ಯೋಗರಾಜ್ ಭಟ್ಟರೊಂದಿಗೆ ಗಣೇಶ್ ಮತ್ತೆ ನಟನೆ?

ಮುಂಜಾನೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಎಸ್ ನಾರಾಯಣ್, ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ಚಿತ್ರ ನಿರ್ದೇಶನಕ್ಕೆ ತಮ್ಮ ನಿವೃತ್ತಿಯನ್ನು ಗೋಷಿಸಿದ್ದರು. ಅದಕ್ಕೂ ಮೊದಲು ಅವರು ನಿರ್ದೇಶಿಸಿದ್ದ 'ಶೈಲೂ' ಚಿತ್ರ ಕೂಡ, ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದರೂ, ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಎಸ್ ನಾರಾಯಣ್ ಇಬ್ಬರಿಗೂ ಭಾರೀ ಮಜುಗರ ತಂದಿತ್ತು.

ಇಷ್ಟಾಗಿದ್ದೇ ತಡ, ನಾರಾಯಣ್ ನಿವೃತ್ತಿಗೆ ಗೋಲ್ಡನದ ಸ್ಟಾರ್ ಗಣೇಶ್ ಅವರೇ ಕಾರಣ ಎಂದು ಗಾಂಧಿನಗರದ ತುಂಬೆಲ್ಲಾ ಸುದ್ದಿಯ ಸುರುಳಿ ಹರಿದಾಡತೊಡಗಿತು. ಗಣೇಶ್ ಸಾಕಷ್ಟು ಬಾರಿ "ಒಂದು ಚಿತ್ರದ ಸೋಲಿಗೆ ಅಥವಾ ಗೆಲುವಿಗೆ ಕೇವಲ ನಾಯಕ ಮಾತ್ರ ಕಾರಣಕರ್ತನಲ್ಲ" ಎಂದು ಸ್ಪಷ್ಟೀಕರಣ ನೀಡಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ.

ಸದ್ಯಕ್ಕೆ ಸೋಲಿನ ಸರದಾರ ಎನಿಸಿಕೊಂಡಿರುವ ಗಣೇಶ್ ಅವರನ್ನು ಇಂದು (ಜುಲೈ 06, 2012) ಬಿಡುಗಡೆ ಆಗಿರುವ 'ರೋಮಿಯೋ' ಚಿತ್ರವೇ ಕಾಪಾಡಬೇಕಿದೆ. ಸ್ವತಃ ಗಣೇಶ್ ಹಾಗೂ ಅವರ ಅಭಿಮಾನಿಗಳಿಗೆ ಈ ಚಿತ್ರ ಅಗ್ನಿಪರೀಕ್ಷೆ ಎಂಬುದು ನಿಸ್ಸಂದೇಹ. ಈ ಸಂದರ್ಭದಲ್ಲಿ 'ಕಾಮಿಡಿ ಟೈಮ್' ಗಣೇಶ್ ಅವರನ್ನು ಗೋಲ್ಡನ್ ಸ್ಟಾರ್ ಪಟ್ಟಕ್ಕೇರಿಸಿದ 'ಮುಂಗಾರು ಮಳೆ' ಚಿತ್ರ ಎಲ್ಲರಿಗೂ ನೆನಪಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'ಮುಂಗಾರು ಮಳೆ' ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಗಣೇಶ್, 'ಗಾಳಿಪಟ'ದ ನಂತರ ಯಾಕೆ ಯಾವ ಚಿತ್ರವನ್ನೂ ಮಾಡಿಲ್ಲ? ಭಟ್ಟರು ಹಾಗೂ ಗಣೇಶ್ ಮಧ್ಯೆ ಸಂಬಂಧ ಈಗ ಹೇಗಿದೆ? ಗಣೇಶ್ ಹಾಗೂ ಯೋಗರಾಜ್ ಭಟ್ ಮತ್ತೆ ಒಟ್ಟಾಗಿ ಯಾಕೆ ಚಿತ್ರ ಮಾಡಿಲ್ಲ? ಈ ಎಲ್ಲಾ ಪ್ರಶ್ನೆಗಳು ಮಾಧ್ಯಮಗಳಿಂದ 'ರೋಮಿಯೋ' ಗಣೇಶ್ ಅವರಿಗೆ ಎದುರಾಗಿವೆ.

ಅವೆಲ್ಲಕ್ಕೂ ಗಣೇಶ್ 'ಕೋಲ್' ಆಗಿಯೇ ಉತ್ತರಿಸಿದ್ದಾರೆ. 'ಇತ್ತೀಚಿಗೆ ಯೋಗರಾಜ್ ಭಟ್‌ರಿಂದ ಯಾಕೆ ದೂರವಿದ್ದೀರಿ?' ಎಂಬ ಪ್ರಶ್ನೆಗೆ ಗಣೇಶ್ ನೇರವಾಗಿ ಉತ್ತರಿಸಿದ್ದಾರೆ. ಮೊದಲಿಗೆ ಈ ಆರೋಪವನ್ನೂ 'ಆಧಾರ ರಹಿತ' ಎಂದು ನಯವಾಗಿ ನಿರಾಕರಿಸಿದ್ದಾರೆ ಗಣೇಶ್. ಅವರ ಪ್ರಕಾರ, ತುಂಬಾ ಮಂದಿ ಅಂದುಕೊಂಡಂತೆ ಅವರಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಯಾಯವಿಲ್ಲ.

"ನಾನು ಯಾವತ್ತೂ ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿಲ್ಲ. ಯೋಗರಾಜ್ ಭಟ್ಟರ 'ಮುಂಗಾರು ಮಳೆ' ಚಿತ್ರ ನನ್ನನ್ನು 'ಗೋಲ್ಡನ್ ಸ್ಟಾರ್' ಮಾಡುವ ಮೊದಲು ನಾನು ಬರೀ 'ಕಾಮಿಡಿ ಟೈಮ್' ಗಣೇಶ್ ಆಗಿದ್ದೆ. ಹೀಗಾಗಿ ಮುಂಗಾರು ಮಳೆ ಚಿತ್ರವೇ ನನ್ನ 'ಗಾಡ್‌ ಫಾದರ್'.

ಯೋಗರಾಜ್ ಭಟ್ ಅವರು ತುಂಬಾ ಒಳ್ಳೆಯ ನಿರ್ದೇಶಕರು. ಅಷ್ಟೇ ಅಲ್ಲ, ನನಗೆ ಆತ್ಮೀಯ ಗೆಳೆಯರೂ ಕೂಡ. ಗಾಳಿಪಟದ ಮಳೆ ನಂತರ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬಿಜಿಯಾಗಿದ್ದರಿಂದ ಮತ್ತೆ ಒಟ್ಟಾಗಿ ನಟಿಸಲು ಸಾಧ್ಯವಾಗಲಿಲ್ಲ. ನೋಡೋಣ, ಭಟ್ಟರು ಹೇಳುವಂತೆ ಕಾಲವೇ ನಮ್ಮನ್ನು ಒಂದಾಗಿಸಬೇಕು" ಎಂದಿದ್ದಾರೆ ಗಣೇಶ್.

ಅಂದರೆ, ಗಣೇಶ್ ಮತ್ತೆ ಭಟ್ಟರ ಜೊತೆ ಕೆಲಸ ಮಾಡುವುದಾಗಿ ಹೇಳಿಲ್ಲ, ಮಾಡುವುದಿಲ್ಲವೆಂದೂ ಹೇಳಿಲ್ಲ. ಅದೇ ರೀತಿ ಭಟ್ಟರೂ ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಇಬ್ಬರೂ ವಹಿಸಿಕೊಂಡ ಚಿತ್ರಗಳು ಮುಗಿದ ಬಳಿಕ ಮತ್ತೆ ಒಂದಾಗಲಿದ್ದಾರೆ. ಭಟ್ಟರಿಂದ ಗಣೇಶ್ ನಾಯಕತ್ವದ ಚಿತ್ರ ಮತ್ತೆ ಬರಲಿದೆ. ಸಿನಿಪ್ರೇಕ್ಷಕರಂತೂ ಆ ದಿನಕ್ಕಾಗಿ ಕಾದಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
There is news buzz that Golden Star Ganesh Acts again in Yogaraj Bhat direction movie. After Super Hit movie Mungaru Male, this fair only tied together in 'Galipata. According to the sources, golden star Ganesh and Yogaraj Bhat starts together a movie soon. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X