ಸುದೀಪ್-ದರ್ಶನ್ ನಡುವಿನ ವಿರಸದ ಬೆಂಕಿಗೆ ಇಂದು ಬಿಸಿ ಬಿಸಿ ತುಪ್ಪ!

By ಹರಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸುದೀಪ್ ನಡುವೆ ಭಿನ್ನಮತ ಮೂಡಿದೆ ಅನ್ನೋದು ಇಂದು-ನಿನ್ನೆಯ ಮಾತಲ್ಲ ಬಿಡಿ. ಬರೋಬ್ಬರಿ ಒಂದು ವರ್ಷದ ಹಿಂದಿನ ಮಾತು!

ಅಂದು ಇದೇ ಮಾತನ್ನ ತಲೆಬುಡವಿಲ್ಲದ ಗಾಳಿ ಸುದ್ದಿ ಅಂತ ಬಹುತೇಕ ಮಂದಿ ಮೂಗು ಮುರಿದಿದ್ದರು. ಅದರಲ್ಲೂ 'ಕಿಚ್ಚ' ಸುದೀಪ್ ಮತ್ತು 'ದಾಸ' ದರ್ಶನ್ ಖುದ್ದು ಟ್ವೀಟ್ ಮಾಡಿದ್ಮೇಲಂತೂ 'ಆಪ್ತಮಿತ್ರ'ರು ದೂರವಾಗುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಅಭಿಮಾನಿಗಳು ಬಂದಿದ್ದರು.[ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?]

ಈಗ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ರನ್ನ ದರ್ಶನ್ unfollow ಮಾಡಿದ್ಮೇಲಂತೂ ಹಳೇ ಕಾಗಕ್ಕ-ಗುಬ್ಬಕ್ಕ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಅದು ಎಲ್ಲಿಯವರೆಗೂ ಹೋಗಿ ತಲುಪುತ್ತೋ ಗೊತ್ತಿಲ್ಲ.[ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್]

ಅದಕ್ಕೂ ಮುನ್ನ, ವರ್ಷದ ಹಿಂದೆ ಸುದೀಪ್ ಹಾಗೂ ದರ್ಶನ್ ಮಧ್ಯೆ ಬಿರುಕು ಮೂಡಿದೆ ಅಂತ ಹರಿದಾಡಿದ ಗಾಸಿಪ್ ವೃತ್ತಾಂತ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ಮುಖಾಮುಖಿ ಆಗ್ತಿರ್ಲಿಲ್ಲ!

ಮುಖಾಮುಖಿ ಆಗ್ತಿರ್ಲಿಲ್ಲ!

ಸುದೀಪ್ ಚಿತ್ರಗಳಿಗೆ ದರ್ಶನ್ ಭೇಟಿ ಕೊಡುವುದು, ದರ್ಶನ್ ಚಿತ್ರದ ಹಾಡುಗಳನ್ನು ಸುದೀಪ್ ರಿಲೀಸ್ ಮಾಡುವುದು ಒಂದ್ಕಾಲದಲ್ಲಿ ಮಾಮೂಲಾಗಿತ್ತು. ಆದ್ರೆ, ತದನಂತರದಲ್ಲಿ ಸುದೀಪ್ - ದರ್ಶನ್ ಮುಖಾಮುಖಿ ಆಗುವುದೇ ವಿರಳವಾಗ್ತಿದ್ದದ್ದು ಅಂತೆ-ಕಂತೆ ಪುರಾಣಗಳಿಗೆ ಕಾರಣವಾಯ್ತು.[ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ! ಯಾಕೆ?]

ಸಿಸಿಎಲ್ 5 ಜರ್ಸಿ ಲಾಂಚ್ ನಲ್ಲಿ ಆಗಿದ್ದು ಇದೇ!

ಸಿಸಿಎಲ್ 5 ಜರ್ಸಿ ಲಾಂಚ್ ನಲ್ಲಿ ಆಗಿದ್ದು ಇದೇ!

ಒಂದು ಟೈಮ್ ನಲ್ಲಿ ಸಿಸಿಎಲ್ ಮ್ಯಾಚ್ ಗಾಗಿ ಮೈದಾನದಲ್ಲಿ ಸುದೀಪ್-ದರ್ಶನ್ ಒಟ್ಟಿಗೆ ಬೆವರಿಳಿಸುತ್ತಿದ್ದರು. ಆದ್ರೆ ಸಿಸಿಎಲ್ 5 ಆವೃತ್ತಿಯ ಕರ್ನಾಟಕ ಬುಲ್ಡೋಜರ್ಸ್ ಜರ್ಸಿ ಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ತಡವಾಗಿ ಆಗಮಿಸಿದ್ದೂ ಕೂಡ ಗಾಸಿಪ್ ಗೆ ಎಡೆ ಮಾಡಿಕೊಡ್ತು.[ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

ರಾಜ್ ಸ್ಮರಣಾರ್ಥದಲ್ಲೂ ಇದೇ ಕಥೆ!

ರಾಜ್ ಸ್ಮರಣಾರ್ಥದಲ್ಲೂ ಇದೇ ಕಥೆ!

ಡಾ.ರಾಜ್ ಕುಮಾರ್ ಸ್ಮರಣಾರ್ಥ ನಡೆದ ಮನರಂಜನಾ ಸಮಾರಂಭದಲ್ಲಿ ಒಂದೇ ಹಾಡಿಗೆ ಇಬ್ಬರೂ ಹೆಜ್ಜೆ ಹಾಕ್ಬೇಕಾದರೂ, ಸುದೀಪ್-ದರ್ಶನ್ ವೇದಿಕೆ ಮೇಲೆ ಒಟ್ಟಿಗೆ ಬರಲಿಲ್ಲ. ಡ್ಯಾನ್ಸ್ ಅಂತೂ ಮಾಡಲೇ ಇಲ್ಲ. ಹಾಡು ಶುರುವಾದಾಗ ಸುದೀಪ್ ಬಂದು ಕೈಬೀಸಿ ಹೋದರೆ, ಹಾಡಿನ ಕೊನೆಕೊನೆಯಲ್ಲಿ ಬುಲೆಟ್ ಪ್ರಕಾಶ್ ಜೊತೆಗೆ ದರ್ಶನ್ ಎಂಟ್ರಿಕೊಟ್ಟಿದ್ದು ಗಾಸಿಪ್ ಪಂಡಿತರ ಬಾಯಿಗೆ ಲಡ್ಡು ಬಿದ್ದಂಗಾಯ್ತು.

ಪತ್ರಿಕೆಗಳಲ್ಲಿ ವರದಿ ಆಯ್ತು!

ಪತ್ರಿಕೆಗಳಲ್ಲಿ ವರದಿ ಆಯ್ತು!

ಸುದೀಪ್ ಹಾಗೂ ದರ್ಶನ್ ನಡುವೆ ಗೆಳೆತನ ಮುಗಿದ ಅಧ್ಯಾಯ ಅಂತ ಕೆಲ ಪತ್ರಿಕೆಗಳೂ ವರದಿ ಮಾಡಿದ್ದವು. ಅದನ್ನ ಓದಿ ಸುದೀಪ್-ದರ್ಶನ್ ಟ್ವಿಟ್ಟರ್ ನಲ್ಲಿ ಸಂದೇಶ ನೀಡಿದ್ದರು.

ಸುದೀಪ್ ಟ್ವೀಟ್

''ನಾನು ಮತ್ತು ದರ್ಶನ್ ಯಾವತ್ತಿಗೂ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ಬ್ಯೂಸಿಯಾಗಿರುವುದರಿಂದ ಜೊತೆಯಾಗಿ ಕಾಣಿಸಲು ಆಗಲಿಲ್ಲ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು'' ಅಂತ ಸುದೀಪ್ ಟ್ವೀಟ್ ಮಾಡಿದ್ದರು.

ದರ್ಶನ್ ಟ್ವೀಟ್

''ನಮ್ಮಿಬ್ಬರ ನಡುವೆ ಸರಿಯಿಲ್ಲ ಎನ್ನುವುದು ಶುದ್ಧ ಸುಳ್ಳು ಸುದ್ದಿ. ವಿಷಯ ಸರಿಯಾಗಿ ಅರಿಯದೇ ಇಂತಹ ಸುದ್ದಿಯನ್ನು ಹರಡಬೇಡಿ'' ಅಂತ ದರ್ಶನ್ ಕೂಡ ಟ್ವೀಟ್ ಮಾಡಿದ್ದರು.

'ರಾಟೆ' ಆಡಿಯೋ ರಿಲೀಸ್ ನಲ್ಲಿ ಒಂದಾಗಿದ್ದರು!

'ರಾಟೆ' ಆಡಿಯೋ ರಿಲೀಸ್ ನಲ್ಲಿ ಒಂದಾಗಿದ್ದರು!

ಎಲ್ಲಾ ಗಾಸಿಪ್ ಪಂಡಿತರ ಬಾಯಿಗೆ ಟ್ವೀಟ್ ಮೂಲಕ ಬೀಗ ಜಡಿದ ಮೇಲೆ 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಸುದೀಪ್-ದರ್ಶನ್ ಕಾಣಿಸಿಕೊಂಡಿದ್ದರು.

ಅಂದು ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಫಾಲೋ ಮಾಡ್ತಿದ್ದರು!

ಅಂದು ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಫಾಲೋ ಮಾಡ್ತಿದ್ದರು!

ಆಗ ಟ್ವಿಟ್ಟರ್ ನಲ್ಲಿ ಸುದೀಪ್ ರನ್ನ ದರ್ಶನ್, ದರ್ಶನ್ ರನ್ನ ಸುದೀಪ್ ಪರಸ್ಪರ ಫಾಲೋ ಮಾಡುತ್ತಿದ್ದರು. ಈಗ ಏಕಾಏಕಿ ಸುದೀಪ್ ರನ್ನ ದರ್ಶನ್ unfollow ಮಾಡಿದ್ದಾರೆ. ಹೀಗಾಗಿ ಅದೇ ಹಳೇ ಗಾಳಿಸುದ್ದಿಗೆ ಈಗ ರೆಕ್ಕೆ ಬಂದ ಹಾಗಾಗಿದೆ.

ಇನ್ನಾದರೂ ಸ್ಪಷ್ಟನೆ ನೀಡಲಿ!

ಇನ್ನಾದರೂ ಸ್ಪಷ್ಟನೆ ನೀಡಲಿ!

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಎದ್ದಿರುವ ಬಿರುಗಾಳಿ ತಣ್ಣಗೆ ಆಗ್ಬೇಕು ಅಂದ್ರೆ ಕಿಚ್ಚ ಸುದೀಪ್ ಮತ್ತು ದರ್ಶನ್ ಸ್ಪಷ್ಟನೆ ನೀಡಬೇಕು.

ಒಟ್ಟಾಗಿರುವುದೇ ಎಲ್ಲರ ಆಶಯ

ಒಟ್ಟಾಗಿರುವುದೇ ಎಲ್ಲರ ಆಶಯ

ಕುಚ್ಚಿಕ್ಕು ಗೆಳೆಯರಂತೆ ಸದಾ ಕಾಲ ದರ್ಶನ್ ಮತ್ತು ಸುದೀಪ್ ಇರಲಿ ಅನ್ನೋದು ಇಬ್ಬರ ಅಭಿಮಾನಿ ಬಳಗದ ಆಶಯ.

More from Filmibeat

English summary
Challenging Star Darshan has unfollowed Sudeep in Twitter leading to the speculation that all is not well between the close friends. Here is the complete report on the Gossip History about Darshan and Kiccha Sudeep rift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X