ಜೆನಿಲಿಯಾ ಗರ್ಭಿಣಿಯಾಗಿಲ್ಲ, ಸುದ್ದಿ ಖಚಿತವಾಯ್ತು

By Mahesh

ದಕ್ಷಿಣ ಭಾರತದ ಬಬ್ಲಿ ಸ್ಟಾರ್ ಜೆನಿಲಿಯಾ ಡಿ'ಸೋಜಾ ಮದುವೆಯಾದ ಮೇಲೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಏಕೆ? ಸಿಸಿಎಲ್ ಪಂದ್ಯಾವಳಿ ನಂತರ ಎಲ್ಲೂ ಹೊರಗೆ ಬಂದಿಲ್ಲ? ಜೆನ್ನಿ ಗರ್ಭಿಣಿಯಾಗಿಲ್ಲ ತಾನೇ? ಎಂದು ಹಬ್ಬಿದ್ದ ಗಾಸಿಪ್ ಮಾತುಗಳು ಈಅಗ್ ಟುಸ್ ಆಗಿದೆ.

ನಾಯಕ ರಿತೇಶ್ ದೇಶ್ ಮುಖ್ ಕೈ ಹಿಡಿದ ಜೆನ್ನಿ ಬಗ್ಗೆ ಹಬ್ಬಿದ್ದ ಸುದ್ದಿ ಬಗ್ಗೆ ಸ್ಪಷ್ಟನೆ ಕೇಳಿದಾಗ ಆಕೆ PR ಛೇ ಹಾಗೆ ಇಲ್ಲ. ಈಗಲೇ ಮೇಡಂ ಹಾಗೂ ಸರ್ ಮಗು ಬಗ್ಗೆ ಯೋಚನೆ ಮಾಡುತ್ತಿಲ್ಲ. ಜೆನ್ನಿಫರ್ ಗರ್ಭಿಣಿಯಾಗಿಲ್ಲ. ಅಲ್ಲದೆ ಇಂಥ ಖುಷಿ ವಿಷಯ ಮುಚ್ಚಿಡುವ ಅಗತ್ಯವೂ ಇಲ್ಲ. ರಿತೇಶ್ ಹಾಗೂ ಜೆನ್ನಿ ಮೊದಲ ಮಗು ನಿರೀಕ್ಷೆ ಬಗ್ಗೆ ವಿಷ್ಯ ಬಂದರೆ ಮೊದಲು ಒನ್ ಇಂಡಿಯಾಗೆ ತಲುಪಿಸುತ್ತೀವಾ ಓಕೆನಾ ಎಂದು ಫೋನ್ ಕಟ್ ಮಾಡಿದರು.

ಸಿಸಿಎಲ್ ನಲ್ಲಿ ವೀರ್ ಮರಾಠಿ ತಂಡದ ಪರ ರಿತೇಶ್ ಹಾಗೂ ಜೆನ್ನಿ ಜೋಡಿ ಕುಣಿದಾಡಿದ ನಂತರ ಫಿಲಂ ಪ್ರೊಡಕ್ಷನ್ ಪಾಠದಲ್ಲಿ ಜೆನ್ನಿ ಬ್ಯುಸಿಯಾಗಿದ್ದಾರೆ. ಹಲವು ಸ್ಕ್ರಿಪ್ಟ್ ಗಳು ಬಂದರೂ ಯಾವುದೂ ಓಕೆ ಆಗಿಲ್ಲ. ಶೀಘ್ರದಲ್ಲೇ ತೆರೆ ಮೇಲೆ ಜೆನ್ನಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳು ನಿರಾಸೆಗೊಳ್ಳುವುದು ಬೇಡ ಎಂದು ಜೆನ್ನಿ PR ಹೇಳಿದರು.

ಜೆನ್ನಿಫರ್ ಹಾಗೂ ರಿತೇಶ್ ಫೆ.3, 2012ರಂದು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರು. ಸುಮಾರು 8 ವರ್ಷಗಳ ಕಾಲ ನಡೆದಿದ್ದ ಇವರಿಬ್ಬರ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಿತ್ತು. ಇಬ್ಬರ ಲವ್ ಗೆ ಎರಡು ಕುಟುಂಬ ಸರ್ವ ಸಮ್ಮತಿ ನೀಡಿತ್ತು. ಜೆನ್ನಿಫರ್ ಮುಂದಿನ ಹೆಜ್ಜೆ ಬಗ್ಗೆ ಮುಂದೆ ಓದಿ...

ಜೆನ್ನಿ ಬೆಳ್ಳಿ ತೆರೆಗೆ ಯಾವಾಗ ಬರ್ತೀಯಾ?

ಜೆನ್ನಿ ಬೆಳ್ಳಿ ತೆರೆಗೆ ಯಾವಾಗ ಬರ್ತೀಯಾ?

ಜೆನ್ನಿಫರ್ ಸಿನಿಮಾ ನೋಡಲಾಗದೆ ಅಭಿಮಾನಿಗಳಂತೂ ಬೇಸರದಿಂದ ಒದ್ದಾಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಪ್ರೇಕ್ಷಕರ ಮನ ಗೆದ್ದಿದ್ದ ಈ ಸ್ಟಾರ್, ಕನಿಷ್ಠಪಕ್ಷ ವರ್ಷಕ್ಕೆ 2 ಬಿಗ್ ಸಿನಿಮಾಗಳಲ್ಲಾದರೂ ಕಾಣಿಸಿಕೊಳ್ಳುತ್ತಿದ್ದರು. ಮದುವೆಯಾದ ಮೇಲೆ ದಕ್ಷಿಣ ಚಿತ್ರರಂಗ ಮರೆತಂತೆ ಕಾಣುತ್ತಿದೆ

ಯಾವುದೇ ಸಿನ್ಮಾ ಸಹಿ ಹಾಕಿಲ್ಲ

ಯಾವುದೇ ಸಿನ್ಮಾ ಸಹಿ ಹಾಕಿಲ್ಲ

ಒಂದು ಪುಟ್ಟ ಬ್ರೇಕ್ ತೆಗೆದುಕೊಂಡಿದ್ದೇನೆ. ಆದರೆ, ಮತ್ತೆ ಚಿತ್ರರಂಗಕ್ಕೆ ಮರಳುತ್ತೇನೆ. ನನ್ನ ಕುಟುಂಬದಲ್ಲಿ ಈ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ತುಂಬಾ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಆದರೂ ಈಗ 10 ವರ್ಷದ ಅನುಭವಿದ್ದು 365 ದಿನ ಕೂಡಾ ಚಿತ್ರರಂಗದಲ್ಲಿ ಬ್ಯುಸಿ ಇದ್ದ ದಾಖಲೆ ಹೊಂದಿದ್ದೆ. ಈಗ ಬ್ರೇಕ್ ಬೇಕಿದೆ ಅಷ್ಟೇ.

 ಬಾಲಿವುಡ್ ಪ್ರವೇಶದ ಬಗ್ಗೆ

ಬಾಲಿವುಡ್ ಪ್ರವೇಶದ ಬಗ್ಗೆ

ನಾನು ಹಿಂದಿ ಚಿತ್ರರಂಗಕ್ಕೆ ಬರುವ ಮುನ್ನ ಐದು ಭಾಷೆಗಳಲ್ಲಿ ನಟಿಸಿದ್ದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜನರಿಗೆ ನನ್ನ ಪರಿಚಯ ಇದೆ. ಮದುವೆಯಾದ ಮೇಲೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಕಾಲ ಬೇಕಿತ್ತು. ಹೀಗಾಗಿ ಬ್ರೇಕ್ ತೆಗೆದುಕೊಂಡೆ. ಮದುವೆ ನಂತರವೂ ನಾನು ರಿತೇಶ್ ಮೊದಲಿನ ರೀತಿಯೇ ಇದ್ದೇವೆ

ಜೀವನ ಸುಖಮಯವಾಗಿದೆ

ಜೀವನ ಸುಖಮಯವಾಗಿದೆ

ಜಾಹೀರಾತು ಲೋಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು ಇತ್ತೀಚಿಗೆ ಟಿವಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿಲ್ಲ. ಸೆಲೆಬ್ರಿಟಿ ಕ್ರಿಕೆಟ್ ಟೀಂ ಖರೀದಿಸಿದ ರಿತೇಶ್ ಗೆ ಬೆನ್ನೆಲುಬಾಗಿ ನಿಲ್ಲಲೇ ಬೇಕಾಯಿತು. ಬಲಕ್ ಪಲಾಕ್ ನಮ್ಮ ಹೋಂ ಪ್ರೊಡೆಕ್ಷನ್ ಚಿತ್ರದಲ್ಲಿ ಬ್ಯುಸಿಯಾಗಿದ್ದೆ

ತೆಲುಗು, ತಮಿಳು ಸಿನ್ಮಾ ಒಪ್ಪಿಕೊಂಡಿಲ್ಲ

ತೆಲುಗು, ತಮಿಳು ಸಿನ್ಮಾ ಒಪ್ಪಿಕೊಂಡಿಲ್ಲ

ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಯಾವುದೇ ಚಿತ್ರಗಳನ್ನು ಸದ್ಯಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಕೆಲವು ಆಫರ್ ಗಳು ಬಂದಿತ್ತು. ಆದ್ರೆ, ಸಮಯ ಸಾಲುತ್ತಿಲ್ಲ. ಇಟ್ಸ್ ಮೈ ಲೈಫ್ ಹಿಂದಿ ಚಿತ್ರ ಹಾಗೂ ರಾಕ್ ದಿ ಶಾದಿ ಚಿತ್ರ ಕೈಲಿದೆ. ಇವು ಮುಗಿದ ಮೇಲೆ ದಕ್ಷಿಣ ಭಾರತಕ್ಕೆ ಮತ್ತೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

More from Filmibeat

English summary
Genelia D'Souza, who made it big in South films, is not pregnant says her PR. In the recent months, there were a lot of reports on the actress expecting her first baby with Bollywood actor Riteish Deshmukh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X