Just In
- 31 min ago
ಮೆಚ್ಚಿನ ನಟನನ್ನು ಭೇಟಿಯಾಗಲು ಸೇತುವೆಯಿಂದ ನದಿಗೆ ಹಾರಿದ ಅಭಿಮಾನಿ
- 39 min ago
ರಾಕ್ ಲೈನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ದರ್ಶನ್ ಪಾತ್ರ ರಿವೀಲ್
- 43 min ago
ಅಲ್ಲು ಅರ್ಜುನ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಪತ್ನಿಗೆ ಸ್ಟೈಲಿಶ್ ಸ್ಟಾರ್ ಕಡೆಯಿಂದ ಸಿಹಿಯಾದ ಸಂದೇಶ
- 1 hr ago
ಕೆಜಿಎಫ್ ಚಾಪ್ಟರ್ 2 ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಇಬ್ಬರು ಸ್ಟಾರ್ ಅತಿಥಿಗಳು?
Don't Miss!
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Sports
ಜಸ್ಪ್ರೀತ್ ಬೂಮ್ರಾ ಮದುವೆ ಗಾಳಿ ಸುದ್ದಿಗೆ ಪ್ರತಿಕ್ರಿಯಿದ ಅನುಪಮಾ ತಾಯಿ
- Automobiles
ಮುಂಬರುವ ಏಪ್ರಿಲ್ನಲ್ಲಿ ಅನಾವರಣಗೊಳ್ಳಲಿದೆ ಜೀಪ್ ಹೊಸ 7 ಸೀಟರ್ ಎಸ್ಯುವಿ
- News
ಈ ಆರು ಸಚಿವರಿಗ್ಯಾಕೆ ಒಳಗೊಳಗೆ ಢವಢವ?; ಕೆಪಿಸಿಸಿ ವಕ್ತಾರ
- Finance
Gold Rate: ಮಾರ್ಚ್ 06ರ ಚಿನ್ನದ ಬೆಲೆ ತಿಳಿದುಕೊಳ್ಳಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Big Buzz: ಕೆಜಿಎಫ್ ಚಾಪ್ಟರ್ 2 ಹಿಂದಿ ಹಕ್ಕು ದಾಖಲೆ ಬೆಲೆಗೆ ಸೇಲ್?
ಭಾರತೀಯ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ವರ್ಲ್ಡ್ ಇಂಡಸ್ಟ್ರಿಯಲ್ಲಿ ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಬಹುತೇಕ ಚಿತ್ರೀಕರಣ ಮುಗಿಸಿರುವ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.
ಕನ್ನಡದಲ್ಲಿ ತಯಾರಾಗುತ್ತಿರುವ ಈ ಚಿತ್ರ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ತೆಲುಗಿನಲ್ಲಿ ಭಾರಿ ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ಇದೀಗ, ಹಿಂದಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ದಾಖಲೆ ಬೆಲೆಗೆ ಸೇಲ್ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಭಾರಿ ಮೊತ್ತ ನೀಡಿ ರೈಟ್ಸ್ ಖರೀದಿ ಮಾಡಿದೆಯಂತೆ. ಅಷ್ಟಕ್ಕೂ, ಹಿಂದಿಯಲ್ಲಿ ಕೆಜಿಎಫ್ ಚಿತ್ರಕ್ಕೆ ಸಿಕ್ಕ ಬೆಲೆ ಎಷ್ಟು? ಮುಂದೆ ಓದಿ....
ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

ಹಿಂದಿಯಲ್ಲಿ ಕೆಜಿಎಫ್ ಸೇಲ್?
ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಈಗ ಚಾಪ್ಟರ್ 2 ಚಿತ್ರವನ್ನು ಖರೀದಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಬಾಲಿವುಡ್ ನಟ-ನಿರ್ಮಾಪಕ ಫರಾನ್ ಅಖ್ತರ್ ಎರಡನೇ ಭಾಗಕ್ಕೆ ದುಬಾರಿ ಬೆಲೆ ನೀಡಿದ ಖರೀದಿಸಿದ್ದಾರೆ ಎಂದು ಹಿಂದಿ ವೆಬ್‌ಸೈಟ್‌ಗಳು ವರದಿ ಮಾಡಿದೆ.

90 ಕೋಟಿಗೆ ಕೆಜಿಎಫ್ ಹಕ್ಕು ಮಾರಾಟ?
ಸದ್ಯದ ಮಾಹಿತಿ ಪ್ರಕಾರ ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್‌ಗೆ ಫರಾನ್ ಅಖ್ತರ್ ಸಂಸ್ಥೆ ಸುಮಾರು 90 ಕೋಟಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಇದು ಮೂಲ ಚಿತ್ರದ ಬಜೆಟ್‌ಗಿಂತ ಹೆಚ್ಚು ಎಂದು ಸ್ವತಃ ಎಕ್ಸೆಲ್ ಸಂಸ್ಥೆಯ ಮೂಲಗಳು ತಿಳಿಸಿವೆ.
ಭಾರಿ ಬೇಡಿಕೆ: ಗಗನ ಮುಟ್ಟಿದ ಕೆಜಿಎಫ್ 2 ತೆಲುಗು ರೈಟ್ಸ್ ಬೆಲೆ!

ಹಿಂದಿ ವರ್ಷನ್ ಗಳಿಸಿದ್ದು ಎಷ್ಟು?
2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿಯಲ್ಲಿ ನಿರೀಕ್ಷೆಗೂ ಮೀರಿದ ಬಿಸಿನೆಸ್ ಮಾಡಿತ್ತು. ಬಿಟೌನ್ ಬಾಕ್ಸ್‌ಆಫೀಸ್‌ನಲ್ಲಿ ವರದಿಯಾಗಿರುವ ಪ್ರಕಾರ ಚಾಪ್ಟರ್ 1 ಸಿನಿಮಾ 40 ಕೋಟಿವರೆಗೂ ಗಳಿಕೆ ಕಂಡಿದೆ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರವಾಗಿ ಹೊರಹೊಮ್ಮಿತ್ತು.

ಚಾಪ್ಟರ್ 2 ಮೇಲೆ ಹೆಚ್ಚಿನ ನಿರೀಕ್ಷೆ ಇದೆ
ಕೆಜಿಎಫ್ ಮೊದಲನೇ ಭಾಗದಲ್ಲಿ ಹಿಂದಿ ಇಂಡಸ್ಟ್ರಿಗೆ ಸಂಬಂಧಿಸಿದಂತೆ ಯಾವ ಕಲಾವಿದ, ತಂತ್ರಜ್ಞರು ಇರಲಿಲ್ಲ. ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಖರೀದಿಸಲು ಎಕ್ಸೆಲ್ ಸಂಸ್ಥೆ ಬಹಳ ಸಲ ಯೋಚನೆ ಮಾಡಿ ಕೊನೆ ಘಳಿಗೆಯಲ್ಲಿ ಪಡೆದುಕೊಂಡಿತ್ತು. ಆದ್ರೆ, ಚಾಪ್ಟರ್ 2 ವಿಷಯದಲ್ಲಿ ವಾಸ್ತವ ಬೇರೆ ಇದೆ. ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗಾಗಿ, ಮೊದಲ ಭಾಗಕ್ಕಿಂತ ಹೆಚ್ಚು ಹಣ ಗಳಿಸುವ ಲೆಕ್ಕಾಚಾರದಲ್ಲಿ ಫರಾನ್ ಅಖ್ತರ್ ಇದ್ದಾರೆ.
ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!

ತೆಲುಗಿನಲ್ಲಿ ದಾಖಲೆ ಬೆಲೆಗೆ ಸೇಲ್?
ಟಾಲಿವುಡ್ ಮಾಧ್ಯಮಗಳು ವರದಿ ಮಾಡಿರುವಂತೆ ವರಾಹಿ ಸಂಸ್ಥೆ ಕೆಜಿಎಫ್ ತೆಲುಗು ವರ್ಷನ್ ಬಿಡುಗಡೆ ಮಾಡಲಿದೆ. ಚಾಪ್ಟರ್ 1 ನೇ ಸಿನಿಮಾವನ್ನು ವರಾಹಿ ಸಂಸ್ಥೆ ರಿಲೀಸ್ ಮಾಡಿತ್ತು. ಈಗ ಚಾಪ್ಟರ್ 2 ಚಿತ್ರಕ್ಕೆ ಸುಮಾರು 60 ಕೋಟಿ ಹಣ ನೀಡಿ ಡಿಜಿಟಲ್ ಹಾಗೂ ಸ್ಯಾಟ್‌ಲೈಟ್ ಹಕ್ಕು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.