ಚಿತ್ರರಂಗದಲ್ಲಿ ಗೆದ್ದ ಮೇಲೆ ಬದಲಾದ ಮಾಜಿ ಮುಖ್ಯಮಂತ್ರಿಯ ಮೊಮ್ಮಗಳು ; ಖ್ಯಾತ ನಟನ ತಮ್ಮನಿಗೆ ಕೈಕೊಟ್ಟ ನಟಿ?

ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.

ಇನ್ನೂ .. ಬಣ್ಣದ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಯಾಕೆಂದರೆ.. ಸಂಬಂಧಗಳನ್ನು ಇಲ್ಲಿ ಉಳಿಸಿಕೊಳ್ಳುವುದು ಸುಲಭ ಅಲ್ಲ. ನೋಡುಗರ ಕಣ್ಣಿಗೆ ಎಲ್ಲವೂ ಪರ್ಫೆಕ್ಟ್ ಎಂದು ಕಂಡರೂ ಕೂಡ ಒಳಗಡೆ ಕಥೆ ಬೇರೆಯದ್ದೇ ಇರುತ್ತೆ.

fame-over-love-alpha-star-sharvari-wagh-and-sunny-kaushal-reportedly-split

ಬಿಡುವಿರದ ಚಿತ್ರೀಕರಣ .. ಮಾಧ್ಯಮಗಳ ಹದ್ದಿನ ಕಣ್ಣು .. ಕೀ ಬೋರ್ಡ್ ವಾರಿಯರ್ ಗಳ ದಣಿವರಿಯದ ಶ್ರಮ ಇವರ ವೈಯಕ್ತಿಕ ಬದುಕಿನ ಮೇಲೆ ತುಂಬಾನೇ ಪ್ರಭಾವ ಬೀರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಸೋಲು- ಗೆಲುವು .. ಅಚಾನಕ್ ಆಗಿ ಸಿಗುವ ಹೆಸರು-ಕೀರ್ತಿ.. ಸಂಬಂಧದಲ್ಲಿನ ಬಿರುಕಿಗೆ ಕಾರಣವಾಗುತ್ತೆ.

ಇನ್ನು ಒಬ್ಬರ ಕೆರಿಯರ್ ರಾಕೆಟ್ ವೇಗದಲ್ಲಿ ನುಗ್ಗುತ್ತಿದ್ದರೆ ಮತ್ತೊಬ್ಬರ ವೃತ್ತಿ ಬದುಕು ಆಮೆ ಗತಿಯಲ್ಲಿ ಸಾಗುತ್ತಿದ್ದರೂ ಕೂಡ ಸಂಬಂಧ ಖತಂ ಆದಂತೆಯೇ. ಮಾತು ಕಥೆ ಕಡಿಮೆಯಾಗುತ್ತೆ. ಈಗೋ ಕ್ಲ್ಯಾಶ್ ಸಂಬಂಧವನ್ನೇ ಬಲಿ ಪಡೆಯುತ್ತೆ. ಇದಕ್ಕೆ ಶರ್ವರಿ ವಾಗ್ ಮತ್ತು ಸನ್ನಿ ಕೌಶಲ್ ಅವರ ಲವ್ & ಬ್ರೇಕಪ್ ಸ್ಟೋರಿ ಸದ್ಯದ ಉದಾಹರಣೆ ಎನ್ನುತ್ತಿದೆ ಮಾಯಾನಗರಿ ಮುಂಬೈ.

ಹೌದು. ಶರ್ವರಿ ವಾಗ್.. ''ಬಂಟಿ ಔರ್ ಬಬ್ಲಿ 2'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಆದರೆ ಇವರ ಬದುಕು ಬದಲಿಸಿದ್ದು 2024ರಲ್ಲಿ ಬಂದ ''ಮುಂಜ್ಯಾ''. ಆ ನಂತರ ಬಂದ ''ಮಹಾರಾಜಾ'' ಮತ್ತು ''ವೇದಾ'' ಬಾಕ್ಸಾಫೀಸ್‌ನಲ್ಲಿ ಫೇಲ್ ಆದರೂ ಕೂಡ ಇವರ ಅಭಿನಯ ಹಲವರ ಗಮನ ಸೆಳೆಯಿತು.

ಮೊನ್ನೆ ಮೊನ್ನೆ ಇವರ ''ಮೇ ವಾಪಸ್ ಆವೂಂಗಾ'' ಚಿತ್ರ ಬಿಡುಗಡೆಯಾಗಿದೆ. ಇಮ್ತಿಯಾಜ್ ಅಲಿ ನಿರ್ದೇಶನದ ಚಿತ್ರ ಇದು. ವಿಮ‍ರ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ಸದ್ದು ಅಷ್ಟಕಷ್ಟೇ. ಇನ್ನು ಹಿಂದಿ ಉದ್ಯಮದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ನಿರ್ಮಾಣದ ''ಆಲ್ಪಾ'' ಚಿತ್ರದಲ್ಲಿ ಓನ್ ಆಫ್ ದಿ ಮೇನ್ ಲೀಡ್ ಈ ಶಾರ್ವರಿ. ಇದು ಇವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

fame-over-love-alpha-star-sharvari-wagh-and-sunny-kaushal-reportedly-split

ಇಂಥಾ ಶರ್ವರಿ ವಾಗ್ ಮತ್ತು ಸನ್ನಿ ಕೌಶಲ್ ನಡುವೆ ಕುಚ್ ಕುಚ್ ಇದೆ ಎನ್ನುವ ಅನುಮಾನ ಕಳೆದ ಮೂರು-ನಾಲ್ಕು ವರ್ಷಗಳಿಂದ ಹಲವರಲ್ಲಿತ್ತು. ಈ ಸನ್ನಿ ಕೌಶಲ್ ಬೇರೆ ಯಾರು ಅಲ್ಲ. ಬದಲಿಗೆ ವಿಕ್ಕಿ ಕೌಶಲ್ ಅವರ ತಮ್ಮ. ''ಗೋಲ್ಡ್''.. ''ದಿ ಫಾರ್ಗಾಟನ್ ಆರ್ಮಿ''.. ''ಭಂಗ್ರಾ ಪಾ ಲೇ''.. ''ಶಿದ್ದತ್''.. ''ಮಿಲಿ''.. '' ಚೋರ್ ನಿಕಲ್ ಕೆ ಭಾಗಾ''.. ''ಫಿರ್ ಆಯಿ ಹಸೀನ್ ದಿಲ್‌ರುಬಾ''..

ಹೀಗೆ ಶರ್ವರಿಗೆ ಹೋಲಿಸಿದರೆ ಹಲವಾರು ಸಿನಿಮಾಗಳನ್ನು ಸನ್ನಿ ಕೌಶಲ್ ಮಾಡಿದ್ದಾರೆ. ಆದರೆ ಶರ್ವರಿಗೆ ಸಿಕ್ಕ ಗೆಲುವು ಇವರಿಗೆ ಸಿಗಲಿಲ್ಲ. ಇವರ ವೃತ್ತಿ ಬದುಕು ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ. ಇಬ್ಬರ ವೃತ್ತಿ ಬದುಕಿನ ಈ ವೈರುಧ್ಯ ಫಲಿತಾಂಶಗಳಿಂದ ಸದ್ಯ ಇವರ ಸಂಬಂಧ ಹಳಸಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಅವಕಾಶ-ಅಹಂಕಾರ.. ಸೋಲು-ಹತಾಶೆಯಿಂದ 2025ರಲ್ಲಿ ಇವರ ಬ್ರೇಕಪ್ ಆಗಿದೆ ಎಂಬ ಪುಕಾರು ಹಬ್ಬಿದೆ. ಹಲವರಿಗೆ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅಭಿನಯದ ''ಅಭಿಮಾನ್'' ಚಿತ್ರದ ಕಥೆ ಕೂಡ ಸದ್ಯ ನೆನಪಾಗುತ್ತಿದೆ.

ಸದ್ಯ ತಮ್ಮ ಕುರಿತು ಕೇಳಿ ಬರುತ್ತಿರುವ ಈ ಸುದ್ದಿಗಳಿಗೆ ಶರ್ವರಿ ಆಗಲಿ ಸನ್ನಿ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ದಿನದಿಂದ ದಿನಕ್ಕೆ ಖ್ಯಾತಿಯ ಉತ್ತುಂಗಕ್ಕೇರುತ್ತಿರುವ ಶರ್ವರಿಯನ್ನು ಕಂಡು ಹಲವರು ಸನ್ನಿ ಕೌಶಲ್ ಕೂಡ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವಂತಾಗಲಿ ಎಂದು ಆಶಿಸುತ್ತಿದ್ಧಾರೆ. ಇವರ ಬ್ರೇಕಪ್ ಸುದ್ದಿಯ ಕುರಿತು ಚರ್ಚೆ ಮಾಡುತ್ತಿದ್ದಾರೆ. ಅಂದ್ಹಾಗೇ ಈ ಶರ್ವರಿ ವಾಗ್ ಬೇರೆ ಯಾರು ಅಲ್ಲ ಬದಲಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಅವರ ಮೊಮ್ಮಗಳು ಎನ್ನುವುದು ವಿಶೇಷ.

English summary
Did rising fame cause the Sharvari Wagh and Sunny Kaushal breakup? Explore the reasons why the Shiddat actor and the YRF Alpha actress reportedly parted ways.
Read more about: breakup rumours bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X