'ಜೇಮ್ಸ್' 4 ದಿನದಲ್ಲಿ 100 ಕೋಟಿ ಟಾರ್ಗೆಟ್!
'ಜೇಮ್ಸ್' ಸಿನಿಮಾ ಇದೇ ಮಾರ್ಚ್ 17ಕ್ಕೆ ರಿಲೀಸ್ ಆಗುತ್ತಿದೆ. ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಸಿನಿಮಾ. ಸಹಸ್ರಾರು ಮಂದಿ ಸಿನಿಮಾ ನೋಡಬೇಕು ಎನ್ನುವ ಇಂಗಿತವನ್ನು ಹೊಂದಿದ್ದಾರೆ. 'ಜೇಮ್ಸ್' ಚಿತ್ರದ ಬಗ್ಗೆ ಸಾಕಷ್ಟು ವಿಶೇಷತೆಗಳು ಇವೆ. 'ಜೇಮ್ಸ್' ರಿಲೀಸ್ ಆಗ್ತಿದೆ ಎನ್ನುವ ಕಾರಣಕ್ಕೆ, ಬೇರೆ ಯಾವುದೇ ಚಿತ್ರಗಳು ರಿಲೀಸ್ ಆಗ್ತಿಲ್ಲ. ಹಾಗಾಗಿ ಒಂದು ವಾರ 'ಜೇಮ್ಸ್' ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ.
ಬಹುಶಃ 'ಜೇಮ್ಸ್' ಚಿತ್ರದ ಸಂಭ್ರಮಕ್ಕೆ ಒಂದುವಾರ ಸಾಕಾಗುವುದಿಲ್ಲ ಎನಿಸುತ್ತೆ. ಅಷ್ಟರ ಮಟ್ಟಿಗೆ ಚಿತ್ರದ ಬಗ್ಗೆ ಕ್ರೇಜ್ ಹುಟ್ಟಿಕೊಂಡಿದೆ. ಈ ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ನೋಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ಯಾರೊಬ್ಬರು ಸಿದ್ಧರಿಲ್ಲ. ಇನ್ನು ಸಿನಿಮಾ ದಾಖಲೆ ಮಟ್ಟದ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.
'ಜೇಮ್ಸ್' ಚಿತ್ರಕ್ಕೆ ಸಿನಿಮಾ ಮಂದಿ ಮತ್ತು ಪ್ರೇಕ್ಷಕರು ತಾವಾಗಿಯೇ ದಾರಿ ಮಾಡಿ ಕೊಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಗೌರವಕ್ಕೆ ಸಿನಿಮಾ ಬೇರೆ ಯಾವ ಸಿನಿಮಾಗಳು ಕೂಡ ರಿಲೀಸ್ ಆಗುತ್ತಿಲ್ಲ. ಜೊತೆಗೆ ಕರ್ನಾಟಕದಲ್ಲಿ ಆ ಒಂದು ವಾರ 'ಜೇಮ್ಸ್' ಚಿತ್ರವನ್ನು ಬಿಟ್ಟು ಮತ್ಯಾವ ಸಿನಿಮಾ ಕೂಡ ರಿಲೀಸ್ ಆಗುತ್ತಿಲ್ಲ. ಅಪ್ಪಿ ತಪ್ಪಿ ಪರಭಾಷೆ ಸಿನಿಮಾಗಳು ರಿಲೀಸ್ ಆದರೆ, ಕರ್ನಾಟಕದಲ್ಲಿ ಆ ಚಿತ್ರಗಳಿಗೆ ಜಾಗ ಇರುವುದಿಲ್ಲ.

'ಜೇಮ್ಸ್' ಕೋಟಿ, ಕೋಟಿ ಲೆಕ್ಕ ಪಕ್ಕಾ!
ಸಿನಿಮಾಗಳು ರಿಲೀಸ್ ಆಗುವ ತನಕ ಒಂದು ಮಟ್ಟಿನ ನಿರೀಕ್ಷೆ ಇದ್ದರೆ. ರಿಲೀಸ್ ಬಳಿಕ ಚಿತ್ರದ ಗಳಿಕೆ ಎಷ್ಟು ಎನ್ನುವ ಕುತೂಹಲ ಮೂಡುತ್ತದೆ. ಆದರೆ 'ಜೇಮ್ಸ್' ಚಿತ್ರದ ವಿಚಾರ ಕೊಂಡ ಡಿಫ್ರೆಂಟ್. ಯಾಕೆಂದರೆ 'ಜೇಮ್ಸ್' ಸಿನಿಮಾದ ಜೊತೆಗೆ ಕಾಂಪೀಟ್ ಮಾಡಲು ಕರ್ನಾಟಕದಲ್ಲಿ ಬೇರೆ ಯಾವ ಸಿನಿಮಾ ಕೂಡ ಇಲ್ಲ. ಎಲ್ಲಾ ಚಿತ್ರ ಮಂದಿರಗಳಲ್ಲೂ ಕೂಡ 'ಜೇಮ್ಸ್' ಸಿನಿಮಾ ಪರದೆ ಮೇಲೆ ಮೂಡಿ ಬರುತ್ತೆ. ಅಲ್ಲದೇ ಒಂದು ವಾರ ಚಿತ್ರಕ್ಕೆ ಸಮಯ ಇದೆ. ಹಾಗಾಗಿ 'ಜೇಮ್ಸ್' ಖಚಿತವಾಗಿ ಕೋಟಿ, ಕೋಟಿ ಕಲೆ ಹಾಕಲಿದೆ ಎನ್ನಲಾಗುತ್ತಿದೆ.

4 ದಿನದಲ್ಲಿ 'ಜೇಮ್ಸ್' 100 ಕೋಟಿ ಪಕ್ಕಾ!
ಹೌದು 'ಜೇಮ್ಸ್' ಸಿನಿಮಾವನ್ನು ನೋಡಲು ಪುಟ್ಟ ಮಕ್ಕಳಿಂದ ಹಿಡಿದು, ವಯೋವರದ್ಧರವರೆಗೂ ಪ್ರತಿಯೊಬ್ಬರೂ ಕಾಯುತ್ತಲಿದ್ದಾರೆ. ಹಾಗಾಗಿ ಈ ಚಿತ್ರ ಮೊದಲ ವಾರಾಂತ್ಯದೊಳಗೆ 100 ಕೋಟಿ ಕಲೆ ಹಾಕುವುದು ಪಕ್ಕಾ ಎನ್ನಲಾಗಿದೆ. ಮೊದಲ ನಾಲ್ಕು ದಿನದೊಳಗೆ 'ಜೇಮ್ಸ್' 100 ಕೋಟಿಯ ಗಡಿ ದಾಡಿ ಬಿಡುತ್ತೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 17 ಗುರುರವಾರ ಸಿನಿಮಾ ರಿಲೀಸ್ ಆದರೆ, ಶುಕ್ರವಾರ, ಶನಿವಾರ, ಭಾನುವಾರ ನಾಲ್ಕು ದಿನದಲ್ಲಿ ಸಿನಿಮಾ 100 ಕೋಟಿಯ ಗಡಿ ಮುಟ್ಟಲಿದೆ ಎನ್ನಲಾಗುತ್ತಿದೆ.

ವಿದೇಶಗಳಲ್ಲೂ 'ಜೇಮ್ಸ್' ಅಬ್ಬರ ಬಲು ಜೋರು!
'ಜೇಮ್ಸ್' ಚಿತ್ರ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಬ್ಬರಿಸಲಿದೆ. ಈಗಾಗಲೇ 'ಜೇಮ್ಸ್' ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ಕೂಡ ರಿವೀಲ್ ಆಗಿದೆ. ಕೆನಡ, ನೆದರ್‌ಲ್ಯಾಂಡ್‌ನಲ್ಲಿ ಯಾವ ಚಿತ್ರಮಂದಿರಗಳಲ್ಲಿ 'ಜೇಮ್ಸ್' ತೆರೆಕಾಣಲಿದೆ ಎನ್ನುವ ಪಟ್ಟಿ ಬಿಡುಗಡೆ ಆಗಿದೆ. ಅಪ್ಪುಗೆ ವಿಶ್ವಾದ್ಯಂತ ಅಭಿಮಾನಿಗಳು ಇರುವ ಕಾರಣ, ವಿದೇಶಗಳಲ್ಲೂ ಕೂಡ 'ಜೇಮ್ಸ್' ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆಯಂತೆ.

ನಾಲ್ಕು ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಅಬ್ಬರ!
ಇತ್ತೀಚಿನ ವರದಿ ಪ್ರಕಾರ ಜೇಮ್ಸ್ ಸಿನಿಮಾ 4 ಸಾವಿರ ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆಯಂತೆ. ಚಿತ್ರಕ್ಕೆ ಸಿಕ್ಕಿರುವ ಚಿತ್ರ ಮಂದಿರಗಳ ಸಂಖ್ಯೆ, ದಿನಗಳ ಲೆಕ್ಕಚಾರ ಸೇರಿದರೆ, ಜೇಮ್ಸ್ ಅತಿ ವೇಗವಾಗಿ 100 ಕೋಟಿ ಗಡಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲ. ಮಾರ್ಚ್ 17ರಂದು ಚಿತ್ರ ರಿಲೀಸ್ ಆದ ಬಳಿಕ ಬಾಕ್ಸಾಫಿಸ್‌ನಲ್ಲಿ ಜೇಮ್ಸ್ ಸದ್ದು ಹೇಗಿರಲಿದೆ ಎನ್ನುವುದು ಗೊತ್ತಾಗುತ್ತದೆ.


Click it and Unblock the Notifications











