ವಿದೇಶದಿಂದ ಮರಳಿದ ವಿಜಯ್ & ರಶ್ಮಿಕಾ; ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ರು ಎನ್ನುತ್ತಿದೆ ಈ ಒಂದು ಫೋಟೊ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಪ್ರೇಮ ಇದೆ ಎಂಬುದು ಈ ಹಿಂದಿನಿಂದಲೂ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟ ವಿಷಯವಾಗಿದೆ. ಈ ಕುರಿತಾಗಿ ಇಬ್ಬರಿಗೂ ಸಹ ಹಲವು ಸಂದರ್ಶನಗಳಲ್ಲಿ ಸಾಕಷ್ಟು ಬಾರಿ ಪ್ರಶ್ನೆಗಳು ಎದುರಾಗಿದ್ದು, ಇಬ್ಬರೂ ಸಹ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಉತ್ತರಿಸುವ ಮೂಲಕ ಜಾರಿಕೊಂಡಿದ್ದರು.

ಆದರೆ ನೆಟ್ಟಿಗರು ಮಾತ್ರ ಈ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿರುವುದು ಖಚಿತ ಎಂಬ ಅಭಿಪ್ರಾಯವನ್ನು ಸಾಕಷ್ಟು ಬಾರಿ ವ್ಯಕ್ತಪಡಿಸಿದ್ದಾರೆ. ಗೀತಾ ಗೋವಿಂದಂ ಚಿತ್ರದ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಲಿಪ್ ಲಾಕ್ ದೃಶ್ಯಗಳಲ್ಲಿ ಬೋಲ್ಡ್ ಆಗಿ ಅಭಿನಯಿಸುವ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅಂದು ಶುರುವಾದ ಇಬ್ಬರ ನಡುವಿನ ಪ್ರೇಮದ ಗಾಸಿಪ್ ಇಂದಿಗೂ ಸಹ ಪದೇ ಪದೇ ಕೇಳಿ ಬರುತ್ತಲೇ ಇದೆ. ಇದೀಗ ಈ ಇಬ್ಬರೂ ಸಹ ಒಟ್ಟಿಗೆ ಗೌಪ್ಯವಾಗಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಬ್ಬರೂ ಸಹ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡಿದ್ದರೂ ಹೋಗಿದ್ದು ಮಾತ್ರ ಮಾಲ್ಡೀವ್ಸ್‌ಗೆ ಎನ್ನುತ್ತಿದ್ದಾರೆ ನೆಟ್ಟಿಗರು. ಅದರಲ್ಲಿಯೂ ಕನ್ನಡಕವೊಂದನ್ನು ಆಧಾರವನ್ನಾಗಿಟ್ಟುಕೊಂಡು ನೆಟ್ಟಿಗರು ಈ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.

 ಅಕ್ಟೋಬರ್ 7ರಂದು ವಿಮಾನ ನಿಲ್ದಾಣದಲ್ಲಿ ರಶ್ಮಿಕಾ, ವಿಜಯ್; ಮೂಡಿತ್ತು ಅನುಮಾನ

ಅಕ್ಟೋಬರ್ 7ರಂದು ವಿಮಾನ ನಿಲ್ದಾಣದಲ್ಲಿ ರಶ್ಮಿಕಾ, ವಿಜಯ್; ಮೂಡಿತ್ತು ಅನುಮಾನ

ಅಕ್ಟೋಬರ್ 7ರಂದು ತನ್ನ ಅಭಿನಯದ ಮೊದಲ ಹಿಂದಿ ಚಿತ್ರ ಗುಡ್ ಬೈ ಬಿಡುಗಡೆಗೊಂಡಿದ್ದರೂ ಸಹ ರಶ್ಮಿಕಾ ಮಂದಣ್ಣ ಮಾತ್ರ ಮಾಲ್ಡೀವ್ಸ್ ಪ್ರವಾಸವನ್ನು ಕೈಗೊಂಡಿದ್ದರು. ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ವಿಜಯ್ ದೇವರಕೊಂಡ ಕೂಡ ಅದೇ ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಸಹ ಒಟ್ಟಿಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂಬ ಅನುಮಾನ ಶುರುವಾಗಿತ್ತು.

 ಅನುಮಾನಕ್ಕೆ ಪುಷ್ಟಿ ಕೊಡ್ತು ಕನ್ನಡಕ!

ಅನುಮಾನಕ್ಕೆ ಪುಷ್ಟಿ ಕೊಡ್ತು ಕನ್ನಡಕ!

ಇನ್ನು ರಶ್ಮಿಕಾ ಮಂದಣ್ಣ ವಿದೇಶಿ ಪ್ರವಾಸ ಕೈಗೊಂಡ ಬೆನ್ನಲ್ಲೇ ಮಾಲ್ಡೀವ್ಸ್ ತಲುಪಿ ಅಲ್ಲಿನ ಚಿತ್ರಗಳನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಚಿತ್ರವನ್ನು ನೋಡಿದ ನೆಟ್ಟಿಗರು ತಮ್ಮ ಅನುಮಾನದಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಇದಕ್ಕೆ ಕಾರಣ ರಶ್ಮಿಕಾ ಹಂಚಿಕೊಂಡ ಚಿತ್ರದಲ್ಲಿ ಧರಿಸಿದ್ದ ಆ ಒಂದು ಕನ್ನಡಕ. ಏಕೆಂದರೆ ರಶ್ಮಿಕಾ ಧರಿಸಿದ್ದ ಕನ್ನಡಕಕ್ಕೂ ವಿಜಯ್ ದೇವರಕೊಂಡ ವಿಮಾನನಿಲ್ದಾಣದಲ್ಲಿ ಧರಿಸಿದ್ದ ಕನ್ನಡಕಕ್ಕೂ ಸಾಕಷ್ಟು ಸಾಮ್ಯತೆಗಳಿದ್ದವು. ಹೀಗಾಗಿ ಇಬ್ಬರೂ ಒಟ್ಟಿಗೆ ಪ್ರಯಾಣ ಬೆಳೆಸಿರುವುದು ಖಚಿತ ಎಂದು ನೆಟ್ಟಿಗರು ಮಾತನಾಡಿಕೊಳ್ಳಲಾರಂಭಿಸಿದರು.

 ಒಂದೇ ದಿನ ವಾಪಸ್!

ಒಂದೇ ದಿನ ವಾಪಸ್!

ಇನ್ನು ರಶ್ಮಿಕಾ ಮಂದಣ್ಣ ನಿನ್ನೆ ( ಅಕ್ಟೋಬರ್ 11 ) ಮಾಲ್ಡೀವ್ಸ್‌ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಹಾಗೂ ಇದಾದ ಕೆಲವೇ ಗಂಟೆಗಳಲ್ಲಿ ವಿಜಯ್ ದೇವರಕೊಂಡ ಸಹ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಈ ಸಮಯದಲ್ಲಿಯೂ ಕೂಡ ವಿಜಯ್ ದೇವರಕೊಂಡ ಧರಿಸಿದ್ದ ಕನ್ನಡಕ ಅದೇ ಆಗಿದೆ. ಇದನ್ನೆಲ್ಲಾ ಗಮನಿಸಿರುವ ನೆಟ್ಟಿಗರು ಇಬ್ಬರು ಗೌಪ್ಯವಾಗಿ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ ಎಂಬ ಗಾಢ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Fans trolled Vijay Deverakonda and Rashmika Mandanna for Maldives trip as they wore same goggle . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X