ಸದ್ದಿಲ್ಲದೇ ನಡೆದೇ ಹೋಯ್ತಾ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಸಮಾರಂಭ?

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಅವರನ್ನೇ ತೆಗೆದುಕೊಳ್ಳಿ.

ಹೌದು ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಎಷ್ಟೇ ಕದ್ದು ಮುಚ್ಚಿ ಓಡಾಡುವ ಪ್ರಯತ್ನವನ್ನು ಇಬ್ಬರು ಮಾಡಿದರು ಕೂಡ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿಯೇ ಆಗುತ್ತಲೇ ಇರುತ್ತಾರೆ.

from-reel-to-real-rashmika-mandannas-ring-fuels-vijay-deverakonda-engagement-rumours

ಡಿನ್ನರ್ ನೈಟ್ ಇರಲಿ.. ಫಾರಿನ್ ಟ್ರಿಪ್ ಇರಲಿ.. ಇಬ್ಬರು ಜೊತೆಯಲ್ಲಿದ್ದಾರೆ ಎನ್ನುವುದನ್ನು ಈ ಹಿಂದೆ ಹಲವು ಬಾರಿ ಇವರ ಅಭಿಮಾನಿಗಳು ಸಾಕ್ಷಿ ಸಮೇತ ಎಲ್ಲವನ್ನೂ ಸಾಬೀತು ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಯಾಕೆ ತೀರಾ ಇತ್ತೀಚೆಗೆ 79ನೇ ಸ್ವಾತಂತ್ರ್ಯ ದಿನಾಚಾರಣೆಯ ಸುಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿರುವ ಭಾರತೀಯರು ಮಾಡಿದ 43ನೇ ಇಂಡಿಯನ್ ಪರೇಡ್‌ನಲ್ಲಿ ಇವರಿಬ್ಬರನ್ನೂ ನೋಡಿದ ಯಾರಿಗೇ ಆಗಲಿ ಇಬ್ಬರ ಸಂಬಂಧದ ಕುರಿತು ಪ್ರಶ್ನೆ ಮೂಡಿಯೇ ಮೂಡುತ್ತೆ. ಅಷ್ಟರ ಮಟ್ಟಿಗೆ ಇಬ್ಬರು ಆತ್ಮೀಯತೆಯಿಂದ ಅಲ್ಲಿ ವರ್ತಿಸಿದ್ದರು.

ಈ ಎಲ್ಲಾ ಕಾರಣಗಳಿಂದ ಹಲವಾರು ಜನ ಇಬ್ಬರು ಮದುವೆಯಾದರೆ ಚೆಂದ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಆದಷ್ಟು ಬೇಗ ಮದುವೆಯಾಗಲಿ ಎಂದು ಆಶಿಸಿದ್ದಾರೆ. ತಮ್ಮ ಮದುವೆಯಾಗದೇ ಇದ್ದರೂ ಕೂಡ ಹಲವರು ಇವರಿಬ್ಬರ ಮದುವೆ ನಡೆಯಬೇಕೆಂಬ ಉದ್ದೇಶದಿಂದ ದೇವರಲ್ಲಿ ಹರಕೆಯನ್ನೂ ಕೂಡ ಹೊತ್ತಿದ್ದಾರೆ.

ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಉಂಗುರ ಕಾಣಿಸಿಕೊಂಡಿದೆ. ಹೌದು, ಅಸಲಿಗೆ ದೂರದ ದುಬೈನಲ್ಲಿ ''ಸೈಮಾ'' ಪ್ರಶಸ್ತಿ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಕೂಡ ಹೋಗಿದ್ದಾರೆ. ಆದರೆ ಇದೇ ಸಮಯದಲ್ಲಿ ಇವರ ಬೆರಳಿನಲ್ಲಿರುವ ಉಂಗುರ ಹಲವರ ಕಣ್ಣು ಬಿದ್ದಿದೆ.
ಕ್ಯಾಮರಾದಲ್ಲಿ ಸೆರೆಯಾದ ರಿಂಗ್ ಹಲವರ ಹುಬ್ಬೇರಿಸಿದೆ. ಈ ಹಿನ್ನೆಲೆ.. ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಸಮಾರಂಭ ಸದ್ದಿಲ್ಲದೇ ನಡೆಯಿತಾ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ರಶ್ಮಿಕಾ ಮಂದಣ್ಣ ಅವರ ಫೋಟೊ-ವಿಡಿಯೋ ಕೂಡ ವೈರಲ್ ಆಗುತ್ತಿವೆ.

ಸದ್ಯ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಕಾಣಿಸಿಕೊಂಡ ಈ ಡೈಮಂಡ್ ರಿಂಗ್ ಕುರಿತು ಹಲವರು ತಲೆ ಕೆಡಿಸಿಕೊಂಡಿದ್ದಾರೆ. ನಾನಾ ರೀತಿಯ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಯಾಗುವುದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯವಾಣಿಯನ್ನು ಕೂಡ ಹಲವರು ಹೇಳುತ್ತಿದ್ದಾರೆ. ಅದರಲ್ಲಿಯೂ ಆಂಧ್ರದಲ್ಲಿ ಈ ಜ್ಯೋತಿಷಿಗಳ ಸಂಖ್ಯೆ ಹೆಚ್ಚಾಗಿದೆ.

ಒಟ್ನಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವಿನ ಸಂಬಂಧ ''ಸೈಮಾ'' ನೆಪದಲ್ಲಿ ಮತ್ತೊಮ್ಮೆ ಚರ್ಚೆಯಲ್ಲಿದೆ. ರಶ್ಮಿಕಾ ಬೆರಳಿನಲ್ಲಿ ಕಾಣಿಸಿಕೊಂಡ ಉಂಗುರ ಹಲವು ಪ್ರಶ್ನೆಗಳಿಗೆ ಎಡೆ ಮಾಡಿ ಕೊಟ್ಟಿದೆ. ಈ ಉಂಗುರಿನ ರಹಸ್ಯ ರಶ್ಮಿಕಾಗೆ ಗೊತ್ತಾದರೂ ಹಲವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಆದಷ್ಟು ಬೇಗ ಮದುವೆಯಾಗಲಿ ಎಂದು ಆಶಿಸುತ್ತಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The Internet is buzzing with speculation: Is that an engagement ring on Rashmika Mandanna's finger? Dive into the details of the viral photos and her rumored romance with Vijay Deverakonda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X