ಟೋರಿ' ಖ್ಯಾತಿಯ ರಕ್ಷಿತ್ ಶೆಟ್ಟಿ ಕೂಡ ಈ ಬಾರಿ 'ಬಿಗ್ ಬಾಸ್-3'ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ನೀನಾಸಂ ಸತೀಶ್

ಸ್ಯಾಂಡಲ್ ವುಡ್ ನಲ್ಲಿ ಇದೀಗ ಬಹು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿರುವ ನೀನಾಸಂ ಸತೀಶ್ ಕೂಡ 'ಬಿಗ್ ಬಾಸ್-3' ನಲ್ಲಿ ಸ್ಪರ್ಧಿಸಲಿದ್ದಾರಂತೆ.

ರವಿಶಂಕರ್ ಗುರೂಜಿ

ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ರವಿಶಂಕರ್ ಗುರೂಜಿ 'ಬಿಗ್ ಬಾಸ್-3'ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶೀತಲ್ ಶೆಟ್ಟಿ

ಖಾಸಗಿ ಸುದ್ದಿ ವಾಹಿನಿ ನಿರೂಪಕಿ ಶೀತಲ್ ಶೆಟ್ಟಿ ಈ ಬಾರಿ 'ಬಿಗ್ ಬಾಸ್' ಮನೆ ಸೇರಲಿದ್ದಾರಂತೆ.

ಯಾವುದು ಇನ್ನೂ ಪಕ್ಕಾ ಆಗಿಲ್ಲ.!

ಈಗ ನಾವು ನಿಮ್ಮ ಮುಂದೆ ಇಟ್ಟಿರುವ ಲಿಸ್ಟ್ ನಲ್ಲಿರುವ ಎಲ್ಲರನ್ನೂ ಕಲರ್ಸ್ ಕನ್ನಡ ವಾಹಿನಿ ಸಂಪರ್ಕಿಸಿದೆ. ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿದೆ ಹೊರತು ಯಾವುದೂ ಫೈನಲ್ ಆಗಿಲ್ಲ. ಕೊನೆ ಕ್ಷಣದಲ್ಲಿ ಬದಲಾವಣೆ ಆಗಬಹುದು. ['ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?]

ರಿವೀಲ್ ಆಗುವುದು ಕಾರ್ಯಕ್ರಮ ಶುರುವಾದಾಗಲೇ..!

'ಬಿಗ್ ಬಾಸ್-3' ಕಾರ್ಯಕ್ರಮ ಶುರುವಾಗುವ ಮುನ್ನ ಸ್ಪರ್ಧಿಗಳ ಪಟ್ಟಿಯನ್ನ ವಾಹಿನಿ ಬಹಿರಂಗಗೊಳಿಸುವುದಿಲ್ಲ. ಸ್ಪರ್ಧಿಗಳು ಯಾರು ಅಂತ ತಿಳಿಯುವುದು 'ಬಿಗ್ ಬಾಸ್' ಮನೆಯ ಗೃಹಪ್ರವೇಶದ ದಿನವೇ. [ಏನು..'ಬಿಗ್ ಬಾಸ್'ನಿಂದ ಸುದೀಪ್ ಹೊರ ನಡೆದ್ರಾ?]

ನಿಮ್ಮ ನೆಚ್ಚಿನ ಸ್ಪರ್ಧಿ ಯಾರು?

ಪಕ್ಕಾ ಅಲ್ಲದಿದ್ದರೂ, ಕಲರ್ಸ್ ಕನ್ನಡ ವಾಹಿನಿ ಮೂಲಗಳಿಂದ ಬಂದಿರುವ ಸ್ಪರ್ಧಿಗಳ ಲಿಸ್ಟ್ ನ ನಾವು ನಿಮ್ಮ ಮುಂದೆ ಇಟ್ಟಿದ್ದೀವಿ. ಇವರಲ್ಲಿ ನಿಮ್ಮ ಅಚ್ಚುಮೆಚ್ಚಿನ ಸ್ಪರ್ಧಿ ಯಾರು ಅನ್ನೋದನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

English summary
'Bigg Boss' is back in Kannada. 'Bigg Boss-3' will be aired in 'Colours Kannada Channel' and Sudeep to host the Season. According to the sources, Huccha Venkat, Rakshit Shetty, Diganth, Aindrita Ray, Priyanka Upendra, Mythriya Gowda to participate as contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada