ಎರಡನೇ ಮದುವೆಗೆ ರೆಡಿಯಾದರಾ ನಿವೇದಿತಾ ಗೌಡ ? ಪ್ಲೋರಿಡಾದಲ್ಲಿ ಫ್ಲವರ್ ಹಿಡಿದು ನಾಚಿಕೊಂಡ ಬಾರ್ಬಿ ಡಾಲ್..!

By ಫಿಲ್ಮಿಬೀಟ್ ಡೆಸ್ಕ್

ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ, ದಾಂಪತ್ಯ ಜೀವನ ಮುರಿದು ಬಿದ್ದಾಗ.. ಆ ನೋವು ಅನೇಕರಿಗೆ ವರ್ಷಾನುವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು. ಈ ನೋವು ತಾಳಲಾರದೆ .. ಪ್ರೀತಿ ಮರೆಯಲಾಗದೆ .. ಅನೇಕರು ಒದ್ದಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ.

ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಹಲವರು ಈಗ ಹಳೆಯದನ್ನೆಲ್ಲ ಮರೆತು ಮುನ್ನಡೆಯುತ್ತಾರೆ. ಏಕಾಂಗಿಯಾಗಿರಲು ಬಯಸುತ್ತಾರೆ. ಒಬ್ಬರಿಂದ ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ಪ್ರೀತಿಯಲ್ಲಿ ಮತ್ತೆ ಮತ್ತೆ ಬೀಳುತ್ತಾರೆ. ಸದ್ಯ ನಿವೇದಿತಾ ಗೌಡ ಕೂಡ ಇದೇ ಸಾಲಿನಲ್ಲಿ ಸೇರಿಕೊಂಡಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ.

From Ex-Wife to Bride-to-Be Niveditha Gowda s Post Sparks Second Marriage Buzz

ಹೌದು, ಎಲ್ಲರಿಗೆ ಗೊತ್ತಿರುವಂತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿದ್ದಾರೆ. ಮೊದಲ ನೋಟ, ಮೊದಲ ಭೇಟಿ, ಮೊದಲ ಸ್ಪರ್ಶ ಎಲ್ಲವನ್ನೂ ಮರೆತು ಅವರ ಅವರ ಬದುಕಿನಲ್ಲಿ ನೆಮ್ಮದಿ ಆಗಿದ್ದಾರೆ. ಚಂದನ್ ಶೆಟ್ಟಿ ತಮ್ಮ ಕೆಲಸದ ಕಡೆ ಗಮನ ವಹಿಸಿದ್ದಾರೆ. ಕ್ರಿಸ್ ಗೇಲ್ ಅವರ ಜೊತೆ ಕೈ ಜೋಡಿಸಿದ್ದಾರೆ. ಹಾಡೊಂದನ್ನು ಕೂಡ ಹೊರ ತರುತ್ತಿದ್ದಾರೆ.

ಇನ್ನೂ ನಿವೇದಿತಾ ಗೌಡ ಮತ್ತು ರೀಲ್ಸ್ ನಡುವೆ ಬಿಡಿಸಲಾಗದ ಸಂಬಂಧ ಇದೆ. ಮೂರೊತ್ತು ರೀಲ್ಸ್ ಮಾಡುವುದನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ನಿವೇದಿತಾ ಟ್ರಾವೆಲ್ ಪ್ರಿಯೆ ಕೂಡ ಹೌದು. ಚೂರೇ ಚೂರು ಬಿಡುವು ಸಿಕ್ಕರೂ ಸಾಕು. ಸಪ್ತಸಾಗರ ದಾಟಿಕೊಂಡು ಹೋಗುವ ನಿವೇದಿತಾ ಸದ್ಯ ಪ್ಲೋರಿಡಾದಲ್ಲಿ ಬಿಡಾರ ಹೂಡಿದ್ದಾರೆ. ತಮ್ಮ ಲೈಫ್‌ನ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಇವರು ಹಾಕಿರುವ ಒಂದು ಪೋಸ್ಟ್ ಹಲವರ ಗಮನ ಸೆಳೆದಿದೆ. ಅನುಮಾನಕ್ಕೂ ಈ ಪೋಸ್ಟ್ ಎಡೆ ಮಾಡಿ ಕೊಟ್ಟಿದೆ.

ಹೌದು, ಸದ್ಯ ಪ್ಲೋರಿಡಾದ ಪ್ರವಾಸದಲ್ಲಿರುವ ನಿವೇದಿತಾ ಗೌಡ, ತಮ್ಮ ಅಭಿಮಾನಿಗಳಿಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ.. ಹೀಗೆ ಹಂಚಿಕೊಳ್ಳಲಾದ ಒಂದು ಫೋಟೊ ಮತ್ತು ವಿಡಿಯೋ ಗೊಂಚಲಿನಲ್ಲಿ ನಿವೇದಿತಾ ತಮ್ಮ ಕೈಯಲ್ಲಿ ಪುಷ್ಪಗುಚ್ಛವನ್ನು ಹಿಡಿದು ಕುಂತಿದ್ದಾರೆ. ನಾಚಿಕೊಂಡಿದ್ದಾರೆ. ಇಷ್ಟೇ ಅಲ್ಲ 28-08-25 ❤️ ಕ್ಯಾಪ್ಷನ್ ನೀಡಿದ್ದಾರೆ. ನಿವೇದಿತಾ ಗೌಡ ಅವರ ಈ ನಡೆ ಸದ್ಯ ಚರ್ಚೆಗೆ ನಾಂದಿ ಹಾಡಿದೆ.

ಯಾಕೆಂದರೆ.. ಸಾಮಾನ್ಯವಾಗಿ ಇನ್‌ಸ್ಟಾದಲ್ಲಾಗಲಿ.. ಬೇರೆ ಸೋಶಿಯಲ್ ಮೀಡಿಯಾದಲ್ಲಾಗಲಿ.. ದಿನಾಂಕಗಳನ್ನು ಯಾರು ನಮೂದಿಸುವುದಿಲ್ಲ. ಮರೆಯಲಾಗದ ದಿನ ಇದ್ದರೆ ಅಥವಾ ಆ ದಿನ ತುಂಬಾ ವಿಶೇಷವಾಗಿದ್ದರೆ ಮಾತ್ರ ಕೆಲವರು ದಿನಾಂಕವನ್ನು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸುತ್ತಾರೆ. ಇನ್ನೂ ನಿವೇದಿತಾ ದಿನಾಂಕದ ಜೊತೆ ಹಾರ್ಟ್ ಎಮೋಜಿಯನ್ನು ಕೂಡ ಹಾಕಿದ್ದಾರೆ. ಹೀಗಾಗಿಯೇ ಹಲವರು ನಿವೇದಿತಾ ಗೌಡ ಮತ್ತೆ ಪ್ರೀತಿಯಲ್ಲಿ ಬಿದ್ದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಎರಡನೇ ಮದುವೆಗೆ ನಿವೇದಿತಾ ಗೌಡ ರೆಡಿಯಾದಂತೆ ಇದೆ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

From Ex-Wife to Bride-to-Be Niveditha Gowda s Post Sparks Second Marriage Buzz

ಇನ್ನೂ ಇದರ ನಡುವೆ ಪ್ಲೋರಿಡಾದಲ್ಲಿ ನಿವೇದಿತಾ ಗೌಡ ಅವರ ಫೋಟೊಗಳನ್ನು ತೆಗೆಯುತ್ತಿರುವುದು ಯಾರು..? ವಿಡಿಯೋಗಳನ್ನು ಮಾಡುತ್ತಿರುವುದು ಯಾರು..? ಎನ್ನುವ ಕುತೂಹಲ ಕೂಡ ಹಲವರನ್ನು ಕಾಡುತ್ತಿದೆ. ಸಾಮಾನ್ಯವಾಗಿ ನಿವೇದಿತಾ ಗೌಡ ಅವರ ಜೊತೆ ಅವರ ಆಪ್ತ ಸ್ನೇಹಿತೆ ವಾಣಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪ್ಲೋರಿಡಾದಲ್ಲಿಅವರ ಸುಳಿವು ಇವರ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಚರ್ಚೆ ಕಾವೇರಲು ಇದು ಕೂಡ ಮತ್ತೊಂದು ಕಾರಣ. ನಿಜಕ್ಕೂ ನಿವೇದಿತಾ ಗೌಡ ಎರಡನೇ ಮದುವೆಯಾಗ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
A cryptic post by Niveditha Gowda is going viral, leaving fans in a frenzy and fueling speculation about a new chapter in her life. Read about the dating and second marriage rumours
Read more about: niveditha gowda love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X