»   » ಫ್ರೆಂಡ್ಸ್‌ ಸಿನಿಮಾದಲ್ಲಿ ದೇವರಿಗೆ ಹೆಂಡದ ನೈವೇದ್ಯ: ಹುಬ್ಬಳ್ಳಿ ಕ್ರುದ್ಧ

ಫ್ರೆಂಡ್ಸ್‌ ಸಿನಿಮಾದಲ್ಲಿ ದೇವರಿಗೆ ಹೆಂಡದ ನೈವೇದ್ಯ: ಹುಬ್ಬಳ್ಳಿ ಕ್ರುದ್ಧ

Subscribe to Filmibeat Kannada

‘ತಿರುಪತಿ ತಿರುಮಲ ವೆಂಕಟೇಶ ಕಿವಿಗೊಟ್ಟು ಕೇಳೋ ಇಲ್ಲಿ ಒಂದು ನಿಮಿಷ.....ದುಡ್ಡು ಮಾತ್ರ ಹೆಂಗ್ಮಾಡ್ತೀಯೋ ಗೋವಿಂದ...’

ಫ್ರೆಂಡ್ಸ್‌ ಚಿತ್ರದ ಈ ಹಾಡು ವೆಂಕಟೇಶ ಸ್ವಾಮಿಯ ಭಕ್ತರನ್ನು ಕ್ರುದ್ಧರನ್ನಾಗಿಸಿದೆ. ಸಾಲದ್ದಕ್ಕೆ ದೇವರ ಫೋಟೋ ಮುಂದೆ ಬಿಯರ್‌, ವಿಸ್ಕಿ ಬಾಟಲಿಗಳನ್ನಿಟ್ಟು ನೈವೇದ್ಯ ಮಾಡುವ ದೃಶ್ಯ ಇರುವುದು ಹುಬ್ಬಳ್ಳಿಯ ಹಿಂದೂಗಳನ್ನು ನಖಶಿಖಾಂತ ಉರಿಸುತ್ತಿದೆ.

ಹುಬ್ಬಳ್ಳಿಯಲ್ಲಿ ಸಿನಿಮಾ ನೋಡಿ ಬಂದ ಅನೇಕರು ಹರ್ಟ್‌ ಆಗಿದ್ದರು. ‘ದೇವರ ಫೋಟೋ ಮುಂದೆ ಹೆಂಡ ಇಡೋ ಜನ, ಅವರ ಮನೆಯ ಹಿರಿಯರ ಫೋಟೋ ಮುಂದೇನೂ ಅದನ್ನೇ ಮಾಡ್ತಾರಾ? ನಿರ್ಮಾಪಕರು ಇಷ್ಟು ಚೀಪ್‌ ಆದ ಗಿಮಿಕ್‌ ಮಾಡಬಾರದಾಗಿತ್ತು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕೊಡಲಿ ಪೆಟ್ಟು ಕೊಡುವುದು ಅಸಹ್ಯ’. ಇಂಥಾ ತರಾವರಿ ಮಾತುಗಳು ಹುಬ್ಬಳ್ಳಿಯಲ್ಲಿ ಪ್ರತಿಧ್ವನಿಸುತ್ತಿವೆ.

ಸ್ಥಳೀಯ ಸೆನ್ಸಾರ್‌ ಮಂಡಳಿ ಕತ್ತರಿ ಹಾಕಿರುವ ದೃಶ್ಯಗಳನ್ನು ಸಿನಿಮಾದಲ್ಲಿ ಮತ್ತೆ ತೂರಿಸಿ, ತೋರಿದರೆ ಅದು ಶಿಕ್ಷಾರ್ಹ ಅಪರಾಧ. ಆದರೆ ಫ್ರೆಂಡ್ಸ್‌ ವಿಷಯದಲ್ಲಿ ಹಿಂದೂಗಳ ಭಾವನೆ ಕೆರಳಿಸುವ ಸನ್ನಿವೇಶ ಇರುವುದು ಒಂದೋ ಸೆನ್ಸಾರ್‌ ಮಂಡಳಿಗೆ ಗೊತ್ತಾಗಿಲ್ಲ. ಇಲ್ಲವೇ ಕತ್ತರಿ ಪ್ರಯೋಗದ ನಂತರವೂ ಭಗವಂತನಿಗೆ ಹೆಂಡದ ನೈವೇದ್ಯ ನಡೆಯುತ್ತಿದೆ ! ಹುಬ್ಬಳ್ಳಿಯಲ್ಲಿ ಆಡುತ್ತಿರುವ ಹೊಗೆ ದೊಡ್ಡ ಬೆಂಕಿಯಾಗುವ ಮುನ್ನವಾದರೂ ಸೆನ್ಸಾರ್‌ ಮಂಡಳಿ ಎಚ್ಚೆತ್ತುಕೊಂಡೀತೆ?

ವಾರ್ತಾಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada