ಗಣೇಶ್ ಬಳಿ ಬೌನ್ಸ್ ಆದ ಚೆಕ್ಕುಗಳು ಎಷ್ಟಿವೆ ಗೊತ್ತೇ?

By ಜೀವನ್ ಸೂರ್ಯ
<ul id="pagination-digg"><li class="previous"><a href="/gossips/ganesh-s-narayan-controversy-munjane-romeo-movies-067043.html">« Previous</a>

ಇನ್ನು ಗಣೇಶ್ ವಿಚಾರಕ್ಕೆ ಬರುವುದಾದರೆ, ಗಣೇಶ್ ಅಭಿನಯದ ಚಿತ್ರ ರೋಮಿಯೋ ಈಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತೀರಾ ಸೂಪರ್ ಹಿಟ್ ಎನ್ನಲಾಗದಿದ್ದರೂ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ರೋಮಿಯೋ ಚಿತ್ರ ಗಣೇಶ್ ಅವರ ಬಾಳಲ್ಲಿ ಮತ್ತೆ ಗೆಲುವಿನ ನಗೆ ಮೂಡಿಸಿದೆ. ಹೀಗಿರುವಾಗ ಗಣೇಶ್ ಬದಲಾಗದಿರಲು ಸಾಧ್ಯವೇ?

ಗಣೇಶ್ ಬಾಯಿಂದ ಈಗ ಉದುರಿರುವ ಅಣಿಮತ್ತುಗಳು ಹೀಗಿವೆ... ಗೆದ್ದ ಖುಷಿಯಲ್ಲಿ ಮತ್ತೆ ಹಳೆ ವಿಷಯಗಳನ್ನು ಕೆದಕಿರುವ ಗಣೇಶ್, "ನಾನು ನನ್ನ ಕೆಲಸವನ್ನು ಸಮರ್ಪಕವಾಗಿ ಮಾಡಿದ್ದೇನೆ. ನಾನು ನಟಿಸಿದ ಚಿತ್ರಗಳ ಸೋಲನ್ನು ನನ್ನ ತಲೆಗೆ ಕಟ್ಟುವುದು ಎಷ್ಟು ಸರಿ? ಬೇರೆ ನಟರಂತೆ ನಾನೂ ನಟನಗೆ ಸಂಭಾವನೆ ಪಡೆಯುತ್ತೇನೆ.

ನನ್ನ ಹತ್ತಿರವೂ ಭಾರಿ ಮೊತ್ತದ ಬೌನ್ಸ್ ಆಗಿರುವ ಚೆಕ್ಕುಗಳಿವೆ. ಆದರೆ ಅದಕ್ಕಾಗಿ ನಾನು ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ಬದಲಿಗೆ ನನ್ನ ಕೆಲಸವನ್ನು ನೀಟಾಗಿ ಮಾಡಿ ಮುಗಿಸುತ್ತಿದ್ದೇನೆ. ಈ ಬಗ್ಗೆ ಯಾರಲ್ಲೋ ಹೇಳಿ ನನ್ನ ಚಿತ್ರಗಳ ನಿರ್ಮಾಪಕರ ಮಾನ ಹರಾಜು ಹಾಕುವ ಕೆಲಸಕ್ಕೆ ಕೈಹಾಕಿಲ್ಲ.

ಬಣ್ಣದ ಲೋಕ ಎಂದ ಮೇಲೆ ಇಲ್ಲಿ ಸೋಲು-ಗೆಲುವು ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಕಲಿತಿರಬೇಕಷ್ಟೇ" ಎಂದು ವಿಭಿನ್ನ ರೀತಿಯಲ್ಲಿ ತಮ್ಮದೇ ಆದ ಶಬ್ಧಗಳನ್ನು ಪೋಣಿಸಿ ನುಡಿಮುತ್ತು ಉದುರಿಸಿದ್ದಾರೆ. ಗಣೇಶ್ ಈ ಮಾತಿಗೆ ಗಣೇಶ್ ಈ ಮೊದಲಿನ ಚಿತ್ರಗಳ ನಿರ್ಮಾಪಕರು ತಿರುಗಿ ಬೀಳದಿದ್ದರೆ ಸಾಕು. ಇದು, ಗಣೇಶ್ ಯಾರಿಗೋ ಕೊಟ್ಟ ಉತ್ತರವೆಂದು ಅರಿವಾಗದೇ ಕಾಲುಕೆದರಿ ನಿಂತರೆ ಕಷ್ಟ ಕಷ್ಟ!

ಒಟ್ಟಿನಲ್ಲಿ ಗಣೇಶ್ ಬಾಳಿನಲ್ಲಿ ಕತ್ತಲೆ ಸ್ವಲ್ಪ ಕಾಲ ಕವಿದಿದ್ದ ಕತ್ತಲೆ ಸರಿದು ಮತ್ತೆ ಬೆಳಕು ಮೂಡಲಾರಂಭಿಸಿದೆ. ಈ ಮೊದಲಿನಂತೆ ತಮ್ಮ ಕೆಲಸವನ್ನು ನೀಟಾಗಿ ಮಾಡಿ ಅವರಿವರ ಮಾತಿಗೆ ಹಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದುಬಿಟ್ಟರೆ ಕ್ಷೇಮವೇನೋ. ಅದಕ್ಕಿಂತಲೂ ಹೆಚ್ಚಾಗಿ, ಸಿನಿಮಾಗಳ ಆಯ್ಕೆಯಲ್ಲಿ ಇನ್ನೂ ಹೆಚ್ಚಿನ ಜಾಣತನ ಪ್ರದರ್ಶಿಸಿದರೆ ಗಣೇಶ್ ನಿಜವಾದ ಗೋಲ್ಡನ್ ಸ್ಟಾರ್ ಆಗಿ ಉಳಿಯುವುದರಲ್ಲಿ ಅನುಮಾನವಿಲ್ಲ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/ganesh-s-narayan-controversy-munjane-romeo-movies-067043.html">« Previous</a>

More from Filmibeat

English summary
The controversy between Golden Star Ganesh and director S Narayan not came to an end. S Narayan told that as Ganesh told he will take responsibility of flop for their last movie Munjane. Further he added that the actors can't go totally out from this. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X