For Quick Alerts
  ALLOW NOTIFICATIONS  
  For Daily Alerts

  ಕಂಗನಾ ಕಿರಿಕ್: ಕಾಂಟ್ರವರ್ಸಿ ಕ್ವೀನ್ ಕೈ ಬಿಟ್ಟ ಫಿಲ್ಮ್‌ ಫೇರ್‌!

  |

  ನಟಿ ಕಂಗನಾ ರನೌತ್ ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಿಗಿಂತಲೂ ಕಂಗನಾ ಹೆಚ್ಚಾಗಿ ಗಮನ ಎಳೆಯುವುದು, ಸುದ್ದಿ ಆಗುವುದು ವಿವಾದಗಳಿಂದಲೇ. ಹಾಗಾಗಿ ವಿವಾದಗಳ ಮೂಲಕವೇ ಕಂಗನಾ ಸುದ್ದಿ ಆಗುತ್ತಾರೆ. ಈಗ ಫಿಲ್ಮ್ ಫೇರ್ ಜೊತೆ ಕಂಗನಾ ಹೊಸ ವಿವಾದ ಕೇಳಿ ಬಂದಿದೆ.

  ಕಂಗನಾ 'ಫಿಲ್ಮ್​ ಫೇರ್​' ಪ್ರಶಸ್ತಿ ವಿರುದ್ಧ ಗರಂ ಆಗಿದ್ದಾರೆ. ಆಯೋಜಕರ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಫಿಲ್ಮ್​ ಫೇರ್ ವಿರುದ್ಧ ನಟಿ ಕಂಗನಾ ಕಾನೂನು ಸಮರಕ್ಕೂ ಕೂಡ ಮುಂದಾಗಿದ್ದಾರೆ. ಜೊತೆಗೆ ನಾಮಿನೇಟ್ ಆದ ನಟಿಯರ ಬಗ್ಗೆಯೂ ಮಾತನಾಡಿದ್ದಾರೆ.

  ಸಲ್ಮಾನ್ ರಶ್ದಿ ಮೇಲೆ ದಾಳಿ: ಜಿಹಾದಿ ಕೃತ್ಯವೆಂದ ಕಂಗನಾಸಲ್ಮಾನ್ ರಶ್ದಿ ಮೇಲೆ ದಾಳಿ: ಜಿಹಾದಿ ಕೃತ್ಯವೆಂದ ಕಂಗನಾ

  ಈ ಬಾರಿಯ ಫಿಲ್ಮ್​ ಫೇರ್ ಪ್ರಶಸ್ತಿಗೆ ಕಂಗನಾ ಹೆಸರು ನಾಮಿನೇಟ್ ಆಗಿದೆ. ಆದರೂ ಕೂಡ ಕಂಗನಾ ಫಿಲ್ಮ್​ ಫೇರ್ ವಿರುದ್ಧ ಕಿಡಿ ಕಾರುತ್ತಾ ಇದ್ದಾರೆ. ಅಷ್ಟಕ್ಕೂ ಅವರ ಹೆಸರು ನಾಮಿನೇಟ್ ಆಗಿಲ್ಲದಿದ್ದರೆ, ಕಂಗನಾ ಸುಮ್ಮನೇ ಇರುತ್ತಿದ್ದರೇನೋ. ಆದರೆ ಅವರ ಹೆಸರನ್ನು ನಾಮಿನೇಟ್ ಮಾಡಿರುವೇ ತಪ್ಪು ಎನ್ನುತ್ತಿದ್ದಾರೆ. ಕಂಗನಾ ಯಾಕೆ ಫಿಲ್ಮ್​ ಫೇರ್ ವಿರುದ್ಧ ಕಿಡಿಕಾರುತ್ತಿದ್ದಾರೆ ಎನ್ನುವುದನ್ನು ಮುಂದೆ ಓದಿ....

  'ಫಿಲ್ಮ್ ಫೇರ್' ಬೇಡವೆಂದಿದ್ದ ಕಂಗನಾ!

  'ಫಿಲ್ಮ್ ಫೇರ್' ಬೇಡವೆಂದಿದ್ದ ಕಂಗನಾ!

  ಅಷ್ಟಕ್ಕೂ ನಟಿ ಕಂಗನಾ ಹೀಗೆ ಫಿಲ್ಮ್ ಫೇರ್ ವಿರುದ್ಧ ಕಿಡಿಕಾರಲು ಕಾರಣ ಇದೆ. ಇದರ ಬಗ್ಗೆಯೂ ಕಂಗನಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. "ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಿದ್ದರೆ ಮತ್ತು ವೇದಿಕೆಯಲ್ಲಿ ಡ್ಯಾನ್ಸ್ ಮಾಡದಿದ್ದರೆ ಪ್ರಶಸ್ತಿ ಸಿಗುವುದಿಲ್ಲ ಎಂದು ಫಿಲ್ಮ್​ ಫೇರ್​ ಆಯೋಜಕರು 2013ರಲ್ಲೇ ನನಗೆ ಸ್ಪಷ್ಟವಾಗಿ ಹೇಳಿದ್ದರು. ನೈತಿಕವಾಗಿ ಸರಿಯಲ್ಲದ ಇಂತಹ ಯಾವುದೇ ಕಾರ್ಯಕ್ರಮಕ್ಕೂ ನಾನು ಬರುವುದಿಲ್ಲ ಅಂತ ಅವರಿಗೆ ನಾನು ಆಗಲೇ ಹೇಳಿದ್ದೆ" ಎಂದು ಬರೆದುಕೊಂಡಿದ್ದಾರೆ ಕಂಗನಾ.

  ಪ್ರಶಸ್ತಿ ಕೊಡಲ್ಲ, ನಾಮಿನೇಷನ್ ಯಾಕೆ?

  ಪ್ರಶಸ್ತಿ ಕೊಡಲ್ಲ, ನಾಮಿನೇಷನ್ ಯಾಕೆ?

  ನಟಿ ಕಂಗನಾ ಹೇಳುತ್ತಿರುವುದು ಪ್ರಶಸ್ತಿ ನೀಡುವುದಿಲ್ಲ ಎನ್ನುವುದು ಸ್ಪಷ್ಟವಾದ ಮೇಲೆ, ಸುಮ್ಮನೆ ಯಾಕೆ ಹೆಸರನ್ನು ನಾಮಿನೇಟ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. "ಸಮಾರಂಭಕ್ಕೆ ಬಾರದೇ ಇರುವವರಿಗೆ ಪ್ರಶಸ್ತಿ ಕೊಡುವುದಿಲ್ಲ ಎಂದು ಅವರ ನಿಯಮವೇ ಇರುವಾಗ, ನಾಮ ನಿರ್ದೇಶನ ಮಾಡುವುದು ಯಾಕೆ? ಈ ವಿಚಾರದಲ್ಲಿ ನಾನು ಕಾನೂನು ಹೋರಾಟಕ್ಕೆ ಇಳಿಯುತ್ತೇನೆ." ಎಂದು ಕಂಗನಾ ಸ್ಪಷ್ಟ ಪಡಿಸಿದ್ದಾರೆ.

  'ಫಿಲ್ಮ್​ ಫೇರ್'ಗೆ ಕಂಗನಾ ನಾಮಿನೇಟ್!

  'ಫಿಲ್ಮ್​ ಫೇರ್'ಗೆ ಕಂಗನಾ ನಾಮಿನೇಟ್!

  ಈ ಬಾರಿ ಫಿಲ್ಮ್​ ಫೇರ್ ಪ್ರಶಸ್ತಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ಸ್ಪರ್ಧಿಸಲು ನಟಿ ಕಂಗನಾ ಹೆಸರು ನಾಮಿನೇಟ್ ಆಗಿದೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ನಟಿ ಕಂಗನಾ, "ನಾನು ಸಮಾರಂಭಕ್ಕೆ ಬರುವುದಿಲ್ಲ ಎಂದು ತಿಳಿದಿದ್ದರೂ ಕೂಡ, ಸಾಧಾರಣ ನಟಿಯರ ವಿರುದ್ಧ ನನ್ನನ್ನು ಕಣಕ್ಕಿಳಿಸಿ, ಅನೇಕ ಬಾರಿ ಬ್ಲಾಕ್​ ಮೇಲ್​ ಕರೆಗಳನ್ನು ಮಾಡುವುದು ಯಾಕೆ?" ಎಂದು ಕಂಗನಾ ಪ್ರಶ್ನಿಸಿದ್ದಾರೆ. ಈ ಮೂಲಕ ನಾಮಿನೇಟ್​ ಆದ ಇತರೆ ನಟಿಯರನ್ನು 'ಸಾಧಾರಣ' ಎಂದು ಜರಿದಿದ್ದಾರೆ.

  ಫಿಲ್ಮ್ ಫೇರ್‌ಯಿಂದ ಕಂಗನಾ ಬ್ಯಾನ್?

  ಫಿಲ್ಮ್ ಫೇರ್‌ಯಿಂದ ಕಂಗನಾ ಬ್ಯಾನ್?

  ಇನ್ನು ನಟಿ ಕಂಗನಾ ತಾನೇ ಫಿಲ್ಮ್ ಫೇರ್ ಬ್ಯಾನ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. "2014ರಿಂದ ನಾನು ಇಂಥ ಪ್ರಶಸ್ತಿ ಪ್ರಧಾನ ಸಮಾರಂಭಗಳನ್ನು ಬ್ಯಾನ್​ ಮಾಡಿದ್ದೇನೆ. ಆದರೆ ಇಂದಿಗೂ ಅವರು ನನ್ನನ್ನು ನಾಮಿನೇಟ್​ ಮಾಡುತ್ತಿದ್ದಾರೆ ಎಂಬುದು ತಿಳಿದು ಅಚ್ಚರಿ ಆಯಿತು. ಇಂಥ ಭ್ರಷ್ಟ ನಡೆಯ ವಿರುದ್ಧ ನಾನು ಕೇಸ್​ ಹಾಕುತ್ತೇನೆ" ಎಂದು ಕಂಗನಾ ಬರೆದುಕೊಂಡಿದ್ದಾರೆ. ಕಂಗನಾಳ ಈ ನಡೆಗೆ ತಿರುಗೇಟು ನೀಡಿರುವ ಫಿಲ್ಮ್​ ಫೇರ್ ಆಯೋಜಕರು, ಈ ಬಾರಿಯ ನಾಮಿನೇಷನ್ ​ಪಟ್ಟಿಯಿಂದ ಕಂಗನಾ ಹೆಸರನ್ನು ತೆಗೆದು ಹಾಕಿದ್ದಾರೆ.

  ಕಂಗನಾ ಜೊತೆಗೆ ನಾಮಿನೇಟ್ ಆದ ನಟಿಯರು!

  ಕಂಗನಾ ಜೊತೆಗೆ ನಾಮಿನೇಟ್ ಆದ ನಟಿಯರು!

  67ನೇ ಸಾಲಿನ 'ಫಿಲ್ಮ್​ ಫೇರ್​' ಪ್ರಶಸ್ತಿಯ ಅತ್ಯುತ್ತಮ ನಟಿ ವಿಭಾಗದಲ್ಲಿ ವಿದ್ಯಾ ಬಾಲನ್​ (ಶೇರ್ನಿ ಮತ್ತು ಜಸ್ಲಾ), ತಾಪ್ಸಿ ಪನ್ನು (ರಶ್ಮಿ ರಾಕೆಟ್​), ಕೃತಿ ಸನೋನ್​ (ಮಿಮಿ), ಕಿಯಾರಾ ಅಡ್ವಾಣಿ (ಶೇರ್ಷಾ), ಪರಿಣಿತಿ ಚೋಪ್ರಾ (ಸಂದೀಪ್ ಔರ್​ ಪಿಂಕಿ ಫರಾರ್​), ಕಂಗನಾ ರಣಾವತ್​ (ತಲೈವಿ) ನಾಮಿನೇಟ್ ಆಗಿದ್ದರು. ಆದರೆ ಇದು ಕಂಗನಾಗೆ ಅಸಮಾಧಾನ ಉಂಟು ಮಾಡಿದ್ದು, ತನ್ನ ಹೆಸರನ್ನು ನಾಮಿನೇಟ್ ಮಾಡಿದ್ದಕ್ಕೆ ಫಿಲ್ಮ್ ಫೇರ್ ವಿರುದ್ಧ ಕಿಡಿಕಾರಿದ್ದಾರೆ.

  English summary
  Filmfare Withdraws Kangana Ranaut's Nomination After Her Reply To Nomination, Know More,
  Monday, August 22, 2022, 13:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X