For Quick Alerts
  ALLOW NOTIFICATIONS  
  For Daily Alerts

  ರೀಲ್ಸ್ ಬೆಡಗಿಗೆ ದುನಿಯಾ ವಿಜಯ್ ಭೀಮ ಚಿತ್ರದಲ್ಲಿ ಸಿಕ್ತು ಚಾನ್ಸ್; ಕೆಟ್ಟ ಆಯ್ಕೆ ಎಂದ ಫ್ಯಾನ್ಸ್!

  |

  ಸಲಗ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ನಟ ವಿಜಯ್ ಕುಮಾರ್ ತಮ್ಮ ಮೊದಲ ನಿರ್ದೇಶನದಲ್ಲಿಯೇ ಯಶಸ್ಸು ಸಾಧಿಸಿದ್ದರು. ಬೆಂಗಳೂರು ರೌಡಿಸಂನ ಚಿತ್ರಕತೆಯನ್ನು ಹೊಂದಿದ್ದ ಸಲಗ ಭರ್ಜರಿ ಯಶಸ್ಸನ್ನು ಸಾಧಿಸಿತ್ತು. ಹೀಗೆ ನಿರ್ದೇಶಕನ ಕ್ಯಾಪ್ ತೊಟ್ಟು ಗೆದ್ದ ವಿಜಯ್ ಕುಮಾರ್ ಇದೀಗ ತಮ್ಮ ಮುಂದಿನ ಚಿತ್ರವನ್ನೂ ಸಹ ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಭೀಮ ಎಂದು ಶೀರ್ಷಿಕೆಯನ್ನು ಇಡಲಾಗಿದ್ದು, ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಬಂಡವಾಳ ಹೂಡಿದ್ದಾರೆ. ಸಲಗ ಚಿತ್ರದಲ್ಲಿ ಬೊಂಬಾಟ್ ಸಂಗೀತ ನೀಡಿದ್ದ ಚರಣ್ ರಾಜ್ ಈ ಸಿನಿಮಾಗೂ ಸಹ ಸಂಗೀತ ನೀಡಿದ್ದಾರೆ.

  ಇನ್ನು ಈ ಚಿತ್ರದಲ್ಲಿಯೂ ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಚಿತ್ರದ ಶೀರ್ಷಿಕೆ ಅನಾವರಣಗೊಂಡಾಗ ಚಿತ್ರದಲ್ಲಿ ಯಾರು ಯಾರು ಅಭಿನಯಿಸಲಿದ್ದಾರೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಒಂದೊಂದಾಗಿ ಚಿತ್ರದ ಪಾತ್ರಗಳನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಘೋಷಿಸುತ್ತಿರುವ ಚಿತ್ರತಂಡ ಇತ್ತೀಚಿಗಷ್ಟೆ ಗಿರಿಜಾ ಎಂಬ ಕಲಾವಿದೆಯನ್ನು ಪೊಲೀಸ್ ಪಾತ್ರಕ್ಕೆ ಆಯ್ಕೆ ಮಾಡಿ ಪರಿಚಯಿಸಿತ್ತು ಹಾಗೂ ನಂತರ ಸಲಗ ಚಿತ್ರದಲ್ಲಿ ಸಾವಿತ್ರಿ ಪಾತ್ರ ಮಾಡಿದ್ದ ಸುಧಿ ಅವರನ್ನು ಈ ಚಿತ್ರಕ್ಕೂ ಆಯ್ಕೆ ಮಾಡಿ ಶುಠಿ ಅಲಿಯಾಸ್ ಜಿಂಜರ್ ಎಂದು ಪರಿಚಯ ಮಾಡಲಾಯಿತು.

  comment

  ಇದೀಗ ಮತ್ತೋರ್ವ ಕಲಾವಿದೆಯನ್ನು ಭೀಮ ತಂಡ ಪರಿಚಯಿಸಿದ್ದು, ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಆಗಿದ್ದ ಆಶ್ ಮೆಲೊ ಸ್ಕೈಲರ್ ತಾರಾಗಣಕ್ಕೆ ಸೇರ್ಪಡೆಪಡಿಸಿಕೊಂಡಿದೆ. ಈಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿದ್ದು, ಹೆಚ್ಚಾಗಿ ರೀಲ್ಸ್ ಮಾಡಿ ಅನುಯಾಯಿಗಳನ್ನು ಪಡೆದು ಫೇಮ್ ಗಿಟ್ಟಿಸಿಕೊಂಡಿದ್ದಾಳೆ. ಸದ್ಯ ಈಕೆಯನ್ನು ಆಯ್ಕೆ ಮಾಡಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಆಯ್ಕೆ ಸರಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸಲಗ ಚಿತ್ರದಲ್ಲಿ ಇದೇ ರೀತಿ ಹಲವು ಹೊಸ ಕಲಾವಿದರಿಗೆ ಅವಕಾಶ ನೀಡಿ ಭೇಷ್ ಎನಿಸಿಕೊಂಡಿದ್ದ ವಿಜಯ್ ಅವರ ಮೇಲೆ ಈ ಬಾರಿಯೂ ಸಹ ದೊಡ್ಡ ನಿರೀಕ್ಷೆ ಮತ್ತು ನಂಬಿಕೆಯಿದೆ.

  Read more about: duniya vijay filmibeat original
  English summary
  Fans said bad choice as Instagram influencer Ash Melo has been roped in for Duniya Vijay's Bheema
  Saturday, September 10, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X