»   » ಹಾಲಿವುಡ್ ಸಿನಿಮಾವನ್ನು ರಿಜೆಕ್ಟ್ ಮಾಡಿದ ಕಿಚ್ಚ ಸುದೀಪ್

ಹಾಲಿವುಡ್ ಸಿನಿಮಾವನ್ನು ರಿಜೆಕ್ಟ್ ಮಾಡಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ನಟ ಸುದೀಪ್ ಹಾಲಿವುಡ್ ಸಿನಿಮಾ ಮಾಡುತ್ತಾರೆ ಎಂದಾಗ ಅವರ ಅಭಿಮಾನಿಗಳು ಮಾತ್ರವಲ್ಲ ಕನ್ನಡದ ಎಲ್ಲ ಸಿನಿಮಾ ಪ್ರೇಮಿಗಳು ಖುಷಿ ಪಟ್ಟರು. ಆದರೆ ಈಗ ಕಿಚ್ಚನ ಹಾಲಿವುಡ್ ಸಿನಿಮಾ ನಿಂತು ಹೋಗಿದೆಯಂತೆ. ಸ್ವತಃ ಸುದೀಪ್ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ.

ಸುದೀಪ್ ತಮಗೆ ಬಂದ ಹಾಲಿವುಡ್ ಸಿನಿಮಾವನ್ನು ಯಾಕೆ ರಿಜೆಕ್ಟ್ ಮಾಡಿದರು ಎನ್ನುವುದಕ್ಕೆ ಒಂದು ಕಾರಣ ಇದೆ. ಸುದೀಪ್ ಅವರ ಈ ಸಿನಿಮಾ ಯಾವಗ ಶುರು ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು ಆದರೆ ಇದುವರೆಗೆ ಸಿನಿಮಾ ಲಾಂಚ್ ಆಗಿಲ್ಲ. ಸುದೀಪ್ ಸದ್ಯ ಕನ್ನಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಇಲ್ಲಿಯ ಸಿನಿಮಾಗಳ ನಡುವೆ ಸುದೀಪ್ ಹಾಲಿವುಡ್ ಸಿನಿಮಾ ಮಾಡಲು ಡೇಟ್ ಹೊಂದಾಣಿಕೆ ಆಗುತ್ತಿಲ್ಲವಂತೆ.

'ಪ್ರಜಾಕೀಯ' ಬಿಟ್ಟ ಉಪ್ಪಿ : ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ !

ಇದರ ಜೊತೆಗೆ ಇನ್ನೊಂದು ಪ್ರಮುಖ ಕಾರಣದಿಂದ ಸುದೀಪ್ ಹಾಲಿವುಡ್ ಚಿತ್ರವನ್ನು ನಿರಾಕರಿಸಿದ್ದಾರೆ. 'ರೈಸನ್' ಚಿತ್ರತಂಡದಲ್ಲಿ ಬದ್ದತೆ ಇಲ್ಲ, ಅವರು ಹೇಳಿದಂತೆ ಸಿನಿಮಾ ಶುರು ಮಾಡಿಲ್ಲ ಎಂಬ ಬೇಸರದಿಂದ ಕಿಚ್ಚ ಈ ಚಿತ್ರದಿಂದ ದೂರ ಉಳಿಸಿದ್ದಾರಂತೆ.

Fools day special : Sudeep rejected hollywood movie.

ಅಯ್ಯೋ, ಹಾಗಾದರೆ ಸುದೀಪ್ ಹಾಲಿವುಡ್ ಸಿನಿಮಾ ನಿಂತು ಹೊಯ್ತಾ ಎಂದು ತಲೆಕಡೆಸಿಕೊಳ್ಳಬೇಡಿ. ಯಾಕಂದ್ರೆ, ಸುದೀಪ್ ಹಾಲಿವುಡ್ ಸಿನಿಮಾ ಮಾಡೆ ಮಾಡುತ್ತಾರೆ. ಈ ಲೇಖನ ಕೇವಲ ಮೂರ್ಖರ ದಿನಾಚರಣೆಯ ವಿಶೇಷ. ಇನ್ನು ಸುದೀಪ್ ಹಾಲಿವುಡ್ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಕಾಯುತಿತ್ತು, ಅವರ ಕನಸು ಅದಷ್ಟು ಬೇಗ ನೆರವೇರಲಿ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about kannada actor Sudeep which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X