For Quick Alerts
  ALLOW NOTIFICATIONS  
  For Daily Alerts

  ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?

  By ಹರಾ
  |

  'ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು' ಎನ್ನುವಂತೆ, ಕಥೆ ರೆಡಿ ಆಗುವ ಮೊದಲೇ ಗಾಂಧಿನಗರದಲ್ಲಿ ಸಿನಿಮಾ ವಿಷಯವಾಗಿ ಅಬ್ಬರದ ಪ್ರಚಾರ ಗಿಟ್ಟಿಸಿಕೊಳ್ಳುವ ನಿರ್ದೇಶಕ 'ಜೋಗಿ' ಪ್ರೇಮ್ ಈಗ ಮತ್ತೆ ನಮ್ಮ ಗಾಸಿಪ್ ಕಾಲಂನ ಸ್ಪೆಷಲ್ ಗೆಸ್ಟ್.

  ಹೇಳಿ ಕೇಳಿ, ಗಿಮಿಕ್ ಮಾಡುವುದರಲ್ಲಿ ಡೈರೆಕ್ಟರ್ ಪ್ರೇಮ್ ಎಕ್ಸ್ ಪರ್ಟ್. ಸಿನಿಮಾ ಕಥೆ ಸಪ್ಪೆ ಆಗಿದ್ದರೂ, ಅದಕ್ಕೆ ಮಸಾಲೆ, ಒಗ್ಗರಣೆ ಚೆನ್ನಾಗಿ ಹಾಕಿ, ಕಲರ್ ಫುಲ್ ಆಗಿ ರೆಡಿ ಮಾಡಿ, ಸಿನಿ ಪ್ರಿಯರ ಮುಂದೆ ಇಡುವ ಚಾಣಾಕ್ಷ ಪ್ರೇಮ್.

  ಹೀಗಿರುವಾಗ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಮಧ್ಯೆ ಭಿನ್ನಾಭಿಪ್ರಾಯ ಇದೆ ಅಂತ ಫೇಸ್ ಬುಕ್ ಗೋಡೆಗಳ ಮೇಲೆ ಅಭಿಮಾನಿಗಳು ಬೆರಣಿ ತಟ್ಟುತ್ತಿದ್ರೆ, ಅದೇ ಇಬ್ಬರು ಸ್ಟಾರ್ ನಟರನ್ನ ಸಿನಿಮಾ ಮೂಲಕ ಒಂದುಗೂಡಿಸುವ ಸೂಪರ್ ಸುಪ್ರೀಂ ಐಡಿಯಾ ಪ್ರೇಮ್ ಗೆ ಹೊಳೆಯಿತು. [ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!]

  ಕಥೆ ರೆಡಿ ಮಾಡಿಕೊಳ್ಳುವ ಮುನ್ನವೇ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ, ಸಿಎಂ ಸಿದ್ದರಾಮಯ್ಯ ಕೈಯಲ್ಲಿ ಶಿವಣ್ಣ, ಸುದೀಪ್ ಜೊತೆಯಾಗಿ ನಟಿಸುವ ಚಿತ್ರಕ್ಕೆ 'ಕಲಿ' ಶೀರ್ಷಿಕೆ ಬಿಡುಗಡೆ ಮಾಡಿಸಿದರು. ಎಲ್ಲೆಲ್ಲೂ, 'ಕಲಿ' ಬಗ್ಗೆ ಮಾತುಕತೆ ಜೋರಾಗಿರುವಾಗಲೇ, ಈಗ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಹೆಚ್ಚಿನ ಮಾಹಿತಿ ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

  ಮೊದಲು ಕುಣಿದು ಕುಪ್ಪಳಿಸಿದ ಅಭಿಮಾನಿಗಳು.!

  ಮೊದಲು ಕುಣಿದು ಕುಪ್ಪಳಿಸಿದ ಅಭಿಮಾನಿಗಳು.!

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಜಗಜ್ಜಾಹೀರಾದಾಗ, ಸಂತಸದಿಂದ ಕುಣಿದು ಕುಪ್ಪಳಿಸಿದ ಅಭಿಮಾನಿಗಳ ಸಂಖ್ಯೆ ಅದೆಷ್ಟೋ. ಈಗ ಅಷ್ಟೂ ಅಭಿಮಾನಿಗಳ ಆಸೆಗೆ ಬಕೆಟ್ ತಣ್ಣೀರು ಎರಚುವ ಸುದ್ದಿ ಹೊರಬಿದ್ದಿದೆ.

  ಆ ಶಾಕಿಂಗ್ ನ್ಯೂಸ್ ಏನು.?

  ಆ ಶಾಕಿಂಗ್ ನ್ಯೂಸ್ ಏನು.?

  ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಬಹು ನಿರೀಕ್ಷಿತ 'ಕಲಿ' ಸಿನಿಮಾ ನಿಂತು ಹೋಗಿದೆ..!

  'ಕಲಿ' ನಿಲ್ಲಲು ಕಾರಣ.?

  'ಕಲಿ' ನಿಲ್ಲಲು ಕಾರಣ.?

  ಅಷ್ಟಕ್ಕೂ 'ಕಲಿ' ಶೀರ್ಷಿಕೆ ಬಿಡುಗಡೆ ಆಗಿದ್ದು ಕಳೆದ ವರ್ಷ. ಆದರೂ, 'ಕಲಿ' ಚಿತ್ರ ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲೇ ಇದೆ. 'ಕಲಿ' ಚಿತ್ರ ಡ್ರಾಪ್ ಆಗಲು ನಿಧಾನಗತಿಯೇ ಕಾರಣವಾಯ್ತಾ.? ಉತ್ತರ ಸ್ಪಷ್ಟವಿಲ್ಲ.!

  ಗ್ರಾಫಿಕ್ಸ್ ಬಳಕೆ ಹೆಚ್ಚು.!

  ಗ್ರಾಫಿಕ್ಸ್ ಬಳಕೆ ಹೆಚ್ಚು.!

  ಮೂಲಗಳ ಪ್ರಕಾರ, 'ಕಲಿ' ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಕೆ ಹೆಚ್ಚಿದೆ. ಅದರಿಂದ ಸಮಯ ಕೂಡ ಹೆಚ್ಚು ಹಿಡಿಯುತ್ತಿದೆ. [ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

  ಕಾಲ್ ಶೀಟ್ ಸಿಕ್ಕಲ್ಲ.!

  ಕಾಲ್ ಶೀಟ್ ಸಿಕ್ಕಲ್ಲ.!

  ತಾಂತ್ರಿಕ ಕಾರಣಗಳನ್ನ ನೋಡುತ್ತಾ ಹೋದರೆ, ಶಿವರಾಜ್ ಕುಮಾರ್ ಹಾಗೂ ಸುದೀಪ್ ರವರ ಕಾಲ್ ಶೀಟ್ ಒಟ್ಟಿಗೆ ಸಿಕ್ಕಲ್ಲ.

  ಶಿವರಾಜ್ ಕುಮಾರ್ ಇನ್ನೂ ಐದು ವರ್ಷ ಬಿಜಿ.!

  ಶಿವರಾಜ್ ಕುಮಾರ್ ಇನ್ನೂ ಐದು ವರ್ಷ ಬಿಜಿ.!

  ಸದ್ಯ 'ಶ್ರೀಕಂಠ' ಚಿತ್ರದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಬಿಜಿಯಾಗಿದ್ದಾರೆ. ಅದು ಮುಗಿದ ಮೇಲೆ, ಶಿವಣ್ಣನ ಕೈಯಲ್ಲಿ 'ಟಗರು', 'ಬಂಗಾರ S/O ಬಂಗಾರದ ಮನುಷ್ಯ', 'ರಾಬಿನ್ ಹುಡ್', 'ಶಿವಲಿಂಗ - 2', 'ಖದರ್', 'ಮೈ ನೇಮ್ ಈಸ್ ಆಂಜಿ' ಸೇರಿದಂತೆ ಇನ್ನೂ ಸಾಲು ಸಾಲು ಚಿತ್ರಗಳಿವೆ.

  ಸುದೀಪ್ ಕೂಡ ಅಷ್ಟೇ.!

  ಸುದೀಪ್ ಕೂಡ ಅಷ್ಟೇ.!

  'ಮುಕುಂದ ಮುರಾರಿ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸುದೀಪ್ ಕೈಯಲ್ಲಿ ಸದ್ಯ 'ಹೆಬ್ಬುಲಿ' ಚಿತ್ರ ಇದೆ.

  ಅನಿವಾರ್ಯ ಕಾರಣಗಳಿಂದ ಡ್ರಾಪ್.!

  ಅನಿವಾರ್ಯ ಕಾರಣಗಳಿಂದ ಡ್ರಾಪ್.!

  'ಕಲಿ' ಚಿತ್ರಕ್ಕಾಗಿ ನಿರ್ಮಾಪಕ ಸಿ.ಆರ್.ಮನೋಹರ್ ಬರೋಬ್ಬರಿ ನೂರು ಕೋಟಿ ಸುರಿಯಲು ತಯಾರಿದ್ದರು. ವರ್ಷ ಕಳೆದರೂ, ಸಿನಿಮಾ ಸೆಟ್ಟೇರಿಲ್ಲ ಎನ್ನುವ ಬೇಸರ ನಿರ್ಮಾಪಕರಿಗೂ ಇದೆ.

  ಕೊಟ್ಟ ಬಿಲ್ಡಪ್ ಅಷ್ಟಿಷ್ಟಲ್ಲ.!

  ಕೊಟ್ಟ ಬಿಲ್ಡಪ್ ಅಷ್ಟಿಷ್ಟಲ್ಲ.!

  'ಕಲಿ' ಚಿತ್ರದಲ್ಲಿ ಶಿವಣ್ಣ, ಸುದೀಪ್ ಜೊತೆ ದಕ್ಷಿಣ ಭಾರತದ ಖ್ಯಾತ ತಾರೆಯರು ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

  ನಾಯಕಿಯರ ವಿಚಾರದಲ್ಲೂ ಅಷ್ಟೇ.!

  ನಾಯಕಿಯರ ವಿಚಾರದಲ್ಲೂ ಅಷ್ಟೇ.!

  'ಕಲಿ' ಚಿತ್ರದಲ್ಲಿ ಶಿವಣ್ಣ ಹಾಗೂ ಸುದೀಪ್ ಗೆ ನಾಯಕಿ ಆಗಲು ಕಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ, ನಯನತಾರಾ ಜೊತೆ ಮಾತುಕತೆ ನಡೆಯುತ್ತಿದೆ ಎಂಬ ಬಗ್ಗೆ ಕೂಡ ಗುಲ್ಲೆದ್ದಿತ್ತು. [ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿಯರು ಯಾರು?]

  ಆರು ಸಂಗೀತ ನಿರ್ದೇಶಕರು.!

  ಆರು ಸಂಗೀತ ನಿರ್ದೇಶಕರು.!

  'ಕಲಿ' ಚಿತ್ರಕ್ಕೆ ಹಂಸಲೇಖ, ಸಾಧು ಕೋಕಿಲ, ಗುರುಕಿರಣ್, ವಿ.ಹರಿಕೃಷ್ಣ, ಅರ್ಜುನ್ ಜನ್ಯ, ಅನೂಪ್ ಸೀಳಿನ್ ಸೇರಿದಂತೆ ಒಟ್ಟು ಆರು ಜನ ಸಂಗೀತ ನಿರ್ದೇಶಕರು ಸಂಗೀತ ನೀಡುತ್ತಿರುವುದರ ಬಗ್ಗೆ ವರದಿ ಆಗಿತ್ತು.

  ಪ್ರೇಮ್ ಮಂತ್ರಾಲಯಕ್ಕೂ ಹೋಗಿ ಬಂದಿದ್ರು.!

  ಪ್ರೇಮ್ ಮಂತ್ರಾಲಯಕ್ಕೂ ಹೋಗಿ ಬಂದಿದ್ರು.!

  'ಕಲಿ' ಸಿನಿಮಾ ಶುರು ಮಾಡುವ ಮುನ್ನ ನಿರ್ದೇಶಕ ಪ್ರೇಮ್ 'ಮಂತ್ರಾಲಯ'ಕ್ಕೆ ಹೋಗಿ ಪೂಜೆ ಮಾಡಿಸಿ ಬಂದಿದ್ದರು. ['ಕಲಿ'ಗೆ ಪೂಜೆ ಆಯ್ತು ಇನ್ನು ಶೂಟಿಂಗ್ ಹಬ್ಬ ಶುರು ಕಣ್ರೀ]

  ಎಲ್ಲಾ ಆದರೂ, ಪ್ರಾಜೆಕ್ಟ್ ಡ್ರಾಪ್.!

  ಎಲ್ಲಾ ಆದರೂ, ಪ್ರಾಜೆಕ್ಟ್ ಡ್ರಾಪ್.!

  ಇಷ್ಟೆಲ್ಲಾ ಆದರೂ, ಸದ್ಯ ಹಬ್ಬಿರುವ ಸುದ್ದಿ ಪ್ರಕಾರ 'ಕಲಿ' ಸಿನಿಮಾ ಸ್ಟಾಪ್ ಆಗಿದೆ.

  ನಿರ್ಮಾಪಕ ಸಿ.ಆರ್.ಮನೋಹರ್ ಏನಂತಾರೆ?

  ನಿರ್ಮಾಪಕ ಸಿ.ಆರ್.ಮನೋಹರ್ ಏನಂತಾರೆ?

  'ಕಲಿ' ಚಿತ್ರ ಡ್ರಾಪ್ ಆಗಿರುವ ಕುರಿತಾಗಿ ನಿರ್ಮಾಪಕ ಸಿ.ಆರ್.ಮನೋಹರ್ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ್ದಾರೆ. ಆ ವರದಿ ಇಲ್ಲಿದೆ ನೋಡಿ...ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್

  English summary
  According to the Grapevine, Kannada Actor Shiva Rajkumar and Kiccha Sudeep starrer Kannada Film 'Kali' is shelved. 'Jogi' Prem was supposed to direct this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X