KGF Chapter 3: ಯಶ್ ಫ್ಯಾನ್ಸ್‌ಗೆ ಗುಡ್ ನ್ಯೂಸ್.. 'ಸಲಾರ್ 2' ಸದ್ಯಕ್ಕಿಲ್ಲ 'ಕೆಜಿಎಫ್ 3' ಬಗ್ಗೆ ಏನಿದು ಸುದ್ದಿ?

By ಫಿಲ್ಮಿಬೀಟ್ ಡೆಸ್ಕ್

'ಕೆಜಿಎಫ್ 2' ಮೆಗಾ ಹಿಟ್ ಆಗುತ್ತಿದ್ದಂತೆ 'ಕೆಜಿಎಫ್ 3' ಬಗ್ಗೆ ಅದೆಷ್ಟು ಕ್ರೇಜ್ ಇದೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಶ್ ಅಭಿಮಾನಿಗಳಂತೂ 'ಕೆಜಿಎಫ್ 3' ಆದಷ್ಟು ಬೇಗ ಶುರುವಾಗಲಿ ಅಂತ ಹರಕೆ ಹೊತ್ತುಕೊಂಡಿದ್ದಾರೆ. ಇಂತಹ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಇದೆ.

ಯಶ್ ಇತ್ತ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿಲ್ಲ. ಅತ್ತ ಪ್ರಶಾಂತ್ ನೀಲ್ 'ಸಲಾರ್: ಪಾರ್ಟ್ 1' ಮುಗಿಸಿ ರಿಲೀಸ್ ಮಾಡುವುದಕ್ಕೂ ಸಜ್ಜಾಗುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡುತ್ತಿದ್ದಂತೆ ಯಶ್ ಫ್ಯಾನ್ಸ್ 'ಕೆಜಿಎಫ್ 3' ಕನಸನ್ನು ಸದ್ಯಕ್ಕೆ ಕೈ ಬಿಟ್ಟಿದ್ದರು. ಆದ್ರೀಗ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

Good News for Yash fans Prashanth Neel likely to start scripting for KGF 3

'ಕೆಜಿಎಫ್ 2' ಮೆಗಾ ಹಿಟ್ ಆಗುತ್ತಿದ್ದಂತೆ ಪ್ರಶಾಂತ್ ನೀಲ್ 'ಕೆಜಿಎಫ್ 3' ಬಗ್ಗೆ ಗಮನ ಹರಿಸಬೇಕಿತ್ತು ಅಂತ ಹಲವರು ಅಭಿಪ್ರಾಯ ಪಟ್ಟಿದ್ದರು. ಆದರೆ, ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ 'ಕೆಜಿಎಫ್ 3' ಬ್ರೇಕ್ ಕೊಟ್ಟು ಇಬ್ಬರೂ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದ್ರೀಗ ಪ್ರಶಾಂತ್ ನೀಲ್ 'ಕೆಜಿಎಫ್ 3'ಗೆ ಶೀಘ್ರದಲ್ಲಿಯೇ ಸ್ಕ್ರಿಪ್ಟ್ ಬರೆಯೋದಕ್ಕೆ ಶುರು ಮಾಡುತ್ತಾರೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ 'ಕೆಜಿಎಫ್ 3' ಸದ್ದು!

ಯಶ್ 19 ಇನ್ನೂ ಅನೌನ್ಸ್ ಆಗಿಲ್ಲ. ಈ ಗ್ಯಾಪ್‌ನಲ್ಲಿ 'ಕೆಜಿಎಫ್ 3' ಸದ್ದು ಮಾಡೋಕೆ ಶುರು ಮಾಡಿದೆ. ಪ್ರಶಾಂತ್ ನೀಲ್ ಶೀಘ್ರದಲ್ಲಿಯೇ 'ಕೆಜಿಎಫ್ 3' ಸ್ಕ್ರಿಪ್ಟ್ ಆರಂಭ ಮಾಡಲಿದ್ದಾರೆ ಎಂದು ವರದಿಯಾಗಿದೆ. ಫಿಲ್ಮ್ ಕಂಪಾನಿಯನ್ ವೆಬ್‌ ಸೈಟ್ ಈ ಬಗ್ಗೆ ನಿಖರವಾದ ಮಾಹಿತಿಯನ್ನು ಬಿತ್ತರಿಸಿದೆ. ನಂಬಲು ಅರ್ಹವಾದ ಮೂಲಗಳು ಈ ವಿಷಯವನ್ನು ತಿಳಿಸಿದ್ದಾಗಿ 'ಕೆಜಿಎಫ್ 3' ಬಗ್ಗೆ ವರದಿಯನ್ನು ಪ್ರಕಟಿಸಿದೆ.

'ಸಲಾರ್ 2' ಸದ್ಯಕ್ಕಿಲ್ಲ 'ಕೆಜಿಎಫ್ 3' ಶುರು!

ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಸಿನಿಮಾ 'ಸಲಾರ್: ಪಾರ್ಟ್ 1' ಬಿಡುಗಡೆ ರೆಡಿಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ 'ಸಲಾರ್: ಪಾರ್ಟ್ 1' ಬಳಿಕ 'ಸಲಾರ್ 2' ಬರುತ್ತೆ ಅನ್ನೋ ಸುದ್ದಿ ಹಬ್ಬಿತ್ತು. ಆದ್ರೀಗ 'ಸಲಾರ್' ಸೀಕ್ವೆಲ್ ಸದ್ಯಕ್ಕಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ. ಅದಕ್ಕೂ ಮುನ್ನ 'ಕೆಜಿಎಫ್ 3' ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

Good News for Yash fans Prashanth Neel likely to start scripting for KGF 3

'ಕೆಜಿಎಫ್ 3' ಸದ್ದು ಮಾಡುತ್ತಿರೋದೇಕೆ?

ಪ್ರಶಾಂತ್ ನೀಲ್ ಕೈಯಲ್ಲಿರೋ ಪ್ರಾಜೆಕ್ಟ್‌ಗಳನ್ನು ಎಣಿಸಿ, ಗುಣಿಸಿ ನೋಡಿದ ಮೇಲೆ ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಮರಳುವುದಿಲ್ಲ ಅಂತಲೇ ಅಂದುಕೊಂಡಿದ್ದರು. ಯಾಕಂದ್ರೆ, ಪ್ರಭಾಸ್ ಬಳಿಕ ಜೂ.ಎನ್‌ಟಿಆರ್ ಸಿನಿಮಾ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೀಗ ಜೂ.ಎನ್‌ಟಿಆರ್ 'ದೇವರ' ಸಿನಿಮಾ ತಡವಾಗುತ್ತಿದೆ. ಇನ್ನೊಂದು ಕಡೆ ಬಾಲಿವುಡ್ ಸಿನಿಮಾ 'ವಾರ್ 2'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್ ತಡವಾಗಲಿದೆ. ಈ ಗ್ಯಾಪ್‌ನಲ್ಲಿ ಪ್ರಶಾಂತ್ ನೀಲ್ 'ಕೆಜಿಎಫ್ 3' ಕೈಗೆತ್ತಿಕೊಳ್ಳಲಿದ್ದಾರೆ ಅನ್ನೋದು ಓಡಾಡುತ್ತಿರೋ ಸುದ್ದಿ.

'ಯಶ್ 19', 'ಕೆಜಿಎಫ್ 3' ಯಾವುದು?

'ಕೆಜಿಎಫ್ 2' ಅಂತಹ ಮೆಗಾ ಸಕ್ಸಸ್ ಬಳಿಕ ಯಶ್ ನಿಧಾನವಾಗಿ ಆಲೋಚನೆ ಮಾಡಿ ಸ್ಕ್ರೀನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಯಶ್ ಹೇಳಿರುವಂತೆ ಸ್ಕ್ರಿಪ್ಟ್ ಫೈನಲ್ ಆಗಿದ್ದು, ಶೀಘ್ರದಲ್ಲಿಯೇ ಮಾಹಿತಿ ನೀಡುವುದಾಗಿ ಹೇಳಿದ್ದರು. ಈಗ 'ಕೆಜಿಎಫ್ 3' ಸುದ್ದಿ ಹೇಳಿಬರುತ್ತಿದೆ. 'ಯಶ್ 19' ಮುಗಿಸಿ ಆಮೇಲೆ 'ಕೆಜಿಎಫ್ 3' ಮಾಡುತ್ತಾರಾ? ಇಲ್ಲ 'ಕೆಜಿಎಫ್ 3' ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರಾ? ಅನ್ನೋ ಕುತೂಹಲವಿದೆ. ಸದ್ಯದ ಮಾಹಿತಿ ಪ್ರಕಾರ, ಯಶ್ 19 ಮುಗಿಯತ್ತಿದ್ದಂತೆ ಪ್ರಶಾಂತ್ ನೀಲ್ 'ಕೆಜಿಎಫ್ 3' ಸ್ಕ್ರಿಪ್ಟ್ ಮುಗಿಸುತ್ತಾರೆ. ತಕ್ಷಣವೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾರೂ ಅಧಿಕೃತ ಮಾಹಿತಿ ನೀಡಿಲ್ಲ.

More from Filmibeat

English summary
Prashanth Neel likely to start scripting for Yash's KGF 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X